ಸಾರಾಂಶ
Work hard for the betterment of farmers: Amin Reddy's advice
-ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷೆಯಾಗಿ ಶರಣಮ್ಮ, ಉಪಾಧ್ಯಕ್ಷರಾಗಿ ನಾಗಪ್ಪಗೌಡ ಆಯ್ಕೆ
------ಕನ್ನಡಪ್ರಭ ವಾರ್ತೆ ಸುರಪುರ
ಸಹಕಾರ ತತ್ವದಡಿ ನಂಬಿಕೆಯಿಟ್ಟು, ರೈತರ ಶ್ರೇಯೋಭಿವೃದ್ಧಿಗಾಗಿ ಎಲ್ಲ ಸದಸ್ಯರು ಒಗ್ಗಟ್ಟಿನಿಂದ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಕಾರ್ಯನಿರ್ವಹಿಸಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಅಮೀನರೆಡ್ಡಿ ಯಾಳಗಿ ಹೇಳಿದರು.ತಾಲೂಕಿನ ಕೆಂಭಾವಿ ಪಟ್ಟಣದ ಸಮೀಪದ ನಗನೂರ ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಅವಿರೋಧ ಆಯ್ಕೆ ನಂತರ ಅವರನ್ನು ಸನ್ಮಾನಿಸಿ ಮಾತನಾಡಿದ ಅವರು, ಈ ಭಾಗದ ರೈತರಿಗೆ ಹಚ್ಚಿನ ಬಡ್ಡಿ ರಹಿತ ಸಾಲದ ಸೌಲಭ್ಯಗಳನ್ನು ಕಲ್ಪಿಸಬೇಕು. 10 ಲಕ್ಷ ರು. ಗಳವರೆಗೆ ಸಬ್ಸಿಡಿ ರೂಪದಲ್ಲಿ ಸಾಲ ದೊರಕಿಸುವಂತಾಬೇಕು ಎಂದರು.
ಈಚೆಗೆ ನಡೆದ ಚುನಾವಣೆಯಲ್ಲಿ 12 ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ ಹೆಚ್ಚಿನ ಮತಗಳಿಂದ ಗೆಲ್ಲಿಸಲಾಗಿದೆ. ಆ ಜವಾಬ್ಧಾರಿಯನ್ನು ಅರಿತು ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕು. ಎಲ್ಲ ರೈತರು ಆರ್ಥಿಕವಾಗಿ ಸದೃಢರಾಗಬೇಕು ಎಂದು ತಿಳಿಸಿದರು.ಹಿರಿಯ ಬಿಜೆಪಿ ಮುಖಂಡ ಡಾ. ಚಂದ್ರಶೇಖರ ಸುಬೇದಾರ, ರಾಜಶೇಖರ ಗೂಗಲ್, ಬಸವರಾಜ ವಿಭೂತಿಹಳ್ಳಿ ಮಾತನಾಡಿದರು.
ಪ್ರಮುಖರಾದ ಅಡಿವೆಪ್ಪ ಜಾಕಾ, ಬಸನಗೌಡ, ತಿರುಪತಿಗೌಡ, ಶಾಂತಣ್ಣ ಚೆನ್ನೂರ, ಮಲ್ಲು ಶಾಕಾ, ಸಂಗಣ್ಣ ವಣಿಕ್ಯಾಳ, ದೇವಣ್ಣ ದೇಶಪಾಂಡೆ, ಮಡೆಪ್ಪ ಮಡ್ಡಿ, ಮಾಣಿಕರೆಡ್ಡಿ ದೇಶಪಾಂಡೆ, ರಾಜು ಟಕ್ಕಳಕಿ, ಸಿದ್ದು ವಣಿಕ್ಯಾಳ, ಗುರಣ್ಣ ತಿಪಶೆಟ್ಟಿ ಇದ್ದರು.ಸಂಘದ ಚುನಾವಣಾಧಿಕಾರಿಯಾಗಿ ಅಬ್ದುಲಬಾಷಾ ಗೋನಾಲ ಕಾರ್ಯನಿರ್ವಹಿಸಿದರು. ಪಿಕೆಪಿಎಸ್ ಕಾರ್ಯನಿರ್ವಾಹಕ ಅಧಿಕಾರಿ ಹಳ್ಳೆರಾಯ ದೇಸಾಯಿ ನೂತನ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರಿಗೆ ಪ್ರಮಾಣ ಪತ್ರ ನೀಡಿದರು.
ನೂತನ ಪದಾಧಿಕಾರಿಗಳು : ಶರಣಮ್ಮ ಮಲ್ಲಣ್ಣ (ಅಧ್ಯಕ್ಷೆ), ನಾಗಪ್ಪಗೌಡ ಯಂಕಪ್ಪಗೌಡ (ಉಪಾಧ್ಯಕ್ಷ), ಬಸಣ್ಣ ಶರಣಪ್ಪ, ಬಸವರಾಜ ಗುರುಬಸಪ್ಪ, ಭೀಮರೆಡ್ಡಿ ಯಮನಪ್ಪ, ಶರಣಪ್ಪ ಮಲ್ಲಣ್ಣ, ಬಸನಗೌಡ ಶಂಕ್ರೆಪ್ಪ, ಶರಣಪ್ಪ ಶಂಕ್ರೆಪ್ಪ, ಹಣಮಂತ್ರಾಯ ಮಲ್ಲಪ್ಪ, ಹೊನ್ನಪ್ಪ ದೇವಿಂದ್ರಪ್ಪ ಸಾಯಬಣ್ಣ ಈರಗವ್ವ, ಶರಣಮ್ಮ ಗುರಪ್ಪಗೌಡ (ನಿರ್ದೇಶಕರು).-----
ಫೋಟೊ: 13ವೈಡಿಆರ್7: ಸುರಪುರ ತಾಲೂಕಿನ ಕೆಂಭಾವಿ ಸಮೀಪದ ನಗನೂರ ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷೆಯಾಗಿ ಶರಣಮ್ಮ ಮಲ್ಲಣ್ಣ ಹಾಗೂ ಉಪಾಧ್ಯಕ್ಷರಾಗಿ ನಾಗಪ್ಪಗೌಡ ಆಯ್ಕೆಯಾದವರನ್ನು ಸನ್ಮಾನಿಸಲಾಯಿತು.----000---