ಹರಪನಹಳ್ಳಿ ಅಭಿವೃದ್ಧಿ ಕಾಂಗ್ರೆಸ್ಸಿಗೆ ಮತ ನೀಡಿ: ಡಾ.ಪ್ರಭಾ

| Published : Apr 21 2024, 02:18 AM IST

ಹರಪನಹಳ್ಳಿ ಅಭಿವೃದ್ಧಿ ಕಾಂಗ್ರೆಸ್ಸಿಗೆ ಮತ ನೀಡಿ: ಡಾ.ಪ್ರಭಾ
Share this Article
  • FB
  • TW
  • Linkdin
  • Email

ಸಾರಾಂಶ

ಹಿಂದುಳಿದ ತಾಲೂಕು ಹರಪನಹಳ್ಳಿ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗಾಗಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ, ಮಾದರಿ ಕ್ಷೇತ್ರ ಮಾಡಲು ಶಕ್ತಿ ತುಂಬುವಂತೆ ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ಮನವಿ ಮಾಡಿದರು.

- ಐದಾರು ಸಲ ಸಂಸದರಾದವರ ಕೊಡುಗೆ ಏನು?

- ಮೋದಿ ಹೆಸರೇಳಿ ಓಟು ಕೇಳೋರಿಗೆ ಪಾಠ ಕಲಿಸಿ

- - - ಕನ್ನಡಪ್ರಭ ವಾರ್ತೆ, ದಾವಣಗೆರೆ ಹಿಂದುಳಿದ ತಾಲೂಕು ಹರಪನಹಳ್ಳಿ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗಾಗಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ, ಮಾದರಿ ಕ್ಷೇತ್ರ ಮಾಡಲು ಶಕ್ತಿ ತುಂಬುವಂತೆ ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ಮನವಿ ಮಾಡಿದರು.

ಹರಪನಹಳ್ಳಿ ತಾಲೂಕಿನ ಹಿರೇಮೇಗಳಗೇರಿ, ಲಕ್ಷ್ಮೀಪುರ, ರಾಗಿಮಸಲವಾಡ, ಶಿಂಗ್ರಿಹಳ್ಳಿ, ಕಂಚಿಕೇರಿ ಗ್ರಾಮಗಳಲ್ಲಿ ಶನಿವಾರ ಮತಯಾಚಿಸಿ ಮಾತನಾಡಿದ ಅವರು, ಪ್ರಜ್ಞಾವಂತ ಹಾಗೂ ಪ್ರಭುದ್ಧ ಮತದಾರರು ಇಲ್ಲಿದ್ದಾರೆ. ನಿಮ್ಮ ಕಷ್ಟ- ಸುಖಗಳಿಗೆ ಸ್ಪಂದಿಸುವವರಿಗೆ ಬೆಂಬಲಿಸಿ ಎಂದರು.

ಲೋಕಸಭಾ ಚುನಾವಣೆಗೆ ಅಖಿಲ ಭಾರತ ಕಾಂಗ್ರೆಸ್ ಕಮಿಟಿ 25 ಗ್ಯಾರಂಟಿಗಳನ್ನು ಜಾರಿಗೊಳಿಸುವ ಭರವಸೆ ನೀಡಿದೆ. ನೀವು ನನಗೆ ಮತ ಹಾಕಿ ಗೆಲ್ಲಿಸಿದರೆ ರಾಜ್ಯ ಸರ್ಕಾರವು ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದಂತೆ ಅವುಗಳನ್ನು ಜಾರಿ ಮಾಡುತ್ತದೆ. ದಾವಣಗೆರೆ ಕ್ಷೇತ್ರದ ಸಂಸದಳಾಗಿ ನಿಮ್ಮ ಋಣ ತೀರಿಸಲು ಅನುವು ಮಾಡಿಕೊಡಿ ಎಂದು ಮನವಿ ಮಾಡಿದರು.

ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಮಾತನಾಡಿ, ನುಡಿದಂತೆ ನಡೆದ ಸರ್ಕಾರವೆಂದರೆ ಅದು ಸಿದ್ದರಾಮಯ್ಯ ನೇತೃತ್ವದ ಸರ್ಕಾರ. ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನರಿಗೆ ಮತ ನೀಡಿ, ಗೆಲ್ಲಿಸಿ ಎಂದರು.

ವಿಧಾನಸಭೆ ಚುನಾವಣೆ ಪರಾಜಿತ ಅರಸಿಕೇರಿ ಎನ್.ಕೊಟ್ರೇಶ ಮಾತನಾಡಿ, ಕೇಂದ್ರದಲ್ಲಿ ಬಿಜೆಪಿ ಆಡಳಿತದ 10 ವರ್ಷದಲ್ಲಿ ದೇಶ ಅಧೋಗತಿ ತಲುಪಿದೆ. ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನರನ್ನು ಅತಿ ಹೆಚ್ಚು ಮತಗಳಿಂದ ಗೆಲ್ಲಿಸಿ ಎಂದು ಕೋರಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ.ಅಂಜಿನಪ್ಪ, ಚಿಗಟೇರಿ ಬ್ಲಾಕ್ ಅಧ್ಯಕ್ಷ ಕೆ.ಕುಬೇರಪ್ಪ, ಅರಸಿಕೇರಿ ಬ್ಲಾಕ್ ಅಧ್ಯಕ್ಷ ಎಸ್.ಮಂಜುನಾಥ, ಮುಖಂಡರಾದ ಎಂ.ರಾಜಶೇಖರ, ಪಿ.ಮಹಾಬಲೇಶ್ವರಗೌಡ, ಆಲದಹಳ್ಳಿ ಷಣ್ಮುಖಪ್ಪ, ಎಚ್.ಎಂ.ಮಲ್ಲಿಕಾರ್ಜುನ, ಕೋಡಿಹಳ್ಳಿ ಭೀಮಪ್ಪ, ಪಿ.ಎಲ್.ಪೋಮ್ಯನಾಯ್ಕ, ಯಶವಂತಗೌಡ, ಪಿ.ಟಿ.ಭರತ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜಯಲಕ್ಷ್ಮೀ, ಕವಿತಾ ಸುರೇಶ, ನೇತ್ರಾವತಿ, ಸುಮಾ, ಉಮಾ ಇತರರು ಪಾಲ್ಗೊಂಡಿದ್ದರು.

- - - -20ಕೆಡಿವಿಜಿ15:

ಹರಪನಹಳ್ಳಿ ತಾಲೂಕು ಶಿಂಗ್ರಿಹಳ್ಳಿ ಗ್ರಾಮದಲ್ಲಿ ಶನಿವಾರ ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ಮತಯಾಚಿಸಿದರು.