ಶಾಂತಿನಿಕೇತನ ಶಾಲೆಯಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ

| Published : Jun 18 2024, 12:54 AM IST

ಸಾರಾಂಶ

ಮಕ್ಕಳಲ್ಲಿ ನಾಯಕತ್ವ ಗುಣ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ತಿಳಿಸಿಕೊಡುವ ಉದ್ದೇಶದಿಂದ ಶಾಲೆಯಲ್ಲಿ ಮಕ್ಕಳ ಮತದಾನ ಜಾಗೃತಿ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ ಎಂದು ಶಾಂತಿನಿಕೇತನ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಎಚ್.ಸಿ.ಉಮೇಶ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಭಾರತೀನಗರಮಕ್ಕಳಲ್ಲಿ ನಾಯಕತ್ವ ಗುಣ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ತಿಳಿಸಿಕೊಡುವ ಉದ್ದೇಶದಿಂದ ಶಾಲೆಯಲ್ಲಿ ಮಕ್ಕಳ ಮತದಾನ ಜಾಗೃತಿ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ ಎಂದು ಶಾಂತಿನಿಕೇತನ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಎಚ್.ಸಿ.ಉಮೇಶ್ ತಿಳಿಸಿದರು.ಇಲ್ಲಿನ ಶಾಂತಿನಿಕೇತನ ಶಾಲೆಯಲ್ಲಿ ಆಯೋಜಿಸಿದ್ದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆ ಯಾವ ರೀತಿ ನಡೆಯುವುದೋ ಅದೇ ಮಾದರಿಯಲ್ಲಿ ಚುನಾವಣೆ ಪ್ರಕ್ರಿಯೆ ನಡೆಸಲಾಗುತ್ತಿದೆ. ಮತದಾನದ ಮಹತ್ವವನ್ನು ಮನದಟ್ಟು ಮಾಡಿಕೊಡುವ ಉದ್ದೇಶ ಈ ಚುನಾವಣೆಯದ್ದಾಗಿದೆ ಎಂದು ಹೇಳಿದರು.

ಶಾಲೆಯ ಆಡಳಿತಾಧಿಕಾರಿ ರಾಜಶೇಖರ್ ಮಾತನಾಡಿ, ಚುನಾವಣೆಗಳಲ್ಲಿ ಆಮಿಷವೊಡ್ಡಿ ಮತಗಳನ್ನು ಕಸಿಯಲು ಪ್ರಯತ್ನಿಸುತ್ತಾರೆ. ಯೋಗ್ಯರಿಗೆ ಮತನೀಡಿ ಆಯ್ಕೆಮಾಡಬೇಕು. ಪ್ರಸ್ತುತ ದಿನದಲ್ಲಿ ಪ್ರಜಾಪ್ರಭುತ್ವದ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಇದನ್ನು ಶುದ್ದಿಕರೀಸಲು ಇಂದಿನ ಯುವ ಪೀಳಿಗೆ ಮುಂದಾಗಬೇಕು ಎಂದು ನುಡಿದರು.ಶಾಲೆಯಲ್ಲಿ ಆಯೋಜಿಸಿರುವ ಚುನಾವಣಾ ಜಾಗೃತಿ ಕಾರ್ಯಕ್ರಮ ಮುಂದಿನ ದಿನಗಳಲ್ಲಿ ನೀವು ಹೇಗೆ ಮತದಾನ ಮತಬೇಕು, ಎಂತಹವರನ್ನು ಆಯ್ಕೆಮಾಡಬೇಕೆಂಬುದನ್ನು ತಿಳಿಸಿಕೊಡುತ್ತದೆ ಎಂದರು.ಈ ಚುನಾವಣೆಯಲ್ಲಿ 30 ವಿದ್ಯಾರ್ಥಿಗಳು ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. 3ನೇ ತರಗತಿಯಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಮತಚಲಾಯಿಸಲು ಅವಕಾಶ ಕಲ್ಪಿಸಲಾಗಿದೆ. ಅತ ಹೆಚ್ಚು ಮತವನ್ನು ಯಾರು ಪಡೆಯುತ್ತಾರೋ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ ಇನ್ನುಳಿದ 6 ವಿದ್ಯಾರ್ಥಿಗಳು ಸೇರಿ ಮಂತ್ರಿಮಂಡಲ ರಚಿಸಲಾಗುವುದು ಎಂದರು.ಶಾಲೆಯ ವಿದ್ಯಾರ್ಥಿಗಳು ಆಧಾರ್ ಕಾರ್ಡ್ ಹಿಡಿದು ಸರತಿ ಸಾಲಿನಲ್ಲಿ ನಿಂತು ಹರ್ಷದಿಂದ ಮತದಾನ ಮಾಡಿದರು. ಶಾಲೆಯ 2 ಕೊಠಡಿಯಲ್ಲಿ ಮತದಾನ ಪ್ರಕ್ರಿಯೆ ನಡೆಯಿತು. ಶಾಲೆಯ ಮುಖ್ಯಚುನಾವಣಾ ಆಯುಕ್ತರಾಗಿ ಮುಖ್ಯಶಿಕ್ಷಕ ದೇವೇಗೌಡ ಅವರು ಕಾರ್ಯನಿರ್ವಹಿಸಿದರು. ಚುನಾವಣಾಧಿಕಾರಿಯಾಗಿ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಮಂಗಳಗೌರಮ್ಮ, ರಂಜಿತ್‌ಕುಮಾರ್, ಹನುಮಂತಪ್ಪ, ರಘು, ನಿಶ್ಕಲ, ಪಲ್ಲವಿ, ಶೋಭಾ, ಸರೋಜಮ್ಮ, ಪ್ರಮೋದಿನಿ, ಮತ್ತಿತರರಿದ್ದರು.