ಇಂದು ಬೆಂಗಳೂರು ಪದವೀಧರರ ಕ್ಷೇತ್ರಕ್ಕೆ ಮತದಾನ

| Published : Jun 03 2024, 12:31 AM IST

ಇಂದು ಬೆಂಗಳೂರು ಪದವೀಧರರ ಕ್ಷೇತ್ರಕ್ಕೆ ಮತದಾನ
Share this Article
  • FB
  • TW
  • Linkdin
  • Email

ಸಾರಾಂಶ

ದೊಡ್ಡಬಳ್ಳಾಪುರ: ಬೆಂಗಳೂರು ಪದವೀಧರರ ಕ್ಷೇತ್ರದಿಂದ ರಾಜ್ಯ ವಿಧಾನ ಪರಿಷತ್ತಿಗೆ ನಡೆಯುವ ಚುನಾವಣೆ 2024ರ ಪ್ರಯುಕ್ತ ಜೂನ್ 3ರಂದು ಸೋಮವಾರ ನಡೆಯಲಿರುವ ಮತದಾನ ಸಂಬಂಧ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ.

ದೊಡ್ಡಬಳ್ಳಾಪುರ: ಬೆಂಗಳೂರು ಪದವೀಧರರ ಕ್ಷೇತ್ರದಿಂದ ರಾಜ್ಯ ವಿಧಾನ ಪರಿಷತ್ತಿಗೆ ನಡೆಯುವ ಚುನಾವಣೆ 2024ರ ಪ್ರಯುಕ್ತ ಜೂನ್ 3ರಂದು ಸೋಮವಾರ ನಡೆಯಲಿರುವ ಮತದಾನ ಸಂಬಂಧ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮತದಾನ ಕೇಂದ್ರಗಳ ಅಂತಿಮ ಪಟ್ಟಿ ಪ್ರಕಟಿಸಲಾಗಿದ್ದು, ಜಿಲ್ಲೆಯಲ್ಲಿ ಒಟ್ಟು 25 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಎಲ್ಲ ಮತಗಟ್ಟೆಗಳ ವ್ಯಾಪ್ತಿಯಲ್ಲೂ ಅಗತ್ಯ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ನಿಷೇದಾಜ್ಞೆ ಜಾರಿಗೊಳಿಸಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಮತದಾನಕ್ಕೆ ಬೆಳಗ್ಗೆ 8ರಿಂದ ಸಂಜೆ 4 ಗಂಟೆವರೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಶಿವಶಂಕರ್ ತಿಳಿಸಿದ್ದಾರೆ.

ದೊಡ್ಡಬಳ್ಳಾಪುರ ತಾಲೂಕಿನ ಕಸಬಾ ಮತ್ತು ದೊಡ್ಡಬಳ್ಳಾಪುರ ಟೌನ್‌ನಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆ ವಿಭಾಗದ ಕೊಠಡಿ ಸಂಖ್ಯೆ. 02, 03, 04 ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆ ವಿಭಾಗದ ಗ್ರಂಥಾಲಯ(ದಕ್ಷಿಣ ವಿಭಾಗ) ಕೊಠಡಿ ಸಂಖ್ಯೆ. 05 ರಲ್ಲಿ ದೊಡ್ಡಬಳ್ಳಾಪುರ ಟೌನ್ ಮತ್ತು ಕಸಬಾ ವ್ಯಾಪ್ತಿಯ ಪದವೀಧರ ಮತದಾರರು ಮತ ಚಲಾಯಿಸಬಹುದಾಗಿದೆ.

ದೊಡ್ಡ ಬೆಳವಂಗಲ ಮತಗಟ್ಟೆ-2 ಸರ್ಕಾರಿ ಕರ್ನಾಟಕ ಪಬ್ಲಿಕ್ ಶಾಲೆ ಕೊಠಡಿ ಸಂಖ್ಯೆ. 02ರಲ್ಲಿ ದೊಡ್ಡ ಬೆಳವಂಗಲ ಹೋಬಳಿಯ ಪದವೀಧರ ಮತದಾರರು, ಮಧುರೆ ಹೋಬಳಿಯ ಕನಸವಾಡಿ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆ ವಿಭಾಗದಲ್ಲಿ ಮಧುರೆ ಹೋಬಳಿಯ ಪದವೀಧರ ಮತದಾರರು, ಸಾಸಲು ಮತಗಟ್ಟೆ-4 ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಠಡಿ ಸಂಖ್ಯೆ. 01ರಲ್ಲಿ ಸಾಸಲು ಹೋಬಳಿಯ ಪದವೀಧರ ಮತದಾರರು ಹಾಗೂ ತೂಬಗೆರೆ ಮತಗಟ್ಟೆ-5 ಗ್ರಾಮ ಪಂಚಾಯತ ಕಾರ್ಯಾಲಯದಲ್ಲಿ ತೂಬಗೆರೆ ಹೋಬಳಿಯ ಪದವೀಧರ ಮತದಾರರು ಮತ ಚಲಾಯಿಸಬಹುದು.

ದೇವನಹಳ್ಳಿ ತಾಲೂಕಿನ ಕಸಬಾ ಹೋಬಳಿ ಮತ್ತು ದೇವನಹಳ್ಳಿ ಟೌನ್ ಮತಗಟ್ಟೆ-6 ಟೌನ್ ಹಾಲ್ ಕೊಠಡಿ ಸಂಖ್ಯೆ. 01 (ದೇವನಹಳ್ಳಿ ಪುರಸಭೆ), ಕಸಬಾ ಹೋಬಳಿ ಮತ್ತು ದೇವನಹಳ್ಳಿ-6ಎ ಪುರಸಭೆ ಕಾರ್ಯಾಲಯದ ಕೊಠಡಿ ಸಂಖ್ಯೆ. 02 ನಲ್ಲಿ ದೇವನಹಳ್ಳಿ ಟೌನ್ ಮತ್ತು ಕಸಬಾ ಹೋಬಳಿ ಪದವೀಧರ ಮತದಾರರು, ಚನ್ನರಾಯಪಟ್ಟಣ ಮತಗಟ್ಟೆ-7 ಗ್ರಾಮ ಪಂಚಾಯತ ಕಾರ್ಯಾಲಯದಲ್ಲಿ ಚನ್ನರಾಯಪಟ್ಟಣ ಹೋಬಳಿಯ ಪದವೀಧರ ಮತದಾರರು, ಕುಂದಾಣ ಮತಗಟ್ಟೆ-8 ಗ್ರಾಮ ಪಂಚಾಯತ ಕಾರ್ಯಾಲಯ ಕುಂದಾಣದಲ್ಲಿ ಕುಂದಾಣ ಹೋಬಳಿಯ ಪದವೀಧರ ಮತದಾರರು, ವಿಜಯಪುರ ಮತಗಟ್ಟೆ-9 ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಕೊಠಡಿ ಸಂಖ್ಯೆ. 1 ವಿಜಯಪುರ ಟೌನ್ ಹಾಗೂ ವಿಜಯಪುರ ಮತಗಟ್ಟೆ-9ಎ ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಕೊಠಡಿ ಸಂಖ್ಯೆ. 02 ವಿಜಯಪುರ ಟೌನ್ ನಲ್ಲಿ ವಿಜಯಪುರ ಹೋಬಳಿ ಮತ್ತು ವಿಜಯಪುರ ನಗರದ ಪದವೀಧರ ಮತದಾರರು ಮತ ಚಲಾಯಿಸಬಹುದು.

ಹೊಸಕೋಟೆ ತಾಲೂಕಿನ ಕಸಬಾ ಹೋಬಳಿ ಮತ್ತು ಹೊಸಕೋಟೆ ಟೌನ್ ಮತಗಟ್ಟೆ-10 ತಾಲೂಕು ಪಂಚಾಯತ ಕಾರ್ಯಾಲಯದ ಕೊಠಡಿ ಸಂಖ್ಯೆ. 01 ಹಾಗೂ ಮತಗಟ್ಟೆ-10ಎ ತಾಲೂಕು ಪಂಚಾಯತ ಕಾರ್ಯಾಲಯದ ಕೊಠಡಿ ಸಂಖ್ಯೆ. 02 ರಲ್ಲಿ ಹೊಸಕೋಟೆ ಟೌನ್ ಮತ್ತು ಕಸಬಾ ಹೋಬಳಿಯ ಪದವೀಧರ ಮತದಾರರು, ಆನುಗೊಂಡನಹಳ್ಳಿ ಮತಗಟ್ಟೆ-11 ಗ್ರಾಮ ಪಂಚಾಯತ ಕಾರ್ಯಾಲಯ ಆನುಗೊಂಡನಹಳ್ಳಿ ಹೋಬಳಿಯ ಪದವೀಧರ ಮತದಾರರು, ಜಡಿಗೇನಹಳ್ಳಿ ಮತಗಟ್ಟೆ-12 ಗ್ರಾಮ ಪಂಚಾಯತ ಕಾರ್ಯಾಲಯ ಜಡಿಗೇನಹಳ್ಳಿ ಹೋಬಳಿಯ ಪದವೀಧರ ಮತದಾರರರು, ನಂದಗುಡಿ ಮತಗಟ್ಟೆ-13 ಗ್ರಾಮ ಪಂಚಾಯತ ಕಾರ್ಯಾಲಯದಲ್ಲಿ ನಂದಗುಡಿ ಹೋಬಳಿಯ ಪದವೀಧರ ಮತದಾರರು ಹಾಗೂ ಸೂಲಿಬೆಲೆ ಮತಗಟ್ಟೆ-14 ಗ್ರಾಮ ಪಂಚಾಯತ ಕಾರ್ಯಲಯದಲ್ಲಿ ಸೂಲಿಬೆಲೆ ಹೋಬಳಿ ಪದವೀಧರ ಮತದಾರರು ಮತ ಚಲಾಯಿಸಬಹುದು.

ನೆಲಮಂಗಲ ತಾಲೂಕಿನ ಕಸಬಾ ಮತ್ತು ನೆಲಮಂಗಲ ಟೌನ್-15 ಎಸ್.ಜೆ.ಎಮ್ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕೊಠಡಿ ಸಂಖ್ಯೆ. 01, 02 ಮತ್ತು 03 ರಲ್ಲಿ ನೆಲಮಂಗಲ ಟೌನ್ ಮತ್ತು ಕಸಬಾ ಹೋಬಳಿಯ ಪದವೀಧರ ಮತದಾರರು ಮತ ಚಲಾಯಿಸಬಹುದು. ಸೋಂಪುರ ಮತಗಟ್ಟೆ-16 ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಕೊರಟಗೆರೆ ರೋಡ್ ಸೋಂಪುರದಲ್ಲಿ ಹೋಬಳಿ ವ್ಯಾಪ್ತಿಯ ಪದವೀಧರ ಮತದಾರರು, ತ್ಯಾಮಗೊಂಡಲು ಮತಗಟ್ಟೆ-17 ಕರ್ನಾಟಕ ಪಬ್ಲಿಕ್ ಶಾಲೆ ಕೊಠಡಿ ಸಂಖ್ಯೆ. 01ರಲ್ಲಿ ತ್ಯಾಮಗೊಂಡ್ಲು ಹೋಬಳಿ ವ್ಯಾಪ್ತಿಯ ಪದವೀಧರ ಮತದಾರರು ಮತ ಚಲಾಯಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

(ಫೋಟೋ ಬೇರೆ ಫೈಲ್‌ನಲ್ಲಿದೆ)