ತರೀಕೆರೆ: ಗಣೇಶಮೂರ್ತಿ ತರಲು ತೆರಳುತ್ತಿದ್ದ ಟಾಟಾ ಏಸ್‌ ವಾಹನ ಪಲ್ಟಿಯಾಗಿ ಇಬ್ಬರು ಯುವಕರು ಸಾವನ್ನಪ್ಪಿರುವ ಘಟನೆ ಶನಿವಾರ ಬೆಳಿಗ್ಗೆ ದೋರನಾಳು ಸಮೀಪ ಬೈರಾಪುರ ಗೇಟ್ ಬಳಿ ನಡೆದಿದೆ.

ತರೀಕೆರೆ: ಗಣೇಶಮೂರ್ತಿ ತರಲು ತೆರಳುತ್ತಿದ್ದ ಟಾಟಾ ಏಸ್‌ ವಾಹನ ಪಲ್ಟಿಯಾಗಿ ಇಬ್ಬರು ಯುವಕರು ಸಾವನ್ನಪ್ಪಿರುವ ಘಟನೆ ಶನಿವಾರ ಬೆಳಿಗ್ಗೆ ದೋರನಾಳು ಸಮೀಪ ಬೈರಾಪುರ ಗೇಟ್ ಬಳಿ ನಡೆದಿದೆ.

ಲಿಂಗದಹಳ್ಳಿಯ ಸಹ್ಯಾದ್ರಿಪುರ ನಿವಾಸಿಗಳಾದ ಧನುಷ್‌ ದೇವಾಂಗ (20) ಶ್ರೀಧರ್ (19) ಮೃತ ಯುವಕರು.ಟಾಟಾ ಏಸ್ ವಾಹನದಲ್ಲಿ ಶನಿವಾರ ಬೆಳಿಗ್ಗೆ ಲಿಂಗದಹಳ್ಳಿಯಿಂದ ತರೀಕೆರೆ ಪಟ್ಟಣಕ್ಕೆ ಬರುತ್ತಿದ್ದರು. ಬೈರಾಪುರ ಗೇಟ್ ಬಳಿ ವಾಹನ ಪಲ್ಟಿಯಾದ ಕಾರಣ ಈ ಅವಘಡ ಸಂಭವಿಸಿದೆ. ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಮನೋಜ್ ಗಂಭೀರ ಗಾಯ ಗೊಂಡಿದ್ದು, ಶಿವಮೊಗ್ಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಾಹನದಲ್ಲಿದ್ದ ಮಂಜು, ವರುಣ, ಗುರುಮೂರ್ತಿ, ಚಂದ್ರಶೇಖರ, ಸಂದೀಪ ಎಂಬುವವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಲಿಂಗದಹಳ್ಳಿ ಪಿಎಸ್‌ಐ ಶಶಿಕುಮಾರ್ ತಿಳಿಸಿದ್ದಾರೆ.

ಫೋಟೋ ಇದೆಃ 8ಕೆಟಿಆರ್.ಕೆ.8ಃ 8ಕೆಟಿಆರ್.ಕೆ9ಃ ಮೃತ ಯುವಕರಾದ ಧನುಷ್‌ದೇವಾಂಗ ಮತ್ತು ಶ್ರೀಧರ್.