ದೆಹಲಿಯ ಆರ್‌ಡಿಸಿ ಪರೇಡ್‌ನಲ್ಲಿ ಭಾಗವಹಿಸಿದ ವಿವೇಕಾನಂದ ಕಾಲೇಜು ಎನ್‌ಸಿಸಿ ಕೆಡೆಟ್‌ಗಳು

| Published : Feb 11 2025, 12:45 AM IST

ದೆಹಲಿಯ ಆರ್‌ಡಿಸಿ ಪರೇಡ್‌ನಲ್ಲಿ ಭಾಗವಹಿಸಿದ ವಿವೇಕಾನಂದ ಕಾಲೇಜು ಎನ್‌ಸಿಸಿ ಕೆಡೆಟ್‌ಗಳು
Share this Article
  • FB
  • TW
  • Linkdin
  • Email

ಸಾರಾಂಶ

ದೆಹಲಿಯ ಆರ್‌ಡಿಸಿ ಪರೇಡ್‌ನಲ್ಲಿ ಭಾಗವಹಿಸಿದ್ದ ಪುತ್ತೂರು ವಿವೇಕಾನಂದ ಕಾಲೇಜಿನ ಮೂವರು ಎನ್‌ಸಿಸಿ ಕೆಡೆಟ್ ವಿದ್ಯಾರ್ಥಿಗಳಿಗೆ ಸೋಮವಾರ ಕಾಲೇಜಿನಲ್ಲಿ ಅಭಿನಂದನೆ ಸಲ್ಲಿಸಲಾಯಿತು. ಈ ವಿಶೇಷ ಸಾಧನೆ ಮಾಡಿದ ಎನ್‌ಸಿಸಿ ಘಟಕದ ವಿದ್ಯಾರ್ಥಿಗಳಾದ ಜೆಯುಒ ಸುಜಿತ್, ಜೆಯುಒ ಲಹರಿ, ಜೆಯುಒ ಶುಭದ ಆರ್. ಪ್ರಕಾಶ್ ಅವರನ್ನು ಸನ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಪುತ್ತೂರು

ದೆಹಲಿಯ ಆರ್‌ಡಿಸಿ ಪರೇಡ್‌ನಲ್ಲಿ ಭಾಗವಹಿಸಿದ್ದ ಪುತ್ತೂರು ವಿವೇಕಾನಂದ ಕಾಲೇಜಿನ ಮೂವರು ಎನ್‌ಸಿಸಿ ಕೆಡೆಟ್ ವಿದ್ಯಾರ್ಥಿಗಳಿಗೆ ಸೋಮವಾರ ಕಾಲೇಜಿನಲ್ಲಿ ಅಭಿನಂದನೆ ಸಲ್ಲಿಸಲಾಯಿತು. ಈ ವಿಶೇಷ ಸಾಧನೆ ಮಾಡಿದ ಎನ್‌ಸಿಸಿ ಘಟಕದ ವಿದ್ಯಾರ್ಥಿಗಳಾದ ಜೆಯುಒ ಸುಜಿತ್, ಜೆಯುಒ ಲಹರಿ, ಜೆಯುಒ ಶುಭದ ಆರ್. ಪ್ರಕಾಶ್ ಅವರನ್ನು ಸನ್ಮಾನಿಸಲಾಯಿತು.ಈ ಸಂದರ್ಭ ಮಾತನಾಡಿದ ಕಾಲೇಜು ಆಡಳಿತ ಮಂಡಳಿ ಸಂಚಾಲಕ ಮುರಳಿ ಕೃಷ್ಣ, ಕಾಲೇಜಿನ ಎನ್‌ಸಿಸಿ ಘಟಕ ಇದುವರೆಗೆ ಹಲವಾರು ವಿಶೇಷ ಸಾಧನೆಯನ್ನು ಮಾಡಿ ಅಪಾರ ಗೌರವವನ್ನು ಪಡೆದಿದೆ. ಎನ್‌ಸಿಸಿ ಘಟಕದ ಈ ಮೂವರು ವಿದ್ಯಾರ್ಥಿಗಳ ಸಾಧನೆ ವಿಶೇಷವಾದದ್ದು. ವಿದ್ಯಾರ್ಥಿಗಳು ತಮ್ಮ ಗುರಿಯನ್ನು ಸಾಧಿಸುವಂತಾಗಲು ಮನೆಯಲ್ಲಿಯೂ ಒಂದೊಳ್ಳೆಯ ವಾತಾವರಣ ಸೃಷ್ಟಿಯಾಗಬೇಕು ಎಂದು ಹೇಳಿದರು.ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಪ್ರೊ. ಶ್ರೀಪತಿ ಕಲ್ಲೂರಾಯ ಕೆ.ಎನ್., ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಷ್ಣು ಗಣಪತಿ ಭಟ್ ಶುಭ ಹಾರೈಸಿದರು. ಸನ್ಮಾನ ಸ್ವೀಕರಿಸಿದ ವಿದ್ಯಾರ್ಥಿಗಳು ಅನಿಸಿಕೆಗಳನ್ನು ಹಂಚಿಕೊಂಡರು. ಎನ್‌ಸಿಸಿ ಕೆಡೆಟ್‌ಗಳನ್ನು ವಿಶೇಷ ಚಂಡೆ ವಾದನದ ಮೂಲಕ ಪುತ್ತೂರಿನ ಕೋಟಿ ಚೆನ್ನಯ ಬಸ್ ನಿಲ್ದಾಣದಿಂದ ಮೆರವಣಿಗೆಯೊಂದಿಗೆ ಕಾಲೇಜಿಗೆ ಕರೆತರಲಾಯಿತು. ಕಾರ್ಯಕ್ರಮದಲ್ಲಿ ಎನ್‌ಸಿಸಿ ಘಟಕದ ಅಧಿಕಾರಿ ಭಾಮಿ, ಲೆ. ಅತುಲ್ ಶೆಣೈ, ಉಪಪ್ರಾಂಶುಪಾಲ ಪ್ರೊ.ಶಿವಪ್ರಸಾದ್ ಕೆ.ಎಸ್., ಕಾಲೇಜಿನ ವಿಶೇಷ ಅಧಿಕಾರಿ ಮತ್ತು ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಶ್ರೀಧರ್ ನಾಯ್ಕ್, ವಾಣಿಜ್ಯ ವಿಭಾಗದ ಮುಖ್ಯಸ್ಥೆ ಹಾಗೂ ಐಕ್ಯೂಎಸಿ ಸಂಯೋಜಕಿ ಡಾ.ರವಿಕಲಾ ಮತ್ತು ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳ ಹೆತ್ತವರು ಉಪಸ್ಥಿತರಿದ್ದರು.ವಿದ್ಯಾರ್ಥಿಗಳಾದ ಶ್ರೀಜೇಶ್ ಸ್ವಾಗತಿಸಿದರು. ದೀಕ್ಷಾ ಯು.ಜಿ. ವಂದಿಸಿದರು. ನಿಭಾ ಡಿ. ನಿರ್ವಹಿಸಿದರು.