ಸಾರಾಂಶ
ಕುಂದಾಣ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಡಾ.ಸುಧಾಕರ್ ಗೆಲುವಿಗೆ ತಾಲೂಕಿನ ಎರಡು ಪಕ್ಷದ ಮುಖಂಡರು ಶ್ರಮಿಸಿ ಅತ್ಯಧಿಕ ಮತಗಳನ್ನು ಕೊಡಿಸಬೇಕು ಎಂದು ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ ತಿಳಿಸಿದರು.
ಹೋಬಳಿಯ ಕಾರಹಳ್ಳಿ, ಕೊಯಿರ, ವಿಶ್ವನಾಥಪುರ, ಆಲೂರುದುದ್ದನಹಳ್ಳಿಗಳಲ್ಲಿ ಹಮ್ಮಿಕೊಂಡಿದ್ದ ಎರಡು ಪಕ್ಷಗಳ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಕುಮಾರಣ್ಣ ಮುಖ್ಯಮಂತ್ರಿ ಅವಧಿಯಲ್ಲಿ ರಾಜ್ಯದಲ್ಲಿ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ರೈತಪರ ಕಾಳಜಿ ಇರುವ ಪ್ರಧಾನಿ ಮೋದಿ ಜೊತೆ ಜೆಡಿಎಸ್ ಹೊಂದಾಣಿಕೆಯಾಗಿರುವುದು ದೇಶದಲ್ಲಿ ಹೊಸ ಇತಿಹಾಸ ಸೃಷ್ಟಿ ಮಾಡಬಹುದೆಂದು ಮಾಜಿ ಪ್ರಧಾನಿ ದೇವೇಗೌಡರು ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಸ್ಥಳೀಯ ಮುಖಂಡರು ಒಳಜಗಳಗಳನ್ನು ಬದಿಗೊತ್ತಿ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಹೇಳಿದರು.ಮಾಜಿ ಶಾಸಕ ಪಿಳ್ಳಮುನಿಶಾಮಪ್ಪ ಮಾತನಾಡಿ, ಕಾಂಗ್ರೆಸ್ ನೀಡಿರುವ ಗ್ಯಾರಂಟಿಗಳು ತಾತ್ಕಾಲಿಕ. ಅವರಿಗೆ ಜನಪರ ಕಾಳಜಿ ಇದ್ದಿದ್ದರೆ ಶಿಕ್ಷಣ, ಉದ್ಯೋಗ, ವೈದ್ಯಕೀಯ ಸೇವೆಗೆ ಒತ್ತು ನೀಡಬೇಕಿತ್ತು. ಅದನ್ನು ಬಿಟ್ಟು ಎಸ್ಸಿ, ಎಸ್ಟಿ, ಸಮುದಾಯದ ಹಣ ಬಿಟ್ಟಿ ಭಾಗ್ಯಗಳಿಗೆ ನೀಡುವುದು ಸರಿಯಲ್ಲ ಎಂದರು. ಮಾಜಿ ಶಾಸಕ ಜಿ.ಚಂದ್ರಣ್ಣ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಎಂ.ರವಿಕುಮಾರ್, ಜೆಡಿಎಸ್ ತಾ.ಅದ್ಯಕ್ಷ ಮುನೇಗೌಡ, ಉಪಾಧ್ಯಕ್ಷ ಕೇಶವ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಪಟಾಲಪ್ಪ, ಆಲೂರು ದುದ್ದನಹಳ್ಳಿ ಗ್ರಾ.ಪಂ ಅದ್ಯಕ್ಷೆ ಜಯಲಕ್ಷಮ್ಮ, ಉಪಾಧ್ಯಕ್ಷ ಪಿ.ಮುನಿರಾಜು, ಸದಸ್ಯರಾದ ಕಾಂತ ಮುನಿರಾಜು, ರಘು, ಕುಂದಾಣ ವಿಎಸ್‌ಎಸ್‌ಎನ್ ಮಾಜಿ ಆಧ್ಯಕ್ಷರಾದ ಮುನಿರಾಜು, ರಾಮಣ್ಣ, ವಿಶ್ವನಾಥಪುರ ಮಾಜಿ ಅಧ್ಯಕ್ಷ ವಿನಯ್ ಕುಮಾರ್, ಕುಂದಾಣ ಹೋಬಳಿ ಅಧ್ಯಕ್ಷ ಜಗದೀಶ್, ಕಾರ್ಯಧ್ಯಕ್ಷ ಲಕ್ಷಣ್, ಮುಖಂಡರಾದ ಆರ್.ಕೆ.ನಂಜೇಗೌಡ, ಮಂಡಿಬೆಲೆ ರಾಜಣ್ಣ ಇತರರಿದ್ದರು. ೦೧ ಕುಂದಾಣ ಚಿತ್ರಸುದ್ದಿ: ೧೩
ಕುಂದಾಣ ಹೋಬಳಿ ಆಲೂರು ದುದ್ದನಹಳ್ಳಿಯಲ್ಲಿ ಎನ್‌ಡಿಎ ಮೈತ್ರಿ ಅಭ್ಯರ್ಥಿ ಪರ ಮತಯಾಚನೆ ಮಾಡಿದರು.