14 ವರ್ಷಗಳ ನಂತರ ಜಾತ್ರೆ: ರಸ್ತೆ ಅಭಿವೃದ್ಧಿಗೆ ಗ್ರಾಮಸ್ಥರ ಒತ್ತಾಯ

| Published : Feb 02 2025, 11:49 PM IST

14 ವರ್ಷಗಳ ನಂತರ ಜಾತ್ರೆ: ರಸ್ತೆ ಅಭಿವೃದ್ಧಿಗೆ ಗ್ರಾಮಸ್ಥರ ಒತ್ತಾಯ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನ ಕೂಲಂಬಿಯಿಂದ ಮುಕ್ತೇನಹಳ್ಳಿ ಗ್ರಾಮ ಹಾಗೂ ಅಲ್ಲಿಂದ ದಾವಣಗೆರೆಗೆ ಹೋಗುವ ರಸ್ತೆ ಸಂಪೂರ್ಣ ಹಾಳಾಗಿದೆ. ಕೂಡಲೇ ಈ ರಸ್ತೆ ಅಭಿವೃದ್ಧಿಪಡಿಸಬೇಕು. ಇಲ್ಲದಿದ್ದರೆ ಉಗ್ರ ಪ್ರತಿಭಟನೆ ನಡೆಸುವುದಾಗಿ ಮುಕ್ತೇನಹಳ್ಳಿ ಮುತ್ತಮುತ್ತಲಿನ ಗ್ರಾಮಸ್ಥರು ತಾಲೂಕು ಆಡಳಿತಕ್ಕೆ ಎಚ್ಚರಿಸಿದ್ದಾರೆ.

- ಮೂರೂವರೆ ವರ್ಷವಾದರೂ ಗುತ್ತಿಗೆದಾರ ಸುಳಿವೇ ಇಲ್ಲ - - - ಹೊನ್ನಾಳಿ: ತಾಲೂಕಿನ ಕೂಲಂಬಿಯಿಂದ ಮುಕ್ತೇನಹಳ್ಳಿ ಗ್ರಾಮ ಹಾಗೂ ಅಲ್ಲಿಂದ ದಾವಣಗೆರೆಗೆ ಹೋಗುವ ರಸ್ತೆ ಸಂಪೂರ್ಣ ಹಾಳಾಗಿದೆ. ಕೂಡಲೇ ಈ ರಸ್ತೆ ಅಭಿವೃದ್ಧಿಪಡಿಸಬೇಕು. ಇಲ್ಲದಿದ್ದರೆ ಉಗ್ರ ಪ್ರತಿಭಟನೆ ನಡೆಸುವುದಾಗಿ ಮುಕ್ತೇನಹಳ್ಳಿ ಮುತ್ತಮುತ್ತಲಿನ ಗ್ರಾಮಸ್ಥರು ತಾಲೂಕು ಆಡಳಿತಕ್ಕೆ ಎಚ್ಚರಿಸಿದ್ದಾರೆ.

ಬಿಜೆಪಿ ಸರ್ಕಾರವಿದ್ದಾಗ ಶಾಸಕ ಎಂ.ಪಿ.ರೇಣುಕಾಚಾರ್ಯ ಲೋಕೋಪಯೋಗಿ ಇಲಾಖೆಯಿಂದ ಸುಮಾರು ₹7 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡಿಸಿದ್ದರು. ಬಳ್ಳಾರಿಯ ವಿರೂಪಾಕ್ಷಪ್ಪ ರಸ್ತೆ ಕಾಮಗಾರಿ ಗುತ್ತಿಗೆ ಪಡೆದು, ಜೆಸಿಬಿ ಯಂತ್ರದಿಂದ ಕಾಮಗಾರಿ ನಡೆಸಿ, ರಸ್ತೆ ಕಿತ್ತುಹಾಕಿದ್ದರು. ಒಂದಿಷ್ಟು ದೂರ ಡಾಂಬರೀಕರಣ ಮಾಡಿದ್ದು, ಅದೂ ಅರ್ಧಂಬರ್ಧವಾಗಿದೆ. ಅನಂತರ ಗುತ್ತಿಗೆದಾರರ ಸುಳಿವೇ ಇಲ್ಲ ಎಂದು ದೂರಿದರು.

ಮುಖಂಡ ಚಂದಪ್ಪ ತಿಮ್ಮೇನಹಳ್ಳಿ ಮಾತನಾಡಿ, ಮೂರೂವರೆ ವರ್ಷಗಳಿಂದ ಈ ರಸ್ತೆ ಸಂಪೂರ್ಣ ಹಾಳಾಗಿದೆ. ವಾಹನ ಚಾಲಕರು ಅಪಘಾತಗಳಿಂದ ಕೈ ಕಾಲು ಮುರಿದುಕೊಂಡು ತೊಂದರೆಗೊಳಗಾಗಿದ್ದಾರೆ. ಗರ್ಭಿಣಿ ಮತ್ತು ಬಾಣಂತಿಯರು ದ್ವಿಚಕ್ರ ವಾಹನಗಳಲ್ಲಿ ಓಡಾಡುವುದೇ ದುಸ್ತರವಾಗಿದೆ ಎಂದು ಆರೋಪಿಸಿದರು.

ಗ್ರಾಪಂ ಅಧ್ಯಕ್ಷ ಟಿ.ಬಿ. ಹನುಮಂತಪ್ಪ ಮಾತನಾಡಿ, ಮಾ.29 ರಿಂದ ಏ.4 ರವರೆಗೆ ಗ್ರಾಮದಲ್ಲಿ ಮಾರಿಕಾಂಬೆ ಜಾತ್ರೋತ್ಸವ ನಡೆಯುತ್ತದೆ. 14 ವರ್ಷಗಳ ನಂತರ ಈ ಜಾತ್ರೆ ನಡೆಯುತ್ತಿದೆ. ದಾವಣಗೆರೆ, ಹೊನ್ನಾಳಿಯಿಂದ ಮತ್ತು ಸುತ್ತಮುತ್ತಲ ಗ್ರಾಮಗಳಿಂದ ಲಕ್ಷಾಂತರ ಜನರು ಜಾತ್ರೆಗೆ ಆಗಮಿಸಲಿದ್ದಾರೆ. ಈ ಸಂದರ್ಭ ಅಪಘಾತಗಳು ಸಂಭವಿಸಿ, ಸಾವು ನೋವುಗಳಾದರೆ ಯಾರು ಹೊಣೆ ಎಂದು ಪ್ರಶ್ನಿಸಿದರು. ಶಾಸಕ ಡಿ.ಜಿ. ಶಾಂತನಗೌಡ ಹಾಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ರಸ್ತೆ ಕಾಮಗಾರಿಗೆ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭ ಪಂ ಮಾಜಿ ಅಧ್ಯಕ್ಷರಾದ ಕೆ. ಮಹಾಂತೇಶ್, ಸವಿತಾ, ಕೆ.ಎಸ್. ಕಲ್ಲೇಶ್, ಗಂಗಾಧರಸ್ವಾಮಿ, ಚಂದು ಇದ್ದರು.

- - - -2ಎಚ್.ಎಲ್.ಐ2: