ರಾಷ್ಟ್ರಪ್ರೇಮ, ಅಚಲ ವಿಶ್ವಾಸ ಹೊಂದಿದ್ದ ವಿವೇಕಾನಂದ: ರವೀಶ್‌

| Published : Jan 13 2024, 01:32 AM IST

ಸಾರಾಂಶ

ವಿದ್ಯಾರ್ಥಿಗಳು ಪರಿಪೂರ್ಣತೆಯ ಬದುಕನ್ನು ರೂಪಿಸಿಕೊಳ್ಳಬೇಕಾದರೆ, ಸ್ವಾಮಿವಿವೇಕಾನಂದ ಆದರ್ಶಗಳನ್ನು ಪಾಲಿಸಬೇಕು ಎಂದು ಪ್ರಾಂಶುಪಾಲ ಎಂ.ರವೀಶ್ ಪ್ರತಿಪಾದಿಸಿದರು.

ಕನ್ನಡಪ್ರಭ ವಾರ್ತೆ ಚಳ್ಳಕೆರೆ/ ಹಿರಿಯೂರು

ಸ್ವಾಮಿವಿವೇಕಾನಂದ ಆದರ್ಶಗಳು ನಮ್ಮೆಲ್ಲರಿಗೂ ಪ್ರೇರಣೆಯಾಗಿವೆ. ರಾಷ್ಟ್ರಭಕ್ತಿ ಹಾಗೂ ರಾಷ್ಟ್ರ ಪ್ರೇಮದ ಬಗ್ಗೆ ಅಚಲವಾದ ವಿಶ್ವಾಸ ಹೊಂದಿದ್ದ ಅವರು ವಿದೇಶಿಗರೂ ಸಹ ಅವರ ಮಾತುಗಳಿಂದ ಪರಿವರ್ತನೆಯಾಗುತ್ತಿದ್ದರು. ಇಂತಹ ಮಹಾನ್ ವ್ಯಕ್ತಿಯ ಜನ್ಮದಿನಾಚರಣೆಯಿಂದ ನಾವೆಲ್ಲರೂ ಅವರ ತತ್ವಾ ದರ್ಶಗಳನ್ನು ಮೈಗೂಡಿಸಿಕೊಂಡು ನಡೆಯುವ ಸಂಕಲ್ಪ ಮಾಡೋಣವೆಂದು ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಎಂ.ರವೀಶ್ ತಿಳಿಸಿದರು.

ಅವರು, ಶುಕ್ರವಾರ ಕಾಲೇಜಿನಲ್ಲಿ ಸ್ವಾಮಿವಿವೇಕಾನಂದ ಜಯಂತಿಗೆ ಚಾಲನೆ ನೀಡಿ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿದ್ಯಾರ್ಥಿಗಳು ಪರಿಪೂರ್ಣತೆಯ ಬದುಕನ್ನು ರೂಪಿಸಿಕೊಳ್ಳಬೇಕಾದರೆ, ಸ್ವಾಮಿವಿವೇಕಾನಂದ ಆದರ್ಶಗಳನ್ನು ಪಾಲಿಸಿ. ಅಂದು ಸ್ವಾಮಿವಿವೇಕಾನಂದರು ಬೋಧಿಸಿದ ಅನೇಕ ವಿಚಾರಗಳು ಇಂದಿಗೂ ಪ್ರಚಲಿತ ಎಂದರು.

ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಚಂದ್ರಶೇಖರ್, ವಸಂತಕುಮಾರ್, ಬೆಳಗಟ್ಟನಾಗರಾಜು, ಜಬೀವುಲ್ಲಾ, ಕುಮಾರಸ್ವಾಮಿ, ಲಲಿತಮ್ಮ, ಪುಪ್ಪಲತಾ, ರೇಖಾ, ಜಾನಕಮ್ಮ, ಈಶ್ವರಪ್ಪ, ಎನ್‌ಎಸ್‌ಎಸ್ ಅಧಿಕಾರಿ ಬಿ.ಶಾಂತಕುಮಾರಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಪೋಟೋ೧೨ಸಿಎಲ್‌ಕೆ೧: ಚಳ್ಳಕೆರೆ ನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಸ್ವಾಮಿವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಎಂ.ರವೀಶ್ ಮಾತನಾಡಿದರು.

ಸ್ವಾಮಿ ವಿವೇಕಾನಂದರ ತತ್ವಾದರ್ಶ ಸದಾಸ್ಫೂರ್ತಿ: ಲಕ್ಷ್ಮಿಕಾಂತ್‌

ಹಿರಿಯೂರು: ಸ್ವಾಮಿ ವಿವೇಕಾನಂದರ 161 ನೇ ಜಯಂತಿ ಪ್ರಯುಕ್ತ ನಗರದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಶೋಭಾಯಾತ್ರೆಯನ್ನು ಅದ್ಧೂರಿಯಾಗಿ ನಡೆಸಲಾಯಿತು.

ಡಿಸಿಸಿ ಬ್ಯಾoಕ್ ಮಾಜಿ ಜಿಲ್ಲಾಧ್ಯಕ್ಷ ಎನ್. ಆರ್. ಲಕ್ಷ್ಮಿಕಾಂತ್ ಯಾತ್ರೆಗೆ ಚಾಲನೆ ನೀಡಿ ಮಾತನಾಡಿ, ಭಾರತದ ಅತ್ಯಂತ ಪ್ರಭಾವಿ ತತ್ವಜ್ಞಾನಿಗಳಲ್ಲಿ ವಿವೇಕಾನಂದರು ಒಬ್ಬರು. ನಿರ್ಭಯತೆ ಮತ್ತು ಸಮಸ್ಯೆಗಳ ಬಗ್ಗೆ ವಿಶಾಲ ದೃಷ್ಟಿಕೋನ ಹೊಂದಿದ್ದ ಅವರು ಯುವಜನತೆಗೆ ನೀಡಿದ ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲಬೇಡಿ ಎಂಬ ಕರೆಯು ಯುವಕರನ್ನು ಸರ್ವಕಾಲಕ್ಕೂ ಎಚ್ಚರಿಸುತ್ತದೆ. ಬರೀ ಭಾರತಕ್ಕೆ ಮಾತ್ರವಲ್ಲದೆ ಪ್ರಪಂಚದ ಇತರೆ ದೇಶಗಳವರೆಗೆ ಅವರ ತತ್ವಗಳು,ಅವರು ಬದುಕಿದ ರೀತಿ ಸ್ಫೂರ್ತಿಯಾಗಿದೆ ಎಂದರು. ನಗರದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಯಾತ್ರೆಯಲ್ಲಿ ಭಾಗವಹಿಸಿ ಶೋಭಾ ಯಾತ್ರೆ ಯಶಸ್ವಿಗೊಳಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ವಿಶ್ವನಾಥ್, ಎ ರಾಘವೇಂದ್ರ,ವೆಂಕಟೇಶ್, ತಾಲೂಕು ಅಧ್ಯಕ್ಷ ಮಂಜೇಶ್, ತಾಲೂಕು ಸಂಚಾಲಕ ರಾಮು, ನಗರ ಕಾರ್ಯದರ್ಶಿ ಸುದೀಪ್, ನಗರ ಸಹ ಕಾರ್ಯದರ್ಶಿ ಅಂಕಿತಾ, ಯೋಗೇಶ್, ಶ್ರೀದೇವಿ, ಜಾನು, ಪ್ರಿಯದರ್ಶಿನಿ, ಮೇಘ, ಪಲ್ಲವಿ, ಶ್ರೀನಿವಾಸ್, ಸಂಜಯ್,ಮಧು, ಸರ್ವೇಶ್, ಹರ್ಷವರ್ಧನ್ ಮುಂತಾದ ಎಬಿವಿಪಿ ಕಾರ್ಯಕರ್ತರು ಮತ್ತು ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.