ವಿಜಯೇಂದ್ರ ಈ ನಾಡಿನ ಭವಿಷ್ಯ, ಮುಂದಿನ ಮುಖ್ಯಮಂತ್ರಿ: ಎಲ್.ಆರ್. ಮಹದೇವಸ್ವಾಮಿ

| Published : Nov 06 2024, 12:39 AM IST / Updated: Nov 06 2024, 12:40 AM IST

ವಿಜಯೇಂದ್ರ ಈ ನಾಡಿನ ಭವಿಷ್ಯ, ಮುಂದಿನ ಮುಖ್ಯಮಂತ್ರಿ: ಎಲ್.ಆರ್. ಮಹದೇವಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ವಿಜಯೇಂದ್ರ ಅವರಿಗೆ ದೇವರು ಒಳ್ಳೆಯ ಆರೋಗ್ಯ ಮತ್ತು ಹೆಚ್ಚಿನ ಸಾಮಾಜಿಕ ರಾಜಕೀಯ ಸ್ಥಾನಮಾನ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದೇವೆ. ಮುಂಬರುವ ದಿನಗಳಲ್ಲಿ ವಿಜಯೇಂದ್ರ ಒಳ್ಳೆಯದಾಗಲಿ, ಅವರಿಗೆ ಉತ್ತಮ ರಾಜಕೀಯ ಭವಿಷ್ಯವಿದೆ. ಸಂಘಟನೆ ಕಲೆಗಳನ್ನ ಅರಿತಿರುವ ಅವರಿಗೆ ಇನ್ನೂ ಹೆಚ್ಚಿನ ಅಧಿಕಾರ ಸಿಗಲಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಬಿ.ವೈ.ವಿಜಯೇಂದ್ರ ಅವರು ಈ ನಾಡಿನ ಭವಿಷ್ಯ, ಅವರು ಮುಂದಿನ ಮುಖ್ಯಮಂತ್ರಿ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ ತಿಳಿಸಿದರು.

ನಗರದ ನ್ಯೂ ಸಯ್ಯಾಜಿರಾವ್ ರಸ್ತೆಯಲ್ಲಿರುವ ಜೀವದಾರ ರಕ್ತನಿಧಿ ಕೇಂದ್ರದ ಆವರಣದಲ್ಲಿ ಬಿ.ವೈ. ವಿಜಯೇಂದ್ರ ಅಭಿಮಾನಿ ಬಳಗ ಹಾಗೂ ಬಿಜೆಪಿ ವೈದ್ಯಕೀಯ ಪ್ರಕೋಷ್ಠ ವತಿಯಿಂದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ 49ನೇ ಹುಟ್ಟುಹಬ್ಬದ ಅಂಗವಾಗಿ ಆಯೋಜಿಸಿದ್ದ 49 ಕಾರ್ಯಕರ್ತರು ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಅವರು ಉದ್ಘಾಟಿಸಿ ಮಾತನಾಡಿದರು.

ವಿಜಯೇಂದ್ರ ಅವರಿಗೆ ದೇವರು ಒಳ್ಳೆಯ ಆರೋಗ್ಯ ಮತ್ತು ಹೆಚ್ಚಿನ ಸಾಮಾಜಿಕ ರಾಜಕೀಯ ಸ್ಥಾನಮಾನ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದೇವೆ. ಮುಂಬರುವ ದಿನಗಳಲ್ಲಿ ವಿಜಯೇಂದ್ರ ಒಳ್ಳೆಯದಾಗಲಿ, ಅವರಿಗೆ ಉತ್ತಮ ರಾಜಕೀಯ ಭವಿಷ್ಯವಿದೆ. ಸಂಘಟನೆ ಕಲೆಗಳನ್ನ ಅರಿತಿರುವ ಅವರಿಗೆ ಇನ್ನೂ ಹೆಚ್ಚಿನ ಅಧಿಕಾರ ಸಿಗಲಿದೆ ಎಂದರು.

ಈ ರಾಜ್ಯದಲ್ಲಿ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎನ್ನುವ ಸಾಮಾಜಿಕ ಚಿಂತನೆ ಮಾಡಿ ಜನಮನ್ನಣೆ ಗಳಿಸಿರುವ ಬಿ.ಎಸ್. ಯಡಿಯೂರಪ್ಪ ಅವರಂತೆ ವಿಜಯೇಂದ್ರ ಅವರೂ ತಮ್ಮ ತಂದೆಯ ಹಾದಿಯಲ್ಲಿ ಸಾಗಿ ಜನಪ್ರೀಯತೆಯನ್ನು ಗಳಿಸುತ್ತಿದಾರೆ ಎಂದು ಹೇಳಿದರು.

ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ವಾಸುದೇವ್, ಎಂಡಿಎ ಮಾಜಿ ಸದಸ್ಯ ನವೀನ್ ಕುಮಾರ್, ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಲೋಹಿತ್, ಸುಚಿಂದ್ರ, ಮನೋಹರ, ಸುರೇಶ್, ರೇವ್ ಜೀತ್, ಜಯಂತ್, ಶಾರದಾ, ಮಮತಾ, ಶಿವು ಮೊದಲಾದವರು ಇದ್ದರು.ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಬಿ.ವೈ.ವಿಜಯೇಂದ್ರ ಹುಟ್ಟುಹಬ್ಬ ಆಚರಣೆ

ಕನ್ನಡಪ್ರಭ ವಾರ್ತೆ ಮೈಸೂರು

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ 49ನೇ ಹುಟ್ಟುಹಬ್ಬದ ಅಂಗವಾಗಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೇವಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು.

ಚಾಮುಂಡೇಶ್ವರಿ ಕ್ಷೇತ್ರದ ನಗರ ಮಂಡಲದ ಯುವ ಮೋರ್ಚಾ ವತಿಯಿಂದ ಬೋಗಾದಿಯ ಶ್ರೀದೇವಿ ನರ್ಸಿಂಗ್ ಹೋಮ್ ನಲ್ಲಿನ ಒಳರೋಗಿಗಳಿಗೆ ಹಣ್ಣು ವಿತರಿಸಲಾಯಿತು. ಮಹಿಳಾ ಮೋರ್ಚಾ ವತಿಯಿಂದ ರಾಮಕೃಷ್ಣನಗರದ ಉದ್ಯಾನವನದಲ್ಲಿ ಸ್ವಚ್ಛತಾ ಕಾರ್ಯ ನಡೆಸಿ ಗಿಡ ನೆಡಲಾಯಿತು.

ನಗರ ಪ್ರಧಾನ ಕಾರ್ಯದರ್ಶಿ ಬಿ.ಎಂ. ರಘು, ಚಾಮುಂಡೇಶ್ವರಿ ನಗರ ಮಂಡಲದ ಅಧ್ಯಕ್ಷ ರಾಕೇಶ್ ಭಟ್, ಯುವ ಮೋರ್ಚಾ ನಗರಾಧ್ಯಕ್ಷ ರಾಕೇಶ್ ಗೌಡ, ಪ್ರಧಾನ ಕಾರ್ಯದರ್ಶಿ ಲೋಹಿತ್, ಮುಖಂಡರಾದ ರುದ್ರಮೂರ್ತಿ, ಎಚ್.ಜಿ. ರಾಜಮಣಿ, ಎನ್. ಪ್ರತಾಪ್, ಮಧು ಸೋಮಶೇಖರ್, ಚಂದನ್ ಗೌಡ, ಸಾಗರ್ ಸಿಂಗ್, ಸಿ. ರಾಘವೇಂದ್ರ, ಪಿ. ಸೂರ್ಯಪ್ರಕಾಶ್, ಸಿ.ಎಸ್. ಮಧು, ಶಿವು, ಲಕ್ಷ್ಮಿ ಜಯಶಂಕರ್, ಪುಟ್ಟಮ್ಮಣ್ಣಿ, ಮಂಜುಳಾ, ರಮಾಭಾಯಿ, ರಾಧಾ ಮುತಾಲಿಕ್, ಶುಭಶ್ರೀ, ಬಸವಣ್ಣ, ಸ್ವಾಮಿಗೌಡ, ಗಿರೀಶ್, ಆಸ್ಪತ್ರೆ ಸಿಬ್ಬಂದಿ ನಾಗರಾಜ್ ಮೊದಲಾದವರು ಇದ್ದರು.