ವಾಲಿಬಾಲ್ ಪಂದ್ಯಾವಳಿ: ಎಸ್.ಬಿ.ಎಂ ಶಾಲೆ ಕ್ರೀಡಾಪಟುಗಳು ಪ್ರಥಮ

| Published : Aug 30 2024, 01:00 AM IST

ಸಾರಾಂಶ

Volleyball Tournament: SBM School Athletes First

ಯಾದಗಿರಿ: ಸಂಭ್ರಮ ಸಂಸ್ಥೆ ಬೆಂಗಳೂರು ಏಶಿಯನ್ ಇಂಟರ್ ನ್ಯಾಶನಲ್ ಇಂಡಿಯಾ ವತಿಯಿಂದ ಇತ್ತೀಚೆಗೆ ಬೆಂಗಳೂರಿನಲ್ಲಿ ಏರ್ಪಡಿಸಿದ್ದ 17 ವರ್ಷ ವಯೋಮಿತಿ ಬಾಲಕರ ರಾಷ್ಟ್ರಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ತಾಲೂಕಿನ ಸೈದಾಪೂರ ಪಟ್ಟಣದ ಭಗವಾನ್ ಮಹಾವೀರ ಶಾಲಾ ಕ್ರೀಡಾಪಟುಗಳು ಪ್ರಥಮ ಸ್ಥಾನ ಪಡೆಯುವ ಮೂಲಕ ಕಪ್ ಮುಡಿಗೇರಿಸಿದ್ದಾರೆ.ಈ ಮಹತ್ವದ ಪಂದ್ಯಾವಳಿಯಲ್ಲಿ ಶಾಲೆಯ ವಿದ್ಯಾರ್ಥಿಗಳಾದ ಕಾರ್ತಿಕ್, ಮಹೇಶ, ವಿಶ್ವನಾಥ, ಪರಶುರಾಮ. ಸಾಜೀದ್ ಆಲಂ, ಮದನ್, ಶರಣಬಸವ, ಸಂಖೇತ, ಬೀರಪ್ಪ, ವಿರೇಶ, ಸಂಜಯ, ಸಂಪತ್ ಕ್ರೀಡಾಪಟುಗಳು ಉತ್ತಮ ಪ್ರದರ್ಶನ ನೀಡುವ ಮೂಲಕ ಪ್ರಥಮ ಸ್ಥಾನ ಗಳಿಸಿ, ಶಾಲೆಗೆ ಹಾಗೂ ಪಟ್ಟಣಕ್ಕೆ ಕೀರ್ತಿ ತಂದಿದ್ದಾರೆ.ವಿದ್ಯಾರ್ಥಿಗಳ ಕ್ರೀಡಾ ಸಾಧನೆಗೆ ಶಾಲೆಯ ಮುಖ್ಯಸ್ಥರಾದ ಯೋಗೇಶಕುಮಾರ ದೋಕಾ, ಮುಖ್ಯೊಪಾಧ್ಯಯರು, ದೈಹಿಕ ಶಿಕ್ಷಕರು ಹಾಗೂ ಪೋಷಕರು ಸಂತಸ ವ್ಯಕ್ತಪಡಿಸಿದ್ದಾರೆ.

------

ಫೋಟೊ: 29ವೈಡಿಆರ್7: ರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಯಾದಗಿರಿ ತಾಲೂಕಿನ ಸೈದಾಪೂರ ಪಟ್ಟಣದ ಭಗವಾನ್ ಮಹಾವೀರ ಶಾಲಾ ಕ್ರೀಡಾಪಟುಗಳು ಪ್ರಥಮ ಸ್ಥಾನ ಪಡೆಯುವ ಮೂಲಕ ಕಪ್ ಮುಡಿಗೇರಿಸಿಕೊಂಡರು.