ಸಾರಾಂಶ
ಮೊಳಕಾಲ್ಮುರು: ರಾಯಾಪುರ ಗ್ರಾಪಂ ವ್ಯಾಪ್ತಿಯ ಮ್ಯಾಸರಹಟ್ಟಿ ಗ್ರಾಮದಲ್ಲಿ ಮಳೆಗಾಲದಲ್ಲಿಯೇ ಕುಡಿಯುವ ಹನಿ ನೀರಿಗೂ ಪರಿತಪಿಸುವಂತಾಗಿದೆ.
ಮೊಳಕಾಲ್ಮುರು: ರಾಯಾಪುರ ಗ್ರಾಪಂ ವ್ಯಾಪ್ತಿಯ ಮ್ಯಾಸರಹಟ್ಟಿ ಗ್ರಾಮದಲ್ಲಿ ಮಳೆಗಾಲದಲ್ಲಿಯೇ ಕುಡಿಯುವ ಹನಿ ನೀರಿಗೂ ಪರಿತಪಿಸುವಂತಾಗಿದೆ.
ತಾಲೂಕಿನಲ್ಲಿ ಭರ್ಜರಿ ಮಳೆಯಾಗಿ ತುಪ್ಪದಕ್ಕನಹಳ್ಳಿ ಕೆರೆ ಭರ್ತಿಯಾಗಿರುವುದೇ ಈ ಅವ್ಯವಸ್ಥೆಗೆ ಕಾರಣವಾಗಿದೆ. ಗ್ರಾಮಕ್ಕೆ ಕುಡಿಯುವ ನೀರು ಒದಗಿಸುವ ಬೋರ್‌ವೆಲ್‌ಗಳು ಕೆರೆಯ ಪಾತ್ರದಲ್ಲಿ ಇರುವುದರಿಂದ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ.ಕಳೆದ 15 ದಿನಗಳಿಂದ ಬೋರ್‌ವೆಲ್ ಸಮಸ್ಯೆಯಿಂದಾಗಿ ಕುಡಿಯಲು ಮತ್ತು ಬಳಕೆಗೆ ನೀರು ಇಲ್ಲದೇ ರಾಷ್ಟ್ರೀಯ ಹೆದ್ದಾರಿಯನ್ನು ದಾಟಿ ತೋಟಗಳಿಗೆ ತೆರಳಿ ನೀರು ತರುವ ಅನಿವಾರ್ಯತೆ ಬಂದೋದಗಿದೆ. ಸಮಸ್ಯೆಯಾಗಿದ್ದರೂ ಗ್ರಾಮ ಅಧಿಕಾರಿಗಳು ಚಕಾರ ಎತ್ತುತ್ತಿಲ್ಲ. ನಮಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಗ್ರಾಮದ ಮಹಿಳೆಯರು ಆಗ್ರಹಿಸಿದ್ದಾರೆ.ಅಷ್ಟೇ ಅಲ್ಲದೇ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆಯ ಜತಗೆ ಮೂಲ ಸೌಲಭ್ಯಗಳು ಇಲ್ಲದಾಗಿವೆ. ಬೀದಿ ದೀಪಗಳು ಇಲ್ಲದಾಗಿದ್ದು, ಚರಂಡಿಗಳು ಸ್ವಚ್ಛತೆ ಇಲ್ಲದೆ ಜನರು ಸಂಕಷ್ಟ ಅನುಭವಿಸುವಂತಾಗಿದೆ ಎಂದು ಮಾಜಿ ಗ್ರಾಪಂ ಅಧ್ಯಕ್ಷ ಸಿಲುಕ ಪಾಪಯ್ಯ ಹೇಳಿದ್ದಾರೆ.