ಸುಸ್ಥಿರ ದೇಶಕ್ಕಾಗಿ ಮತ ಚಲಾಯಿಸಿ: ಸಿಇಒ

| Published : Apr 23 2024, 12:49 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ: ನಾವು ಚಲಾವಣೆ ಮಾಡುವ ಮತ ಬಲಿಷ್ಠ ಹಾಗೂ ಸುಸ್ಥಿರ ದೇಶ ಕಟ್ಟಲು ಸಹಾಯ ಮಾಡುತ್ತದೆ. ಯಾವುದೇ ಆಸೆ ಆಮೀಷಕ್ಕೆ ಬಲಿಯಾಗದೆ ಮತ ಚಲಾಯಿಸಿ ಎಂದು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಹಾಗೂ ಜಿಪಂ ಸಿಇಒ ರಿಶಿ ಆನಂದ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ: ನಾವು ಚಲಾವಣೆ ಮಾಡುವ ಮತ ಬಲಿಷ್ಠ ಹಾಗೂ ಸುಸ್ಥಿರ ದೇಶ ಕಟ್ಟಲು ಸಹಾಯ ಮಾಡುತ್ತದೆ. ಯಾವುದೇ ಆಸೆ ಆಮೀಷಕ್ಕೆ ಬಲಿಯಾಗದೆ ಮತ ಚಲಾಯಿಸಿ ಎಂದು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಹಾಗೂ ಜಿಪಂ ಸಿಇಒ ರಿಶಿ ಆನಂದ ಹೇಳಿದರು.ವಿಜಯಪುರ ಜಿಲ್ಲಾ ಪಂಚಾಯತಿಯಲ್ಲಿ ನಡೆದ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ, ಜಿಲ್ಲಾ ಸ್ವೀಪ್ ಸಮಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಹಯೋಗದಲ್ಲಿ ನವಸ್ಪೂರ್ತಿ ಸಂಘ, ಮಾಜಿ ದೇವದಾಸಿ ಪುನರ್ವಸತಿ ಯೋಜನೆ, ಏಡ್ಸ್ ಜಾಗೃತಿ ಮಹಿಳಾ ಸಂಘ ಸಹಯೋಗದಲ್ಲಿ ನಡೆದ ಮತದಾನ ಜಾಗೃತಿ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ನಾವು ಚುನಾಯಿಸುವ ಜನಪ್ರತಿಧಿಗಳು ಆಯ್ಕೆಯಾದ ಮೇಲೆ ಆರೋಗ್ಯ, ಶಿಕ್ಷಣ, ಹಾಗೂ ಮೂಲಭೂತ ಸೌಕರ್ಯಗಳ ಬಗ್ಗೆ ಯೋಜನೆಗಳನ್ನು ಹಾಕಿಕೊಂಡು ಸಮಾಜದ ಸಮಸ್ಯೆಗಳನ್ನು ನಿವಾರಿಸುತ್ತಾರೆ. ಎಚ್ಚರಿಕೆ ಉತ್ತಮ ಆಡಳಿತ ನಿರ್ಮಾಣ ಮಾಡಲು ಮತ ಚಲಾಯಿಸಿ ಎಂದು ಹೇಳಿದರು.ಜಿಲ್ಲಾ ಸ್ವೀಪ್ ಸಮಿತಿ ನೋಡೆಲ್ ಅಧಿಕಾರಿ ಸಿ.ಆರ್.ಮುಂಡರಗಿ ಮಾತನಾಡಿ, ಮತದಾನ ಮಾಡುವುದು ಸಹ ನಿಮ್ಮೆಲ್ಲರ ಹಕ್ಕು. ಮತದಾನದಲ್ಲಿ ಸಣ್ಣ ವ್ಯಕ್ತಿ ಹಾಗೂ ದೊಡ್ಡ ವ್ಯಕ್ತಿ ಎಂದು ವ್ಯತ್ಯಾಸ ಇಲ್ಲ. ಎಲ್ಲರ ಮತದಾನವು ಸಮಾನವಾಗಿರುತ್ತದೆ. ಮತಗಟ್ಟೆಗಳಲ್ಲಿ ಸಾರ್ವಜನಿಕರಿಗೆ ಎಲ್ಲ ಮೂಲಭೂತ ಸೌಲಭ್ಯಗಳನ್ನು ವ್ಯವಸ್ಥೆ ಮಾಡಲಾಗಿದೆ. ಹಿರಿಯ ನಾಗರಿಕರಿಗೆ ಆದ್ಯತೆ ನೀಡುವುದು, ವಿಶೇಷ ಚೇತನರಿಗೆ ವ್ಹೀಲ್ ಚೇರ್‌ ವ್ಯವಸ್ಥ ಮಾಡಲಾಗಿದೆ. ಯಾರೂ ಆಸೆ-ಆಮೀಷಗಳಿಗೆ ಒಳಗಾದೇ ಮತದಾನ ಮಾಡುವಂತೆ ತಿಳಿಸಿದರು.ಜಿಪಂ ಮುಖ್ಯ ಲೆಕ್ಕಾಧಿಕಾರಿ ರಾಮಣ್ಣ ಅಥಣಿ, ಜಿಲ್ಲಾ ಸ್ವೀಪ್ ಸಮಿತಿ ರಾಯಭಾರಿ ರಾಜೇಶ ಪವಾರ, ರಾಯಭಾರಿ ಸಹನಾ ಕುಡಿಗನೂರ ಮಾತನಾಡಿ, ಎಲ್ಲರಿಗೂ ಮತದಾನ ಜಾಗೃತಿಯ ಪ್ರತಿಜ್ಞಾ ವಿಧಿ ಭೋದಿಸಿದರು. ರಾಯಭಾರಿ ಸಾಕ್ಷಿ ಹಿರೇಮಠ ಮತದಾನ ಜಾಗೃತಿ ಗೀತೆ ಹಾಡಿದರು.ಜಿಪಂ ಉಪಕಾರ್ಯದರ್ಶಿ ಬಿ.ಎಸ್.ಮೂಗನೂರಮಠ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಕೆ.ಕೆ.ಚವ್ಹಾಣ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ರಾಜಶೇಖರ ದೈವಾಡಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಬಸವರಾಜ ಜಿಗಳೂರ, ಎಸ್.ಸಿ.ಮ್ಯಾಗೇರಿ ವಿವಿಧ ಇಲಾಖೆ ಅಧಿಕಾರಿಗಳು ಸಿಬ್ಬಂದಿ ಭಾಗವಹಿಸಿದ್ದರು.