ಹೆಚ್ಚುವರಿ ಸೇವೆಗಳಿಂದ ಹೊರೆ ಎಂದು ತಹಸೀಲ್ದಾರ್‌ಗೆ ಗ್ರಾಮಾಧಿಕಾರಿಗಳ ದೂರು

| Published : Aug 14 2024, 12:52 AM IST

ಹೆಚ್ಚುವರಿ ಸೇವೆಗಳಿಂದ ಹೊರೆ ಎಂದು ತಹಸೀಲ್ದಾರ್‌ಗೆ ಗ್ರಾಮಾಧಿಕಾರಿಗಳ ದೂರು
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರ ಗ್ರಾಮ ಆಡಳಿತ ಅಧಿಕಾರಿಗಳಿಗೆ ಹೆಚ್ಚು ಸೇವೆಗಳನ್ನು ನಿರ್ವಹಿಸುವ ಕಾರ್ಯ ವಹಿಸಿದ್ದು, ಕೆಲಸ ನಿರ್ವಹಿಸಲು ನಮಗೆ ಸಾಧ್ಯವಾಗುತ್ತಿಲ್ಲ. ಆದ್ದರಿಂದ ಹೆಚ್ಚುವರಿ ಭತ್ಯೆ ಹಾಗೂ ಆಧುನಿಕ ಯಂತ್ರೋಪಕರಣಗಳನ್ನು ನೀಡಬೇಕು ಎಂದು ಗ್ರಾಮ ಆಡಳಿತ ಅಧಿಕಾರಿಗಳು ತಹಸೀಲ್ದಾರ್‌ ನಂದಕುಮಾರ್‌ಗೆ ಮನವಿ ಸಲ್ಲಿಸಿದರು. ಮೊಬೈಲ್ ಹಾಗೂ ಕಂಪ್ಯೂಟರ್‌ ಮೂಲಕ ಕೆಲಸ ನಿರ್ವಹಿಸಬೇಕಾದ ಅವಶ್ಯಕತೆಯಿರುತ್ತದೆ. ಆದ್ದರಿಂದ ಈ ಎಲ್ಲಾ ಕೆಲಸಗಳ ನಿರ್ವಹಣೆಗೆ ಮೊಬೈಲ್, ಸಿಮ್ ಹಾಗೂ ದಿನ ಬಳಕೆಗೆ ಮೊಬೈಲ್, ಡಾಟಾ, ಲ್ಯಾಪ್‌ಟಾಪ್, ಪ್ರಿಂಟಿಂಗ್, ಸ್ಕ್ಯಾನರ್‌ ಸೌಲಭ್ಯ ಒದಗಿಸಲು ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ಆಲೂರು

ಸರ್ಕಾರ ಗ್ರಾಮ ಆಡಳಿತ ಅಧಿಕಾರಿಗಳಿಗೆ ಹೆಚ್ಚು ಸೇವೆಗಳನ್ನು ನಿರ್ವಹಿಸುವ ಕಾರ್ಯ ವಹಿಸಿದ್ದು, ಕೆಲಸ ನಿರ್ವಹಿಸಲು ನಮಗೆ ಸಾಧ್ಯವಾಗುತ್ತಿಲ್ಲ. ಆದ್ದರಿಂದ ಹೆಚ್ಚುವರಿ ಭತ್ಯೆ ಹಾಗೂ ಆಧುನಿಕ ಯಂತ್ರೋಪಕರಣಗಳನ್ನು ನೀಡಬೇಕು ಎಂದು ಗ್ರಾಮ ಆಡಳಿತ ಅಧಿಕಾರಿಗಳು ತಹಸೀಲ್ದಾರ್‌ ನಂದಕುಮಾರ್‌ಗೆ ಮನವಿ ಸಲ್ಲಿಸಿದರು.

ಪಟ್ಟಣದ ಕಂದಾಯ ಇಲಾಖೆಗೆ ಭೇಟಿ ನೀಡಿದ ಗ್ರಾಮ ಆಡಳಿತ ಅಧಿಕಾರಿಗಳು ಸರ್ಕಾರವು ರೈತಪರ, ಸಮಾಜಮುಖಿ ಕೆಲಸಗಳಾದ ನಮೂನೆ 1ರಿಂದ 5 (ದುರಸ್ತಿ) ಇ ಆಫೀಸ್, ಪಹಣಿಗೆ ಆಧಾರ್ ಜೋಡಣೆ, ಲ್ಯಾಂಡ್ ಬೀಟ್ ಆಫ್ ಸಂಯೋಜನೆ, ನವೋದಯ, ಗರುಡ ಆಫ್, ಇ ಜನ್ಮ ತಂತ್ರಾಂಶಗಳ ಮೂಲಕ ಬಗರ್‌ಹುಕುಂ, ಹಕ್ಕುಪತ್ರ, ಬೆಳೆ ಸಂರಕ್ಷಣೆ, ( ಬೆಳೆ ಕಟಾವ್, ಮೊಬೈಲ್ ಆಪ್) ಪಿ.ಎಂ. ಕಿಸಾನ್ ವೆಬ್ಆಪ್, ಕೃಷಿ ಗಣತಿ, ನೀರಾವರಿ ಗಣತಿ, ದಿಶಾಂಕ್, ಸಿ- ವಿಜಯ್, ಹಾಗೂ ಇನ್ನೂ ಹತ್ತು ಹಲವಾರು ಕೆಲಸಗಳನ್ನು ಮೊಬೈಲ್ ಹಾಗೂ ಕಂಪ್ಯೂಟರ್‌ ಮೂಲಕ ಕೆಲಸ ನಿರ್ವಹಿಸಬೇಕಾದ ಅವಶ್ಯಕತೆಯಿರುತ್ತದೆ. ಆದ್ದರಿಂದ ಸದರಿ ಕೆಲಸ ನಿರ್ವಹಿಸಲು ಯಾವುದೇ ಮೂಲಭೂತ ಸೌಕರ್ಯಗಳನ್ನು ನೀಡದಿರುವುದು ಪ್ರಗತಿ ಹಿನ್ನೆಡೆಗೆ ಕಾರಣವಾಗಿದೆ. ಆದ್ದರಿಂದ ಈ ಎಲ್ಲಾ ಕೆಲಸಗಳ ನಿರ್ವಹಣೆಗೆ ಮೊಬೈಲ್, ಸಿಮ್ ಹಾಗೂ ದಿನ ಬಳಕೆಗೆ ಮೊಬೈಲ್, ಡಾಟಾ, ಲ್ಯಾಪ್‌ಟಾಪ್, ಪ್ರಿಂಟಿಂಗ್, ಸ್ಕ್ಯಾನರ್‌ ಸೌಲಭ್ಯ ಹಲವು ಕೆಲಸ ನಿರ್ವಹಣೆಗೆ ಮಾಸಿಕ ಹೆಚ್ಚುವರಿ ಭತ್ಯೆ 5000 ರು. ಗಳನ್ನು ನೀಡಬೇಕಾಗಿ ಈ ಮೂಲಕ ಕೇಳಿಕೊಳ್ಳುತ್ತೇವೆ.

ಈ ಸಂದರ್ಭದಲ್ಲಿ ಗ್ರಾಮ ಆಡಳಿತ ಅಧಿಕಾರಿಗಳಾದ ಅಭಿಷೇಕ್ ಎಂ.ಡಿ, ಸಂಜೀವ್ ಚೌಹಾಣ್, ದೇವೆಂದ್ರಪ್ಪ ಪೂಜಾರಿ, ರಾಘವೇಂದ್ರ ಭಂಡಾರಿ, ರವಿ ನಾಯ್ಕ್ ಜೆ. ಗೀತಾ ಸಿ.ವಿ. ಚಂದ್ರಶೇಖರ್ ಬಿ.ಎಸ್ ಹೇಮರಾಜ್, ಮನು, ಚಂದ್ರಶೇಖರ್, ರಂಗಸ್ವಾಮಿ ಕರಿಬಸವರಾಜು ಮುಂತಾದವರು ಉಪಸ್ಥಿತರಿದ್ದರು.