ಸಾರಾಂಶ
ಆನಂದಪುರ ಇಲ್ಲಿಗೆ ಸಮೀಪದ ಮುರುಘ ಮಠದಲ್ಲಿ ನಡೆದ 582ನೇ ಮಾಸಿಕ ಶಿವಾನುಭವ ಗೋಷ್ಠಿಯಲ್ಲಿ ಡಾ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಆನಂದಪುರ
12ನೇ ಶತಮಾನದಲ್ಲಿ ಎಲ್ಲರೂ ಒಂದೇ ಎಂಬ ಸಮಾನತೆ ಸಾರಿದ್ದು ವಿಶ್ವಗುರು ಬಸವಣ್ಣ ಎಂದು ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.ಸಮೀಪದ ಮುರುಘಾಮಠದಲ್ಲಿ ಸೋಮವಾರ ನಡೆದ 582ನೇ ಮಾಸಿಕ ಶಿವಾನುಭವ ಗೋಷ್ಠಿಯಲ್ಲಿ ಆಶೀರ್ವದಿಸಿದ ಅವರು, 12ನೇ ಶತಮಾನದಲ್ಲಿ ಬಸವಣ್ಣನವರು ಜಾತಿ ಭೇದವನ್ನು ಮರೆತು ನಾವೆಲ್ಲರೂ ಒಂದೇ ಎಂಬ ಸಮಾನತೆಯನ್ನು ಸಾರಿದ ವ್ಯಕ್ತಿ. ಬಸವಣ್ಣನ ಕಾಲದ ವಚನ ಸಾಹಿತ್ಯವು ಮಾನವ ಕುಲವನ್ನು ಮೌಲ್ಯಗಳ ನೆಲೆಗಟ್ಟಿನಲ್ಲಿ ನಡೆಯುವಂತೆ ಮಾಡಿದೆ ಎಂದು ಹೇಳಿದರು.
12ನೇ ಶತಮಾನದಲ್ಲಿ ಬಸವಣ್ಣನವರು ಗಂಡು-ಹೆಣ್ಣು ಜಾತಿ ಭೇದವಿಲ್ಲದೆ ಎಲ್ಲರೂ ಸಮಾನರು ಎಂದು ಸಾರಿದಂತಹ ವ್ಯಕ್ತಿ. ಬಸವಣ್ಣನವರ ಈ ಸಮಾನತೆ 21ನೆಯ ಶತಮಾನಕ್ಕೆ ಅತ್ಯವಶ್ಯಕವಾಗಿದೆ. ಇಂದಿನ ಶ್ರಾವಣ ಚಿಂತನೆಗಳು ಜನರನ್ನು ಉತ್ತಮ ಚಿಂತನಕಾರಿಯಾಗಲು ಸಹಕಾರಿಯಾಗಿದೆ ಎಂದು ಹೇಳಿದರು.ಸಾಗರ ರೋಟರಿ ಸಂಸ್ಥೆಯ ಅಧ್ಯಕ್ಷ ಡಾ.ನಿರಂಜನ್ ಹೆಗಡೆ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಉತ್ತಮ ವ್ಯಕ್ತಿಗಳಾಗಬೇಕಾದರೆ ಬಸವಣ್ಣನವರ ಆದರ್ಶ ತತ್ವಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಸಾಗರ ರೋಟರಿ ಚಾರ್ಟರಿ ಟ್ರಸ್ಟ್ ಅಧ್ಯಕ್ಷ ಮಹೇಶ್ ಅಂಕದ, ಗೌರವಾಧ್ಯಕ್ಷ ಡಾ.ರಾಜ ನಂದಿನಿ, ಇನರ್ ಮಿಲ್ ಕ್ಲಬ್ ನ ಪ್ರವೀಣ್ ವೆಂಕಟ್ ರಾವ್ ಇತರರು ಉಪಸ್ಥಿತರಿದ್ದರು.