ಸಾರಾಂಶ
ಬೇಲೂರು ತಾಲೂಕಿನ ಬಿಕ್ಕೋಡು ಗ್ರಾಮ ಪಂಚಾಯತಿ ವ್ಯಾಪ್ತಿಯ ಪಟ್ಟಣ, ಬೀದಿಗಳ ನಿರ್ವಹಣೆಗೆ ದಿನಗೂಲಿ ನೌಕರನನ್ನು ನೇಮಿಸಿ ಸ್ವಚ್ಛತೆ ಮಾಡಲು ಬಿಟ್ಟಿದ್ದು ಬೇಕಾಬಿಟ್ಟಿ ಕೆಲಸ ಮಾಡಿ ಎಲ್ಲೆಂದರಲ್ಲಿ ಕಸದ ರಾಶಿ ಬಿದ್ದು ಕಬ್ಬುನಾರುತ್ತಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಖ್ಯ ರಸ್ತೆಯಲ್ಲಿ ಅಲ್ಲದೆ ಗ್ರಾಮ ಪಂಚಾಯತಿ ಸುತ್ತಮುತ್ತಲ್ಲಿ ಕಸದ ರಾಶಿ ಕಂಡುಬರುತ್ತಿದೆ. ಬೀದಿಗಳಲ್ಲಿ ಸಾರ್ವಜನಿಕರು, ಶಾಲಾ ಮಕ್ಕಳು, ವಯಸ್ಕರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕನ್ನಡಪ್ರಭ ವಾರ್ತೆ ಬೇಲೂರು
ತಾಲೂಕಿನ ಬಿಕ್ಕೋಡು ಗ್ರಾಮ ಪಂಚಾಯತಿ ವ್ಯಾಪ್ತಿಯ ಪಟ್ಟಣ, ಬೀದಿಗಳ ನಿರ್ವಹಣೆಗೆ ದಿನಗೂಲಿ ನೌಕರನನ್ನು ನೇಮಿಸಿ ಸ್ವಚ್ಛತೆ ಮಾಡಲು ಬಿಟ್ಟಿದ್ದು ಬೇಕಾಬಿಟ್ಟಿ ಕೆಲಸ ಮಾಡಿ ಎಲ್ಲೆಂದರಲ್ಲಿ ಕಸದ ರಾಶಿ ಬಿದ್ದು ಕಬ್ಬುನಾರುತ್ತಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ತಾಲೂಕಿನ ಬಿಕ್ಕೋಡು ಗ್ರಾಮ ಪಂಚಾಯತಿ ವ್ಯಾಪ್ತಿಯ ಪಟ್ಟಣ, ಬೀದಿಗಳ ನಿರ್ವಹಣೆ ಮಾಡಬೇಕು. ಆದರೆ ಕಸ ಗುಡಿಸುವ ಕಾರ್ಮಿಕರ ಮೇಲೆ ಬಿಕ್ಕೋಡು ಅಭಿವೃದ್ಧಿ ಅಧಿಕಾರಿ ದರ್ಪ ತೋರುವುದಲ್ಲದೆ ಕಿರುಕುಳ ನೀಡುತ್ತಿದ್ದರು. ಇದನ್ನು ಸಹಿಸಿಕೊಳ್ಳಲಾಗದೆ ಕೆಲಸವನ್ನು ಬಿಟ್ಟಿರುತ್ತಾರೆ. ಆದರೆ ದಿನಗೂಲಿ ನೌಕರನನ್ನು ನೇಮಿಸಿ ಸ್ವಚ್ಛತೆ ಮಾಡಲು ಬಿಟ್ಟರೆ ಆತನೂ ಬೇಕಾಬಿಟ್ಟಿ ಕೆಲಸ ಮಾಡುತ್ತಿದ್ದಾರೆ. ಮುಖ್ಯ ರಸ್ತೆಯಲ್ಲಿ ಅಲ್ಲದೆ ಗ್ರಾಮ ಪಂಚಾಯತಿ ಸುತ್ತಮುತ್ತಲ್ಲಿ ಕಸದ ರಾಶಿ ಕಂಡುಬರುತ್ತಿದೆ. ಬೀದಿಗಳಲ್ಲಿ ಸಾರ್ವಜನಿಕರು, ಶಾಲಾ ಮಕ್ಕಳು, ವಯಸ್ಕರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಗ್ರಾ.ಪಂ ಪಿಡಿಒ, ನಿರ್ಲಕ್ಚ್ಯದಿಂದ ಬಿಕ್ಕೋಡು ರಸ್ತೆಗಳು ಬೀದಿಗಳು ಗಬ್ಬು ನಾರುತ್ತಿವೆ. ಕಸದಿಂದ ಆರೋಗ್ಯದ ಮೇಲೆ ಪರಿಣಾಮ ಬೀರಿದರೆ ಅನೇಕ ಕಾಯಿಲೆಗಳು ಬರುವ ಸಾಧ್ಯತೆ ಹೆಚ್ಚು. ಆದಷ್ಟು ಬೇಗ ಕಾಯಂ ಸ್ವಚ್ಛತಾ ನೌಕರರನ್ನು ನೇಮಿಸಿ ಬಿಕ್ಕೋಡು ರಸ್ತೆಯನ್ನು ಸ್ವಚ್ಛ ಮಾಡುವುದರ ಜೊತೆಗೆ ಉಡಾಫೆ ವರ್ತನೆಯ ಅಭಿವೃದ್ಧಿ ಅಧಿಕಾರಿಯನ್ನು ತಕ್ಷಣ ವರ್ಗಾವಣೆ ಮಾಡಬೇಕು ಎಂದು ತಾಲೂಕು ಕೆಡಿಪಿ ಸದಸ್ಯ ಚೇತನ್ ಗೌಡ ಆಗ್ರಹಿಸಿದ್ದಾರೆ.