ಸಾರಾಂಶ
ಸಾಮಾನ್ಯವಾಗಿ ವಚನದ ಬಗ್ಗೆ ಹೇಳುವಾಗ ಪ್ರಮುಖವಾಗಿ ತಕ್ಷಣ ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭು ಅವರ ಹೆಸರುಗಳು ಕೇಳಿ ಬರುತ್ತವೆ. ಸಾಕಷ್ಟು ಮಹಿಳೆಯರು ಶರಣ ಸಾಹಿತ್ಯಕ್ಕೆ ಕೊಡುಗೆ ನೀಡಿದ್ದಾರೆ. ಅನಿಕೇತನ ಕನ್ನಡ ಬಳಗವು ಹಮ್ಮಿಕೊಂಡಿರುವ ಕಾರ್ಯಕ್ರಮಗಳು ಮೌಲ್ಯದಿಂದ ಕೂಡಿರುತ್ತವೆ
ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಬದುಕನ್ನು ಒಪ್ಪಿಕೊಂಡು ಸಂಸಾರ ಮತ್ತು ಅಧ್ಯಾತ್ಮ ಎರಡನ್ನೂ ಅಪ್ಪಿಕೊಂಡು ಸೊಗಸಾದ ಬದುಕನ್ನು ಹೇಗೆ ಸಾಗಿಸಬೇಕೆಂದು ಮಹಿಳೆಯರು ತೋರಿಸಿಕೊಟ್ಟಿದ್ದಾರೆಂದು ಡಾಃಸಿ.ಎ.ರಮೇಶ್ ಹೇಳಿದರು. ಪಟ್ಟಣದ ಎಸ್.ಡಿ.ಸಿ ಕಾಲೇಜಿನ ಡಾ.ಡಿವಿಜಿ ಸಭಾಂಗಣದಲ್ಲಿ ಬಂಗಾರಪೇಟೆ ತಾಲೂಕು ಅನಿಕೇತನ ಕನ್ನಡ ಬಳಗ ಹಾಗೂ ತಾಲೂಕು ಕದಳಿ ವೇದಿಕೆ ಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ವಚನ ಸಾಹಿತ್ಯದಲ್ಲಿ ಮಹಿಳೆಯರ ಕೊಡುಗೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.ಸಾಹಿತ್ಯಕ್ಕೆ ಮಹಿಳೆಯರ ಕೊಡಗೆ
ಎಸ್‌ಡಿಸಿ ಕಾಲೇಜಿನ ಸಂಸ್ಥಾಪಕರು ಆದ ಉಷಾ ಗಂಗಾಧರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಾಮಾನ್ಯವಾಗಿ ವಚನದ ಬಗ್ಗೆ ಹೇಳುವಾಗ ಪ್ರಮುಖವಾಗಿ ತಕ್ಷಣ ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭು ಅವರ ಹೆಸರುಗಳು ಕೇಳಿ ಬರುತ್ತವೆ. ಸಾಕಷ್ಟು ಮಹಿಳೆಯರು ಶರಣ ಸಾಹಿತ್ಯಕ್ಕೆ ಕೊಡುಗೆ ನೀಡಿದ್ದಾರೆ. ಅನಿಕೇತನ ಕನ್ನಡ ಬಳಗವು ಹಮ್ಮಿಕೊಂಡಿರುವ ಕಾರ್ಯಕ್ರಮಗಳು ಮೌಲ್ಯದಿಂದ ಕೂಡಿರುತ್ತವೆ ಎಂದು ತಿಳಿಸಿದರು.ಕ್ಷೇತ್ರ ಶಿಕ್ಷಣ ಅಧಿಕಾರಿ ಗುರುಮೂರ್ತಿ ಮಾತನಾಡಿ ಎಲ್ಲ ಕಾಲಕ್ಕೂ ವಚನಗಳು ಹೆಚ್ಚು ಪ್ರಭಾವಶಾಲಿಯಾಗಿವೆ. ಸರಳ ಶೈಲಿಯ ರಚನೆಗಳು ಎಲ್ಲರಿಗೂ ಅರ್ಥವಾಗುತ್ತದೆ ಎಂದರಲ್ಲದೆ ಅವರವರ ಭಾವಕ್ಕೆ ಅವರವರ ಭಕುತಿಗೆ ತಕ್ಕಂತೆ ನಮ್ಮ ಅನುಭವಗಳು ಪರಿಪಕ್ವತೆ ಹೊಂದಬೇಕು. ವಚನಗಳು ಸಮಾಜಕ್ಕೆ ಸಂದೇಶ ನೀಡಬಲ್ಲ ಮಹತ್ವದ ಕೆಲಸ ಮಾಡುತ್ತಿವೆ ಎಂದರು. ವಚನಗಳು ಎಲ್ಲರಿಗೂ ಸಲ್ಲುತ್ತವೆ
ಅಧ್ಯಕ್ಷತೆವಹಿಸಿದ್ದ ಅನಿಕೇತನ ಕನ್ನಡ ಬಳಗದ ಎಂಎಸ್ ರಾಮಪ್ರಸಾದ್ ರವರು ವಚನಗಳು ಇಂದಿಗೂ ಸಾಮಾಜಿಕ ಸಮಾನತೆಯನ್ನು, ಕಳಕಳಿಯನ್ನು, ಸಾರುತ್ತಿವೆ. ವಚನಗಳು ಒಂದು ಗುಂಪಿಗೆ ಸೇರದೆ ಎಲ್ಲರಿಗೂ ಸಲ್ಲಬೇಕು. ಕನ್ನಡ ಸಾಹಿತ್ಯದಲ್ಲಿ ವಚನ ಸಾಹಿತ್ಯವು ತನ್ನದೇ ಆದ ಸ್ಥಾನವನ್ನು ಪಡೆದಿದೆ ಎಂದರು. ಪ್ರಹ್ಲಾದ ರಾವ್, ಅಶೋಕ್ ಲೋಣಿ, ಬಾಹ ಶೇಖರಪ್ಪ, ವಿ.ಎಸ್. ಚಂದ್ರಶೇಖರ್, ರಾಮು, ನಾಗರತ್ನ,ಮೈ ಸತೀಶ್ ಕುಮಾರ್ ಇತರರು ಇದ್ದರು.