ಸಾರಾಂಶ
ತಮಿಳುನಾಡಿಗೆ ಲಾರಿ ಮೂಲಕ ಗೋಧಿ ಕಳ್ಳ ಸಾಗಾಣಿಕೆಯಾಗುತ್ತಿದೆ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ. ಲಾರಿ ತಡೆದು ಚಾಲಕನನ್ನು ತಡೆದು ಸ್ಥಳೀಯರು ಪ್ರಶ್ನಿಸಿದಲ್ಲದೇ ಲಾರಿ ಚಾಲಕನನ್ನು ತರಾಟೆಗೆ ತೆಗೆದುಕೊಂಡರು. ಸಕಲೇಶಪುರ ತಾಲೂಕಿನ, ಬಾಳ್ಳುಪೇಟೆಯ ಎಮ್‌ಎಸ್‌ಪಿಟಿಸಿಯಿಂದ ತಮಿಳುನಾಡಿಗೆ ಗೋಧಿ ಸಾಗಾಣಿಕೆ ಮಾಡುತ್ತಿರುವುದಾಗಿ ಲಾರಿ ಚಾಲಕನು ಈ ಸಂದರ್ಭದಲ್ಲಿ ಒಪ್ಪಿಕೊಂಡಿದ್ದಾನೆ.
ಕನ್ನಡಪ್ರಭ ವಾರ್ತೆ ಹಾಸನ
ಮಾಹಿತಿ ಆಧರಿಸಿ ಅಂಗನವಾಡಿಗಳಿಗೆ ಸರಬರಾಜಾಗಬೇಕಿದ್ದ ಗೋಧಿ ಕಳ್ಳ ಸಾಗಾಣಿಕೆಯನ್ನು ಗ್ರಾಮಸ್ಥರು ತಡೆದು ವಿಚಾರಿಸಿ ತರಾಟೆಗೆ ತೆಗೆದುಕೊಂಡ ಘಟನೆ ತಾಲೂಕಿನ ಮೊಸಳೆ ಹೊಸಳ್ಳಿ ಬಳಿ ನಡೆದಿದೆ. ತಮಿಳುನಾಡಿಗೆ ಲಾರಿ ಮೂಲಕ ಗೋಧಿ ಕಳ್ಳ ಸಾಗಾಣಿಕೆಯಾಗುತ್ತಿದೆ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ. ಲಾರಿ ತಡೆದು ಚಾಲಕನನ್ನು ತಡೆದು ಸ್ಥಳೀಯರು ಪ್ರಶ್ನಿಸಿದಲ್ಲದೇ ಲಾರಿ ಚಾಲಕನನ್ನು ತರಾಟೆಗೆ ತೆಗೆದುಕೊಂಡರು. ಸಕಲೇಶಪುರ ತಾಲೂಕಿನ, ಬಾಳ್ಳುಪೇಟೆಯ ಎಮ್‌ಎಸ್‌ಪಿಟಿಸಿಯಿಂದ ತಮಿಳುನಾಡಿಗೆ ಗೋಧಿ ಸಾಗಾಣಿಕೆ ಮಾಡುತ್ತಿರುವುದಾಗಿ ಲಾರಿ ಚಾಲಕನು ಈ ಸಂದರ್ಭದಲ್ಲಿ ಒಪ್ಪಿಕೊಂಡಿದ್ದಾನೆ. ಏಂ-೦೯-ಅ-೬೬೬೧ ನಂಬರ್‌ನ ಲಾರಿಯಲ್ಲಿ ಈ ಗೋಧಿ ಸಾಗಾಣಿಕೆ ಮಾಡಲಾಗುತಿತ್ತು. ನಕಲಿ ಬಿಲ್ ಸೃಷ್ಟಿಸಿ ಗೋಧಿ ಸಾಗಾಣಿಕೆ ಮಾಡಲಾಗುತ್ತಿದೆ ಎಂಬುದು ಆರೋಪವಾಗಿದೆ. ಲಾರಿ ಸಮೇತ ಚಾಲಕನನ್ನು ಪೊಲೀಸರಿಗೆ ಸ್ಥಳೀಯರು ಒಪ್ಪಿಸಿದರು. ಈತನ ಬಗ್ಗೆ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.