ವಿವಿಧ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿಯನ್ನು ಅರೆಬರೆಯಾಗಿ ಮಾಡಿರುವ ಗುತ್ತಿಗೆದಾರ ಹಾಗೂ ಇದನ್ನು ನೋಡಿಯೂ ನೋಡದಂತಿರುವ ಅಧಿಕಾರಿಗಳ ವಿರುದ್ಧ ತಾಲೂಕಿನ ವಿವಿಧ ಗ್ರಾಮಗಳ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಗುಬ್ಬಿ

ವಿವಿಧ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿಯನ್ನು ಅರೆಬರೆಯಾಗಿ ಮಾಡಿರುವ ಗುತ್ತಿಗೆದಾರ ಹಾಗೂ ಇದನ್ನು ನೋಡಿಯೂ ನೋಡದಂತಿರುವ ಅಧಿಕಾರಿಗಳ ವಿರುದ್ಧ ತಾಲೂಕಿನ ವಿವಿಧ ಗ್ರಾಮಗಳ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ತಾಲೂಕಿನ ನಿಟ್ಟೂರು ಹೋಬಳಿಯ ದೊಡ್ಡಗುಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಹೀಗೆಹಳ್ಳಿ, ತೆಗ್ಗೆಹಳ್ಳಿ, ಬಾಡೇನಹಳ್ಳಿ, ಪರಾಮಸಂದ್ರ, ಸಂಪಿಗೆ ಗ್ರಾಮಕ್ಕೆ ಕಳೆದ ಐದು ತಿಂಗಳ ಹಿಂದೆ ರಸ್ತೆ ಕಾಮಗಾರಿಗೆ 2.15 ಕೋಟಿ ವೆಚ್ಚದಲ್ಲಿ ಕಾಮಗಾರಿ ಪ್ರಾರಂಭಿಸಲಾಗಿತ್ತು. ಆದರೆ ಗುತ್ತಿಗೆದಾರ ಅರೆ ಬರೆ ಕಾಮಗಾರಿ ಮಾಡಿದ್ದರಿಂದ ಈ ರಸ್ತೆಯಲ್ಲಿ ನೂರಾರು ಬೈಕುಗಳು, ವಾಹನಗಳು, ಶಾಲಾ ವಿದ್ಯಾರ್ಥಿಗಳು ಓಡಾಡಲು ತೊಂದರೆಯಾಗಿದೆ ಎಂದು ತಿಳಿಸಿದರು ಯಾರೊಬ್ಬ ಅಧಿಕಾರಿಗಳು ಸಹ ಇತ್ತ ಗಮನ ಹರಿಸಿಲ್ಲ. ಜೊತೆಗೆ ಈ ಮಾರ್ಗದಲ್ಲಿದ್ದ ಸೇತುವೆ ತೆರವುಗೊಳಿಸಲಾಗಿದೆ. ಗ್ರಾಮಸ್ಥರು ಓಡಾಡಲು ಬೇರೆ ವ್ಯವಸ್ಥೆ ಮಾಡಿ ಸೇತುವೆ ತೆರವುಗೊಳಿಸಬೇಕಿತ್ತು. ಆದರೆ ಅದು ಸಹ ಮಾಡಿಲ್ಲ ಪಕ್ಕದ ತೋಟದಲ್ಲಿ ಗ್ರಾಮಸ್ಥರು ಓಡಾಡುವ ಪರಿಸ್ಥಿತಿ ಬಂದಿದೆ ಮಳೆ ಬಂದರೆ ತೋಟದಲ್ಲಿ ನೀರು ನಿಂತು ಓಡಾಡಲು ತೊಂದರೆಯಾಗಿದೆ. ಈ ಕೂಡಲೇ ಕಾಮಗಾರಿ ಮುಗಿಸದೆ ಹೋದರೆ ತಾಲೂಕು ಕಚೇರಿ, ಲೋಕೋಪಯೋಗಿ ಇಲಾಖೆಯ ಮುಂದೆ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆಯನ್ನು ಸಹ ನೀಡಿದ್ದಾರೆ.