ಸಾರಾಂಶ
- ಕಾಂಗ್ರೆಸ್ ನಾಯಕರ ಸಲಹೆ ನಯವಾಗಿಯೇ ತಿರಸ್ಕರಿಸಿದ ಅಹಿಂದ ಯುವನಾಯಕ- - -
ಕನ್ನಡಪ್ರಭ ವಾರ್ತೆ, ದಾವಣಗೆರೆದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ್ದರಿಂದ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಇನ್‌ಸೈಟ್ಸ್ ಅಕಾಡೆಮಿ ಸಂಸ್ಥಾಪಕ ಜಿ.ಬಿ.ವಿನಯಕುಮಾರ ಅವರಿಗೆ ಮಾಜಿ ಸಚಿವ ಎಚ್.ಎಂ.ರೇವಣ್ಣ ನೇತೃತ್ವದ ಮುಖಂಡರ ನಿಯೋಗ ಕಣದಿಂದ ಹಿಂದೆ ಸರಿಯುವಂತೆ ಮಾಡಿದ ಸಂಧಾನ ಪ್ರಯತ್ನ ವಿಫಲವಾಗಿದೆ.
ನಗರದಲ್ಲಿ ಜಿ.ಬಿ.ವಿನಯಕುಮಾರ ನಿವಾಸಕ್ಕೆ ಬೆಳಗ್ಗೆ ಭೇಟಿ ನೀಡಿದ್ದ ಮಾಜಿ ಸಚಿವ ಎಚ್.ಎಂ.ರೇವಣ್ಣ, ವಿಪ ಸದಸ್ಯ ಕೆ.ಅಬ್ದುಲ್ ಜಬ್ಬಾರ್, ಹಿರಿಯ ಮುಖಂಡರಾದ ಎಂ.ಟಿ.ಸುಭಾಶ್ಚಂದ್ರ, ಬಿ.ವೀರಣ್ಣ, ಹೊನ್ನಾಳಿ ಸ್ವಾಮಿ, ಯೋಗೇಶ ಸೇರಿದಂತೆ ಅನೇಕರನ್ನು ಒಳಗೊಂಡ ನಿಯೋಗವು ಸುಮಾರು ಹೊತ್ತು ವಿನಯಕುಮಾರ ಅವರ ಮನವೊಲಿಕೆಗೆ ಪ್ರಯತ್ನಿಸಿತು.ಮಾಜಿ ಸಚಿವ ಎಚ್.ಎಂ. ರೇವಣ್ಣ ನೇತೃತ್ವದ ನಿಯೋಗವು, ಈಗಾಗಲೇ ಕಾಗಿನೆಲೆ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಹಾಗೂ ಸಿಎಂ ಸಿದ್ದರಾಮಯ್ಯ ಸಹ ಇನ್ನೂ ವಯಸ್ಸು, ಅವಕಾಶ ಸಾಕಷ್ಟು ಇವೆ. ದುಡುಕದಂತೆ ತಿಳಿಹೇಳಿದ್ದಾರೆ. ಪಕ್ಷೇತರರಾಗಿ ಸ್ಪರ್ಧಿಸಿದರೆ ಕಾಂಗ್ರೆಸ್‌ಗೆ ತೊಂದರೆ ಆಗುತ್ತದೆ. ಸಮಾಧಾನದಿಂದ ಯೋಚಿಸಿ. ಪಕ್ಷದ ವಿರುದ್ಧ ಸ್ಪರ್ಧೆ ಉಚಿತವಲ್ಲ. ಸಿಎಂ ಸಲಹೆಯಂತೆ ಚುನಾವಣಾ ಕಣದಿಂದ ಹಿಂದೆ ಸರಿಯಬೇಕು ಎಂದು ವಿನಯ್‌ಗೆ ಮನವೊಲಿಸಲು ಯತ್ನಿಸಿತು. ಆದರೆ, ಕಾಂಗ್ರೆಸ್ ಮುಖಂಡರ ಸಲಹೆಯನ್ನು ಜಿ.ಬಿ.ವಿನಯಕುಮಾರ ನಯವಾಗಿಯೇ ತಿರಸ್ಕರಿಸಿದ್ದಾರೆ.
ನೀವೆಲ್ಲರೂ ನನ್ನನ್ನು ಮಾತನಾಡಿಸಲು ಮನೆಗೆ ಬಂದಿದ್ದು ಖುಷಿಯ ಸಂಗತಿ. ಹರಪನಹಳ್ಳಿ ಸೇರಿದಂತೆ ದಾವಣಗೆರೆ ಲೋಕಸಭಾ ಕ್ಷೇತ್ರಾದ್ಯಂತ ಜನರು ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕಿಳಿಯುವಂತೆ, ಚುನಾವಣೆಗೆ ಸ್ಪರ್ಧಿಸುವಂತೆ ನಿರಂತರ ಒತ್ತಾಯಿಸುತ್ತಿದ್ದಾರೆ. ಜನರಿಗೆ ನಾನು ಕೊಟ್ಟ ಮಾತನ್ನು ತಪ್ಪುವುದಕ್ಕೆ ಇಷ್ಟವಿಲ್ಲ ಎಂದು ತಮ್ಮ ಸ್ಪರ್ಧೆ ನಿಲುವು ಸ್ಪಷ್ಟಪಡಿಸಿದ್ದಾರೆ. ಅಲ್ಲದೇ, ಪಕ್ಷೇತರ ಅಭ್ಯರ್ಥಿಯಾಗಿ ಏ.18ಕ್ಕೆ ಮತ್ತೊಮ್ಮೆ ಉಮೇದುವಾರಿಕೆ ಸಲ್ಲಿಸಲು ಸಿದ್ದತೆ ಮಾಡಿಕೊಳ್ಳುತ್ತಿದ್ದೇವೆ ಎಂದಿದ್ದಾರೆ. 3 ದಶಕದಿಂದಲೂ ಜಿಲ್ಲೆಯಲ್ಲಿ ಎರಡು ಕುಟುಂಬಗಳದ್ದೇ ಪಾಳೇಗಾರಿಕೆ ಸಂಸ್ಕೃತಿ ಇದೆ. ಇದರ ವಿರುದ್ಧ ಜನರಿದ್ದಾರೆ ಎಂದೂ ಪುನರುಚ್ಚರಿಸಿದ್ದಾರೆ.ಕಾಂಗ್ರೆಸ್ ಬಂಡಾಯಗಾರ ವಿನಯಕುಮಾರ್ ಮನವೊಲಿಕೆಗೆ ಎಚ್.ಎಂ.ರೇವಣ್ಣ, ವಿಪ ಸದಸ್ಯ ಕೆ.ಅಬ್ದುಲ್ ಜಬ್ಬಾರ್, ಹಿರಿಯ ಮುಖಂಡರಾದ ಎಂ.ಟಿ.ಸುಭಾಶ್ಚಂದ್ರ, ಬಿ.ವೀರಣ್ಣ, ಹೊನ್ನಾಳಿ ಸ್ವಾಮಿ, ಯೋಗೇಶ ಸೇರಿದಂತೆ ಮುಖಂಡರ ನಿಯೋಗವು ಆಗಮಿಸಿತ್ತು.
- - --14ಕೆಡಿವಿಜಿ2:
ದಾವಣಗೆರೆಯಲ್ಲಿ ತಮ್ಮ ನಿವಾಸಕ್ಕೆ ಭೇಟಿ ನೀಡಿದ್ದ ಮಾಜಿ ಸಚಿವ ಎಚ್.ಎಂ.ರೇವಣ್ಣ, ವಿಪ ಸದಸ್ಯ ಕೆ.ಅಬ್ದುಲ್ ಜಬ್ಬಾರ್ ನೇತೃತ್ವದ ಕಾಂಗ್ರೆಸ್ ನಿಯೋಗಕ್ಕೆ ವಿನಯಕುಮಾರ ಮತ್ತು ಬೆಂಬಲಿಗರು ಬೀಳ್ಕೊಟ್ಟರು.