₹೧೫೯.೯೨ ಕೋಟಿ ರೈತರಿಗೆ ಪಾವತಿ

| Published : Dec 01 2023, 12:45 AM IST

ಸಾರಾಂಶ

ಕಬ್ಬು ಬೆಳೆಗಾರರಿಗೆ ₹೧೫೯.೯೨ ಕೋಟಿ ಪಾವತಿ

ವಿಜಯಪುರ: ಜಿಲ್ಲೆಯ ೯ ಸಕ್ಕರೆ ಕಾರ್ಖಾನೆಗಳಲ್ಲಿ ೨೦೨೩-೨೪ನೇ ಸಾಲಿನ ಹಂಗಾಮಿನ ಕಬ್ಬು ನುರಿಸುವ ಕಾರ್ಯ ಆರಂಭವಾಗಿದ್ದು, ಈವರೆಗೆ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ೧೧.೭೬ ಲಕ್ಷ ಮೆಟ್ರಿಕ್ ಟನ್ ಕಬ್ಬನ್ನು ನುರಿಸಿದ್ದು, ನ.೨೯ ರವರೆಗೆ ₹೧೫೯.೯೨ ಕೋಟಿ ಹಣವನ್ನು ರೈತರಿಗೆ ಪಾವತಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ತಿಳಿಸಿದರು.

ಜಿಲ್ಲೆಯ ಸಾಯಿಬಸವ ಮಲಘಾಣ ಸಕ್ಕರೆ ಕಾರ್ಖಾನೆಯವರು ₹೪.೯೦, ಇಂಡಿಯನ್ ಶುಗರ್ಸ್‌ ಹಾವಿನಾಳ ₹೧೦.೫೮, ಶ್ರೀ ಬಾಲಾಜಿ ಶುಗರ್ಸ್‌ ಯರಗಲ್ಲ ₹೪೯.೦೭, ಕೆಪಿಆರ್ ಶುಗರ್ಸ್‌ ಆಲಮೇಲ ₹೨೫.೧೧, ಜಮಖಂಡಿ ಶುಗರ್ಸ್‌ ಯುನಿಟ್-೨ ನಾದ ಕೆಡಿ ₹೧೪.೯೧, ಸಂಗಮನಾಥ ಶುಗರ್ಸ್‌ ಯರಗಲ್ಲ ಬಿಕೆ ₹೧೮.೧೯, ಭೀಮಾಶಂಕರ ಶುಗರ್ಸ್‌ ₹೧೧.೮೩ ಹಾಗೂ ಶ್ರೀ ಬಸವೇಶ್ವರ ಶುಗರ್ಸ್‌ ಕಾರಜೋಳ ₹೨೫.೩೦ ಕೋಟಿ ಹಣವನ್ನು ರೈತರ ಖಾತೆಗೆ ಜಮೆ ಮಾಡಿದ್ದಾರೆ. ರೈತರಿಂದ ಪಡೆದುಕೊಂಡು ಕಬ್ಬು ನುರಿಸಿದ ಕೂಡಲೇ ಆಯಾ ರೈತರಿಗೆ ಹಣ ನೀಡಲು ಎಲ್ಲ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿ ವ್ಯವಸ್ಥಾಪಕ ನಿರ್ದೇಶಕರುಗಳಿಗೆ ಕಟ್ಟುನಿಟ್ಟಿನ ನಿರ್ದೇಶನಗಳನ್ನು ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.