ಸಾರಾಂಶ
ಗ್ರಾಮ ಆಡಳಿತ ಅಧಿಕಾರಿಗಳಿಗೆ ತಾಂತ್ರಿಕ ಹುದ್ದೆಗಳಿಗೆ ನೀಡುವ ವೇತನ ಶ್ರೇಣಿ ನಿಗದಿಪಡಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮೊಬೈಲ್ ಆ್ಯಪ್, ವೆಬ್ ಅಪ್ಲಿಕೇಶನ್ ಮತ್ತು ಲೇಖನಿ ಸ್ಥಗಿತಗೊಳಿಸಿ ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಸದಸ್ಯರು ಅನಿರ್ದಿಷ್ಟಾವಧಿ ಸತ್ಯಗ್ರಾಹ ನಡೆಸಿ ತಹಸೀಲ್ದಾರಗೆ ಮನವಿ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ರಾಮದುರ್ಗ
ಗ್ರಾಮ ಆಡಳಿತ ಅಧಿಕಾರಿಗಳಿಗೆ ತಾಂತ್ರಿಕ ಹುದ್ದೆಗಳಿಗೆ ನೀಡುವ ವೇತನ ಶ್ರೇಣಿ ನಿಗದಿಪಡಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮೊಬೈಲ್ ಆ್ಯಪ್, ವೆಬ್ ಅಪ್ಲಿಕೇಶನ್ ಮತ್ತು ಲೇಖನಿ ಸ್ಥಗಿತಗೊಳಿಸಿ ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಸದಸ್ಯರು ಅನಿರ್ದಿಷ್ಟಾವಧಿ ಸತ್ಯಗ್ರಾಹ ನಡೆಸಿ ತಹಸೀಲ್ದಾರಗೆ ಮನವಿ ಸಲ್ಲಿಸಿದರು.ಪಟ್ಟಣದ ಮಿನಿ ವಿಧಾನಸೌಧದ ಎದುರು ಗುರುವಾರದಿಂದ ಬೆಂಬಲಿಸಿ ಸತ್ಯಗ್ರಾಹ ಆರಂಭಿಸಿದ್ದು, ಸರ್ಕಾರಕ್ಕೆ ಗ್ರಾಮ ಆಡಳಿತಾಧಿಕಾರಿಗಳಿಗೆ ಮೂಲ ಸೌಲಭ್ಯಗಳಾದ ಸುಸಜ್ಜಿತವಾದ ಕಚೇರಿ, ಗುಣಮಟ್ಟದ ಮೊಬೈಲ್ ಫೋನ್, ಲ್ಯಾಪಟಾಪ್ ಕೊಡಿಸುವುದು, ಸೇವಾ ವಿಷಯಗಳಿಗೆ ಸಂಬಂಧಿಸಿದಂತೆ ಅಂತರ ಜಿಲ್ಲಾ ವರ್ಗಾವಣೆಯ ಕೆಸಿಎಸ್‌ಆರ್ ನಿಯಮ 16 ಎ ಮರುಸ್ಥಾಪಿಸುವುದು, ಪದೋನ್ನತಿಯಲ್ಲಿ ವಂಚಿತರಾಗಿ ನಿವೃತ್ತಿ ಅಂಚಿನಲ್ಲಿದ್ದವರಿಗೆ ರಾಜ್ಯದ 1196 ಗ್ರೇಡ್-1 ಗ್ರಾಮ ಪಂಚಾಯತಿ ಹಾಗೂ 304 ಕಸಬಾ ಹೋಬಳಿ ವೃತ್ತಗಳನ್ನು ಗ್ರೇಡ್-1 ಗ್ರಾಮ ಆಡಳಿತಾಧಿಕಾರಿ ಹುದ್ದೆಯನ್ನಾಗಿ ಮೇಲ್ದರ್ಜೆಗೇರಿಸಿ ರಾಜಸ್ವ ನಿರೀಕ್ಷಕರು/ ಪ್ರಥಮ ದರ್ಜೆ ಸಹಾಯಕರು ಎಂದು ಮೇಲ್ದರ್ಜೆಗೆರಿಸುವುದು ಸೇರಿದಂತೆ ಕಂದಾಯ ಇಲಾಖೆಯ ೩ ವರ್ಷಗಳ ಸೇವೆ ಪರಿಗಣಿಸಿ ಅಂತರ ಜಿಲ್ಲಾ ವರ್ಗಾವಣೆಗಾಗಿ ಕಂದಾಯ ಇಲಾಖೆಯಲ್ಲಿ ಹೊಸ ಮಾರ್ಗ ಸೂಚಿ ರಚಿಸಲು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ತಾಲೂಕು ಅಧ್ಯಕ್ಷ ಶಿವು ಗೋರವನಕೊಳ್ಳ, ಗೌರವಾಧ್ಯಕ್ಷ ರಂಗನಾಥ ದಾಸರ, ಉಪಾಧ್ಯಕ್ಷ ಲೋಕೇಶ ಚವ್ಹಾಣ, ಖಜಾಂಚಿ ಪ್ರವೀಣ ಖಾನಾಪೂರ, ಪ್ರಧಾನಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಸದಸ್ಯರಾದ ಲಕ್ಷ್ಮಣ ಹೊಸಮನಿ, ಶಿವಲೀಲಾ ಬಾಗೇವಾಡಿ, ಲಕ್ಷ್ಮಣ ಉಪ್ಪಾರ, ಕಿರಣ ಮೂಗನೂರ, ಸುನಂದಾ ತಿಮ್ಮಾಪೂರ, ಸುನೀಲ ನರಗುಂದ ಸೇರಿದಂತೆ ಹಲವರು ಭಾಗವಹಿಸಿದ್ದರು.