ಸಾರಾಂಶ
ನುಗ್ಗೇಹಳ್ಳಿ ಹೋಬಳಿ ವೀರಶೈವ ಸೇವಾ ಸಮಿತಿ ಹಾಗೂ ಗ್ರಾಮದ ವೀರಶೈವ ಸಮಾಜದ ವತಿಯಿಂದ ಬಸವಣ್ಣನ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲಾಯಿತು.
ಬಸವಣ್ಣನಿಗೆ ವಿಶೇಷ ಪೂಜೆ, ಹೂವಿನ ಅಲಂಕಾರ । ರಾಜಬೀದಿಗಳಲ್ಲಿ ಉತ್ಸವ । ಹಸು, ಕರುಗಳಿಗೆ ರೈತರಿಂದ ವಿಶೇಷ ಆತಿಥ್ಯ
ಕನ್ನಡಪ್ರಭ ವಾರ್ತೆ ನುಗ್ಗೇಹಳ್ಳಿಹೋಬಳಿ ವೀರಶೈವ ಸೇವಾ ಸಮಿತಿ ಹಾಗೂ ಗ್ರಾಮದ ವೀರಶೈವ ಸಮಾಜದ ವತಿಯಿಂದ ಬಸವ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲಾಯಿತು.
ಗ್ರಾಮದ ಪೇಟೆ ಬೀದಿ ಸಂಕೋಲೆ ಬಸವಣ್ಣ ದೇವಾಲಯದಲ್ಲಿ ಬಸವ ಜಯಂತಿ ಅಂಗವಾಗಿ ಬೆಳಿಗ್ಗೆಯಿಂದಲೇ ದೇವರಿಗೆ ವಿಶೇಷ ಪೂಜೆ ಅಭಿಷೇಕ ಹೂವಿನ ಅಲಂಕಾರ ಸೇರಿದಂತೆ ವಿವಿಧ ಪೂಜೆಗಳು ನಡೆದವು. ನಂತರ ದೇವಾಲಯದ ಮುಂಭಾಗ ಶ್ರೀ ಬಸವೇಶ್ವರ ಸ್ವಾಮಿ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ಮಂಗಳವಾದ್ಯದೊಂದಿಗೆ ಗ್ರಾಮದ ರಾಜಬೀದಿಗಳಲ್ಲಿ ಉತ್ಸವ ನಡೆಸಲಾಯಿತು.ಹಿರೀಸಾವೆ ರಸ್ತೆಯಲ್ಲಿರುವ ಪುರಾಣ ಪ್ರಸಿದ್ಧ ಶ್ರೀ ಕಾಡುಬಸವೇಶ್ವರ ಸ್ವಾಮಿ ದೇವಾಲಯದಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ನಂತರ ಗ್ರಾಮದ ಅರೇಕಲ್ಲಮ್ಮ ದೇವಾಲಯದ ಬಸವಣ್ಣನಿಗೆ ಪೂಜೆ ಸಲ್ಲಿಸಿ ನೈವೇದ್ಯ ಅರ್ಪಿಸಲಾಯಿತು. ಬಸವ ಜಯಂತಿ ಅಂಗವಾಗಿ ರೈತರು ತಾವು ಸಾಕಿರುವ ಹೊಸ ಕರುಗಳನ್ನು ತೊಳೆದು ಹರಿಶಿಣ ಕುಂಕುಮ ಹಚ್ಚಿ ಹೂವು ಹಾಗೂ ನೈವೇದ್ಯವನ್ನು ಸಮರ್ಪಿಸಿ ಭಕ್ತಿಯಿಂದ ಪೂಜೆ ಸಲ್ಲಿಸಿದರು. ವೀರಶೈವ ಸೇವಾ ಸಮಿತಿ ವತಿಯಿಂದ ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಿದ್ದರು.
ಪೂಜಾ ಕಾರ್ಯಕ್ರಮದಲ್ಲಿ ಹೋಬಳಿ ವೀರಶೈವ ಸೇವಾ ಸಮಿತಿ ಅಧ್ಯಕ್ಷ ಎನ್ಎಸ್ ಗಿರೀಶ್, ಉಪಾಧ್ಯಕ್ಷ ಕೃಪಾ ಶಂಕರ್, ಖಜಾಂಚಿ ಪೊಲೀಸ್ ಕುಮಾರಸ್ವಾಮಿ, ಪ್ರಮುಖರಾದ ವಿಶ್ವನಾಥ್, ಜೈ ಕೀರ್ತಿ, ಎನ್.ಸಿ.ಕುಮಾರಸ್ವಾಮಿ, ಎನ್.ಸಿ.ಉಮೇಶ್, ಎನ್.ಆರ್.ತೇಜು, ಎನ್.ಆರ್.ಗಣೇಶ್, ಎನ್.ಎಂ. ಮಹೇಶ್, ಎನ್.ಆರ್. ಆನಂದ್, ಎನ್.ಎನ್.ರುದ್ರಸ್ವಾಮಿ, ಲೋಕೇಶ್, ಹರೀಶ್, ತ್ರಿಣೇಶ್, ಎನ್.ಎನ್.ಮನೋಹರ್, ಎನ್.ಸಿ. ರೇಣುಕಸ್ವಾಮಿ, ಎನ್.ಆರ್.ಪ್ರದೀಪ್, ಕೊಟ್ರೇಶ್, ಕಲ್ಲಮ್ಮ, ಪ್ರವೀಣ್, ಪೊಲೀಸ್ ನಾರಾಯಣಗೌಡ, ಸೇರಿ ಗ್ರಾಮದ ವೀರಶೈವ ಸಮಾಜದ ಬಂಧುಗಳು ಹಾಗೂ ಗ್ರಾಮಸ್ಥರು ಹಾಜರಿದ್ದರು.