ಉತ್ತಮ ಆಡಳಿತಕ್ಕಾಗಿ ಕಾಂಗ್ರೆಸ್‌ಗೆ ಮತ ನೀಡಿ

| Published : Apr 14 2024, 01:49 AM IST

ಉತ್ತಮ ಆಡಳಿತಕ್ಕಾಗಿ ಕಾಂಗ್ರೆಸ್‌ಗೆ ಮತ ನೀಡಿ
Share this Article
  • FB
  • TW
  • Linkdin
  • Email

ಸಾರಾಂಶ

ಏಳು ದಶಕಗಳ ಕಾಲ ದೇಶವನ್ನು ಕಾಂಗ್ರೆಸ್‌ ಮುನ್ನಡೆಸಿದೆ. ದೇಶದ ಅಭಿವೃದ್ಧಿ ವಿಷಯದಲ್ಲಿ ಹಲವು ಪ್ರಥಮಗಳನ್ನು ಕಾಂಗ್ರೆಸ್‌ ಪಕ್ಷವೇ ಮಾಡಿದೆ.

ಧಾರವಾಡ:

ಧಾರವಾಡ ಕ್ಷೇತ್ರ ಸೇರಿದಂತೆ ದೇಶಾದ್ಯಂತ ಉತ್ತಮ ಆಡಳಿತ ಬೇಕಾದರೆ ಕಾಂಗ್ರೆಸ್ ಪಕ್ಷಕ್ಕೆ ಜನ ಮತ ನೀಡಬೇಕು ಎಂದು ಕಾಂಗ್ರೆಸ್ ಅಭ್ಯರ್ಥಿ ವಿನೋದ್ ಅಸೂಟಿ ಹೇಳಿದರು.

ಶನಿವಾರ ಧಾರವಾಡದ ವಿವಿಧ ವಾರ್ಡ್‌ಗಳಲ್ಲಿ ಪ್ರಚಾರ ನಡೆಸಿದ ಅವರು, ಏಳು ದಶಕಗಳ ಕಾಲ ದೇಶವನ್ನು ಕಾಂಗ್ರೆಸ್‌ ಮುನ್ನಡೆಸಿದೆ. ದೇಶದ ಅಭಿವೃದ್ಧಿ ವಿಷಯದಲ್ಲಿ ಹಲವು ಪ್ರಥಮಗಳನ್ನು ಕಾಂಗ್ರೆಸ್‌ ಪಕ್ಷವೇ ಮಾಡಿದೆ. ಆದರೆ, ಬಿಜೆಪಿ ಅನವಶ್ಯಕ ಹಾಗೂ ರಾಜಕೀಯ ದುರುದ್ದೇಶದಿಂದಾಗಿ ಕಾಂಗ್ರೆಸ್‌ ಹಾಗೂ ಮುಖಂಡರನ್ನು ಬೇರೆ ರೀತಿಯಾಗಿ ಬಿಂಬಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಧಾರವಾಡ ಕ್ಷೇತ್ರ ಸೇರಿದಂತೆ ದೇಶವನ್ನು ಮತ್ತೊಮ್ಮೆ ಕಾಂಗ್ರೆಸ್‌ ಪಕ್ಷಕ್ಕೆ ನೀಡಿದರೆ ಜನಪರ ಆಡಳಿತ ನಡೆಸಲು ಸಿದ್ಧ ಎಂದರು.

ಉತ್ತಮ ಜನಪರ ಯೋಜನೆ ಜಾರಿ ಮಾಡಿದ್ದ ಕಾಂಗ್ರೆಸ್ ಎಲ್ಲಾ ವರ್ಗ ಹಾಗೂ ಸಮುದಾಯದ ಕಲ್ಯಾಣಕ್ಕೆ ಕೆಲಸ ಮಾಡಿದೆ. ಆದರೆ, ಬರೀ ಪ್ರಚಾರದ ಹುಚ್ಚಿನಿಂದ ಕಳೆದ ಹತ್ತು ವರ್ಷಗಳಲ್ಲಿ ದೇಶದ ಆಡಳಿತವೇ ಕೆಟ್ಟು ಹೋಗಿದೆ. ಸುಳ್ಳು ಹೇಳಿ ಆಡಳಿತ ಮಾಡುತ್ತಿದ್ದು, ಉತ್ತಮ ಆಡಳಿತ ಬೇಕಾದರೆ ಕಾಂಗ್ರೆಸ್‌ಗೆ ಮತ ನೀಡಿ ಎಂದು ಅಸೂಟಿ ಮನವಿ ಮಾಡಿದರು.

ವಿವಿಧ ದೇವಾಲಯಗಳಿಗೆ ಭೇಟಿ:

ಧಾರವಾಡದ ಇತಿಹಾಸ ಪ್ರಸಿದ್ಧ ನುಗ್ಗಿಕೇರಿಯ ಹನುಮಾನ ದೇವಸ್ಥಾನ, ದ್ಯಾಮವ್ವದೇವಿ ಹಾಗೂ ಈಶ್ವರ ದೇವಸ್ಥಾನಗಳಿಗೆ ವಿನೋದ ಅಸೂಟಿ ಭೇಟಿ ನೀಡಿ ಭಕ್ತರಲ್ಲಿ ಮತಯಾಚಿಸಿದರು. ಲಕಮನಹಳ್ಳಿಯಲ್ಲಿರುವ ಕ್ಷೇತ್ರ ಸೋಮೇಶ್ವರ ಹಾಗೂ ಶನ್ಚೈಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ರಾಜೀವಗಾಂಧಿ ನಗರದ ಮಾರುತಿ ದೇವಸ್ಥಾನಕ್ಕೆ ನಾಗರಾಜ ಗೌರಿ ಹಾಗೂ ಕೈ ಮುಖಂಡರೊಂದಿಗೆ ಭೇಟಿ ನೀಡಿ ದೇವರ ದರ್ಶನ ಮಾಡಿ ಪೂಜೆ ಸಲ್ಲಿಸಿದರು.

ಮಹಾನಗರ ಪಾಲಿಕೆ ಸದಸ್ಯರಾದ ಕವಿತಾ ಕಬ್ಬೇರ, ಬಸವರಾಜ ಮಲಕಾರಿ, ಲತಾ ಕಾಟಾಪೂರ, ಆತ್ಮಾನಂದ ತಳವಾರ, ಭೀಮಪ್ಪ ಹೊರಕೇರಿ, ಮಹೇಶ ಉಳ್ಳಣ್ಣನವರ, ಹುಸೇನಪ್ಪ ಕುಳಾವಿ, ನಾಗಪ್ಪ ವಾಲಿಕಾರ, ಮಾಂತೇಶ ಬೆಳ್ಳಿಗಟ್ಟಿ ಇದ್ದರು.