ರಾಷ್ಟ್ರದ ಭವಿಷ್ಯದ ಹಿತದೃಷ್ಟಿಯಿಂದ ಬಿಜೆಪಿಗೆ ಮತ ನೀಡಿ

| Published : May 03 2024, 01:09 AM IST

ರಾಷ್ಟ್ರದ ಭವಿಷ್ಯದ ಹಿತದೃಷ್ಟಿಯಿಂದ ಬಿಜೆಪಿಗೆ ಮತ ನೀಡಿ
Share this Article
  • FB
  • TW
  • Linkdin
  • Email

ಸಾರಾಂಶ

ಕಾಂಗ್ರೆಸ್‌ಗರು ನನ್ನ ವಿರುದ್ಧವೇ ಸುಳ್ಳು ಪ್ರಚಾರ ಮಾಡುತ್ತಿದ್ದು, ಅವುಗಳನ್ನು ಬದಿಗೊತ್ತಿ ರಾಷ್ಟ್ರದ ಭವಿಷ್ಯದ ಹಿತದೃಷ್ಟಿಯಿಂದ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಅವರಿಗೆ ಮತ ನೀಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸಲು ಶಾಸಕ ಬಾಲಚಂದ್ರ ಜಾರಕಿಹೊಳಿ ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ಮೂಡಲಗಿ

ಕಾಂಗ್ರೆಸ್‌ಗರು ನನ್ನ ವಿರುದ್ಧವೇ ಸುಳ್ಳು ಪ್ರಚಾರ ಮಾಡುತ್ತಿದ್ದು, ಅವುಗಳನ್ನು ಬದಿಗೊತ್ತಿ ರಾಷ್ಟ್ರದ ಭವಿಷ್ಯದ ಹಿತದೃಷ್ಟಿಯಿಂದ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಅವರಿಗೆ ಮತ ನೀಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸಲು ಶಾಸಕ ಬಾಲಚಂದ್ರ ಜಾರಕಿಹೊಳಿ ಮನವಿ ಮಾಡಿದರು.

ಪಟ್ಟಣದ ಬಸವ ಮಂಟಪದಲ್ಲಿ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಪರ ಮತಯಾಚಿಸಿ ಮಾತನಾಡಿದ ಅವರು, ಕಾಂಗ್ರೆಸ್‌ನ ಅಪಪ್ರಚಾರಗಳಿಗೆ ಕಿವಿಗೊಡಬೇಡಿ. ಕಳೆದ ಏ.28 ರಂದು ಬೆಳಗಾವಿಯಲ್ಲಿ ಜರುಗಿದ ಪ್ರಧಾನಿಗಳ ಚುನಾವಣಾ ರ್‍ಯಾಲಿಯಲ್ಲಿ ಅರಭಾವಿ ಮತಕ್ಷೇತ್ರದ ಕಾರ್ಯಕರ್ತರು ಗೈರಾಗಿರುವುದನ್ನೇ ಬಂಡವಾಳ ಮಾಡಿಕೊಂಡು ಅಪಪ್ರಚಾರವನ್ನು ನಮ್ಮ ವಿರೋಧಿಗಳು ಮಾಡುತ್ತಿದ್ದಾರೆ. ಸದರಿ ಮೋದಿಯವರ ಕಾರ್ಯಕ್ರಮ ಸಂಜೆ ಸಮಯದಲ್ಲಿ ನಿಗದಿಯಾಗಿತ್ತು. ಹೀಗಾಗಿ ಅಗತ್ಯವಿರುವ ಎಲ್ಲ ವ್ಯವಸ್ಥೆಗಳನ್ನು ಮಾಡಿಕೊಳ್ಳುವಂತೆ ನಮ್ಮ ಕಾರ್ಯಕರ್ತರಿಗೆ ಮೊದಲೇ ಹೇಳಲಾಗಿತ್ತು. ಆದರೆ, ಕಾರ್ಯಕ್ರಮದ ವೇಳಾಪಟ್ಟಿಯು ಸಂಜೆಯ ಬದಲಿಗೆ ಬೆಳಗ್ಗೆ 10 ಗಂಟೆಗೆ ನಿಗದಿಯಾಗಿತ್ತು. ನಮ್ಮ ಕಾರ್ಯಕರ್ತರಿಗೆ ಹೋಗಲು ಅನಾನುಕೂಲವಾಗಿದ್ದರಿಂದ ಈ ನಿರ್ಧಾರವನ್ನು ಕೈಗೊಳ್ಳಲಾಯಿತು. ಇದನ್ನು ಕಾಂಗ್ರೆಸ್ ಪಕ್ಷದವರು ಸುಳ್ಳು ವದಂತಿಗಳನ್ನು ಹಬ್ಬಿಸಿಕೊಂಡು ತಿರುಗಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ನಮ್ಮ ಕಾರ್ಯಕರ್ತರಲ್ಲಿ ಗೊಂದಲಗಳನ್ನು ಸೃಷ್ಟಿಸುತ್ತಿದ್ದಾರೆ. ವಿರೋಧಿಗಳಿಗೆ ಹೇಳಲು ಯಾವುದೇ ಸ್ಪಷ್ಟ ವಿಚಾರಗಳಿಲ್ಲ. ಇವುಗಳ ಕಡೆಗೆ ಗಮನ ನೀಡದೇ ಮೇ.7 ರಂದು ನಡೆಯುವ ಚುನಾವಣೆಯಲ್ಲಿ ಹಿಂದೆ-ಮುಂದೆ ನೋಡದೇ ಗಟ್ಟಿಯಾಗಿ ಬಿಜೆಪಿ ಮತ ನೀಡುವಂತೆ ಕೋರಿದರು.

ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಮತಯಾಚಿಸಿ ಮಾತನಾಡಿ, ಮೂಡಲಗಿ ಇತಿಹಾಸದಲ್ಲಿ ದಾಖಲೆ ಬರೆಯುವ ಸಮಾವೇಶ ಇದಾಗಿದೆ. ಈ ದೇಶದ ಭವಿಷ್ಯ ನರೇಂದ್ರ ಮೋದಿ ಮೇಲೆ ನಿಂತಿದೆ. ಮೋದಿ ಅವರಂತಹ ನಾಯಕ ನಮಗೆ ಸಿಕ್ಕಿದ್ದು ನಮ್ಮ ಸೌಭಾಗ್ಯ. ನರೇಂದ್ರ ಮೋದಿ ನಮ್ಮ ನಾಯಕ ಮುಂದಿನ ಪ್ರಧಾನಿಯಾದರೇ, ಇಂಡಿಯಾ ಮೈತ್ರಿಕೂಟದ ನಾಯಕ ಯಾರು ಎಂದು ಪ್ರಶ್ನಿಸಿದರು.

ನಮಗೆ ನಿಜವಾದ ಗ್ಯಾರಂಟಿ ದೇಶದ ರಕ್ಷಣೆ, ದೇಶದ ಸುಭದ್ರತೆ, ದೇಶದ ಗೌರವ ಇದುವೇ ಮೋದಿಯವರ ಗ್ಯಾರಂಟಿ. ಕೇಂದ್ರದ ಅನೇಕ ಯೋಜನೆಗಳು ಎಲ್ಲ ವರ್ಗದವರಿಗೆ ಸಿಗುತ್ತಿದೆ. ಬಿಜೆಪಿ ಸರ್ಕಾರ ಎಲ್ಲ ವರ್ಗದವರಿಗೆ ಎಲ್ಲ ಯೋಜನೆಗಳು ನೀಡಿದೆ. ಕಾಂಗ್ರೆಸ್ ಅಲ್ಪಸಂಖ್ಯಾತರ ತುಷ್ಟೀಕರಣ ಮಾಡುತ್ತಿದೆ. ವಿಧಾನ ಸಭೆಯಲ್ಲಿ ಪಾಕಿಸ್ತಾನ ಜಿಂದಾಬಾದ ಅಂದರೂ ಅದನ್ನು ಖಂಡಿಸುವ ಕೆಲಸ ಕಾಂಗ್ರೆಸ್ ಮಾಡಲಿಲ್ಲ. ನಾನು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಆಯ್ಕೆಯಾದ ನಂತರ ಬೆಳಗಾವಿಯನ್ನು ಸಾಕಷ್ಟು ಅಭಿವೃದ್ಧಿ ಮಾಡುತ್ತೇನೆ. ಬೆಳಗಾವಿಯನ್ನು ಬೆಂಗಳೂರಿನ ಹಾಗೆ ರಾಜ್ಯದ 2ನೇ ರಾಜಧಾನಿಯನ್ನಾಗಿ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ, ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಸ ಪಾಟೀಲ, ಮಂಡಳ ಅಧ್ಯಕ್ಷ ಮಹಾದೇವ ಶೆಕ್ಕಿ, ಜೆಡಿಎಸ್ ಬ್ಲಾಕ್ ಅಧ್ಯಕ್ಷ ಪ್ರಕಾಶ ಕಾಳಶೆಟ್ಟಿ, ಸೇರಿದಂತೆ ಸಾವಿರಾರು ಕಾರ್ಯಕರ್ತರು ಉಪಸ್ಥಿತರಿದ್ದರು. ಪರಸಪ್ಪ ಬಬಲಿ ಕಾರ್ಯಕ್ರಮ ನಿರೂಪಿಸಿದರು.ಜಗದೀಶ ಶೆಟ್ಟರ್ ಅವರದ್ದು ಉತ್ತಮ ನಡುವಳಿಕೆಯಾಗಿದೆ. ಸಿಟ್ಟಂತೂ ಅವರ ಜೀವನದಲ್ಲಿಯೇ ಬರುವುದಿಲ್ಲ. ಸೌಜನ್ಯ ಸ್ವಭಾವದವರಾಗಿದ್ದಾರೆ. ಇವರಿಗೆ ಮತ ಕೊಟ್ಟರೇ ಮೋದಿಯವರಿಗೆ ನೀಡಿದಂತಾಗುತ್ತದೆ. ಸಂಸತ್ತಿಗೆ ಆಯ್ಕೆಯಾಗಿ ಹೋದರೆ ನಮ್ಮದೇ ಸರ್ಕಾರವಿರುತ್ತದೆ. ಶೆಟ್ಟರ್ ಅನುಭವವನ್ನು ಪಡೆದು ಅಭಿವೃದ್ಧಿ ಕಾರ್ಯಗಳನ್ನು ಮಾಡಿಸಬಹುದು. ರಾಜ್ಯದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿರುವ ಶೆಟ್ಟರ್ ಅವರು ನಮ್ಮ ಬೆಳಗಾವಿಯಿಂದ ಸ್ಪರ್ಧೆ ಮಾಡಿರುವುದು ನಮ್ಮ ಅದೃಷ್ಟವಾಗಿದೆ.

-ಬಾಲಚಂದ್ರ ಜಾರಕಿಹೊಳಿ, ಶಾಸಕ.

----------

ನಾನು 12 ಜಿಲ್ಲೆಗಳ ಪ್ರವಾಸ ಮಾಡಿದ್ದೇನೆ. ಮೂಡಲಗಿಯಲ್ಲಿ ಜನ ತೊರುತ್ತಿರುವ ಹುಮ್ಮಸ್ಸು ಬೇರೆಲ್ಲೂ ನೋಡಿಲ್ಲ. ರಾಜಕಾರಣದಲ್ಲಿ ಯಾವ ರೀತಿ ಇರಬೇಕು ಎಂದು ಬಾಲಚಂದ್ರ ಜಾರಕಿಹೊಳಿ ತೋರಿಸಿಕೊಟ್ಟಿದ್ದಾರೆ. ಸೂರ್ಯ-ಚಂದ್ರ ಹುಟ್ಟುವುದು ಎಷ್ಟು ಸತ್ಯವೂ ಮೋದಿಯವರು ಮತ್ತೆ ಪ್ರಧಾನಿ ಆಗುವುದು ಅಷ್ಟೇ ಸತ್ಯ. ಹಾಗಾಗಿ ಈ ಹಿಂದೆ ದಿ. ಸುರೇಶ್ ಅಂಗಡಿಯವರಿಗೆ ನೀಡಿದ ಲೀಡ್ ಕ್ಕಿಂತ ಹೆಚ್ಚಿನ ಲೀಡ್ ಜಗದೀಶ್ ಶೆಟ್ಟರ್ ಅವರಿಗೆ ನೀಡಬೇಕು.

-ಮುರುಗೇಶ ನಿರಾಣಿ,

ಮಾಜಿ ಸಚಿವ.