ಸಾರಾಂಶ
ಬಸವಕಲ್ಯಾಣ ಪರತಾಪೂರ್, ಮೋರ್ಖಂಡಿ ಹಾಗೂ ಘೋಟಾಳ ಗ್ರಾಮಗಳಲ್ಲಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕಾಂಗ್ರೆಸ್ ಬೆಂಬಲಿಸಿ ಎಂದು ಎಂಎಲ್‌ಸಿ ವಿಜಯ್ ಸಿಂಗ್ ಅವರು ಮತಯಾಚಿಸಿದರು.
ಕನ್ನಡಪ್ರಭ ವಾರ್ತೆ ಬಸವಕಲ್ಯಾಣ
ತಾಲೂಕಿನ ಪರತಾಪೂರ್, ಮೋರ್ಖಂಡಿ ಹಾಗೂ ಘೋಟಾಳ ಗ್ರಾಮಗಳಲ್ಲಿ ವಿಜಯ್ ಸಿಂಗ್ ಅವರು ಮತಯಾಚಿಸಿ ಕಾಂಗ್ರೆಸ್ ಅಭ್ಯರ್ಥಿಯಾದ ಸಾಗರ್ ಖಂಡ್ರೆ ಅವರನ್ನು ತಾಲೂಕಿನ ಜನತೆ ಪ್ರಚಂಡ ಬಹುಮತದಿಂದ ಗೆಲ್ಲಿಸುವ ಮೂಲಕ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕಾಂಗ್ರೆಸ್ ಬೆಂಬಲಿಸುವಂತೆ ಎಲ್ಲರಲ್ಲಿ ಮನವಿ ಮಾಡಿದರು.ಕಾಂಗ್ರೆಸ್ ಪಕ್ಷದ ಬೀದರ್ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾದ ಸಾಗರ್ ಖಂಡ್ರೆ ಮಾತನಾಡಿ, ಬಸವಕಲ್ಯಾಣ ಮತಕ್ಷೇತ್ರದ ಜನತೆ ಕಾಂಗ್ರೆಸ್ ಗ್ಯಾರಂಟಿಗಳಿಂದ ಲಾಭ ಪಡೆದಿದ್ದು, ಅವರ ಜೀವನ ಸುಖಮಯವಾದ ಕಾರಣ ಅವರು ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಮತ ನೀಡುವ ಮೂಲಕ ಗೆಲ್ಲಿಸುವ ಭರವಸೆ ನನಗೆ ಇದೆ ಎಂದು ಹೇಳಿದರು.
ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನೀಲಕಂಠ ರಾಠೋಡ್, ಭಾಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಣಮಂತ ಚವ್ಹಾಣ, ಪರತಾಪುರ್ ರಾಜೇಶ್ ಮೇತ್ರೆ, ಬಾಲಾಜಿ ಕಾಂಬಳೆ, ಬಸವರಾಜ್ ಮಹಾಜನ್, ಸತೀಶ್ ಮೇತ್ರೆ, ನವಾಜ್, ರವಿ ಬೇಲೂರೆ, ನಾಗೇಶ್ ಕಾಂಬಳೆ, ಮೊರಖಂಡಿಯ ಸಂದೀಪ್ ಖಿಲರೆ, ಮಾಜಿ ತಾ.ಪಂ ಸದಸ್ಯ ರಾಜಕುಮರ್, ರಾವನ್ ಮೇತ್ರೆ, ಶೈಲೇಂದ್ರ ಶಿಂದೆ, ಭೀಮ್ ದಾಬ್ಕೆ, ಪ್ರಕಾಶ್ ದಾಬ್ಕೆ, ಸಂಜು ಕುಂಟೆಗವೆ, ಜವಾಹರ್ ಗೋರ್ಟೆ, ಜಯೇಶ್,ಜಗದೀಶ್ ಕುಂಟೆಗವೆ, ಈಶ್ವರ್ ಪಸರ್ಕಲೆ, ಘೋಟಾಳ ಗ್ರಾಮದ ಮಹಾದೇವ್ ಕೋಟಮ್ಪಲ್ಲೆ, ಪ್ರದೀಪ್ ನಾಗದೆ, ಸತೀಶ್ ನಾಗದೆ, ಜ್ಞಾನೇಶ್ವರ ಜಾಧವ್, ರಾಹುಲ್ ಸೋನಕಾಂಬಳೆ, ವಿಜಯ್ ಭೋಗಿಲೇ, ಮಹಾದೇವ್ ಮಂಜುಳೆ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.ಎಲ್ಲಾ ಗ್ರಾಮಗಳಲ್ಲಿ ಸಂಭ್ರಮದಿಂದ ಬಾಜಾ-ಭಜಂತ್ರಿಗಳಿಂದ ಕಾಂಗ್ರೆಸ್ ಮುಖಂಡರನ್ನು ಗ್ರಾಮಸ್ಥರು ಬರಮಾಡಿಕೊಂಡರು.