ಎಲೆ ಮರೆಯ ಕಾಯಿಯಂತೆ ಮಾಡುತ್ತಿರುವ ಸೇವೆಯನ್ನು ಗುರುತಿಸುವ ಮೂಲಕ ಪ್ರಶಸ್ತಿ-ಪುರಸ್ಕಾರಗಳನ್ನು ನೀಡುತ್ತಿರುವ ಶ್ರೀ ದಯಾನಂದ ಪುರಿ ಸಂಸ್ಥೆ ಹಾಗೂ ವಿಪಿಕೆ ಫೌಂಡೇಷನ್ ಕಾರ್ಯ ಶ್ಲಾಘನೀಯ ಎಂದು ಮಾಜಿ ಸಚಿವ ಅಮರೇಗೌಡ ಪಾಟೀಲ ಬಯ್ಯಾಪೂರ ಅಭಿಪ್ರಾಯಪಟ್ಟರು.

ಕುಷ್ಟಗಿ: ಎಲೆ ಮರೆಯ ಕಾಯಿಯಂತೆ ಮಾಡುತ್ತಿರುವ ಸೇವೆಯನ್ನು ಗುರುತಿಸುವ ಮೂಲಕ ಪ್ರಶಸ್ತಿ-ಪುರಸ್ಕಾರಗಳನ್ನು ನೀಡುತ್ತಿರುವ ಶ್ರೀ ದಯಾನಂದ ಪುರಿ ಸಂಸ್ಥೆ ಹಾಗೂ ವಿಪಿಕೆ ಫೌಂಡೇಷನ್ ಕಾರ್ಯ ಶ್ಲಾಘನೀಯ ಎಂದು ಮಾಜಿ ಸಚಿವ ಅಮರೇಗೌಡ ಪಾಟೀಲ ಬಯ್ಯಾಪೂರ ಅಭಿಪ್ರಾಯಪಟ್ಟರು.

ಪಟ್ಟಣದ ಮಾಜಿ ಸಚಿವ ಅಮರೇಗೌಡ ಪಾಟೀಲ ಬಯ್ಯಾಪೂರ ಅವರ ನಿವಾಸದಲ್ಲಿ ಸಹಕಾರಿ ಕ್ಷೇತ್ರದಲ್ಲಿ ಬುಡ್ನೇಸಾಬ ಕಲಾದಗಿ, ಸಮಾಜಸೇವೆ ಕ್ಷೇತ್ರದಲ್ಲಿ ಸುರೇಶಗೌಡ ಕುಂಟನಗೌಡರ ಅವರಿಗೆ ಅಭಿನವ ಗವಿಶ್ರೀ ಪ್ರಶಸ್ತಿ ವಿತರಿಸಿ ಮಾತನಾಡಿದರು.

ದೋಟಿಹಾಳ ಗ್ರಾಮದ ಶ್ರೀ ದಯಾನಂದ ಪುರಿ ಸಂಸ್ಥೆ ಹಾಗೂ ವಿಪಿಕೆ ಫೌಂಡೇಷನ್ ಅವರು ಸಮಾಜಸೇವೆ, ಆರೋಗ್ಯ ಜಾಗೃತಿ, ರಕ್ತದಾನ, ನೇತ್ರಚಿಕಿತ್ಸಾ ಶಿಬಿರ ಸೇರಿದಂತೆ ಅನೇಕ ಸಾಮಾಜಿಕ ಸೇವೆಯಲ್ಲಿ ತೊಡಗಿಕೊಳ್ಳುವ ಜೊತೆಗೆ ಸಾಧಕರನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ಮಾಡುತ್ತಿರುವುದು ಉತ್ತಮ ಕಾರ್ಯವಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಷ್ಕೃತ ಶೇಖರಗೌಡ ಮಾಲಿಪಾಟೀಲ, ಶಿವಶಂಕರಗೌಡ ಪಾಟೀಲ, ಸಾಹಿತಿ ಹನುಮೇಶ ಶೆಟ್ಟರ ಗುಮಗೇರಿ, ವಿಪಿಕೆ ಫೌಂಡೇಷನ್ ಮುಖ್ಯಸ್ಥ ಶ್ರೀನಿವಾಸ ಕಂಟ್ಲಿ, ಮಹಾಂತೇಶ ಅಗಸಿಮುಂದಿನ, ಇಮಾಮಸಾಬ ಗರಡಿಮನಿ, ಮೈಹಿಬುಬು ಮುಲ್ಲಾ, ಅನೀಲಕುಮಾರ ಕಮ್ಮಾರ, ಪರಶಿವಮೂರ್ತಿ ಮಾಟಲದಿನ್ನಿ, ಸಂಗಮೇಶ ಲೂತಿಮಠ, ಸೋಮಶೇಖರ ವೈಜಾಪೂರು ಸೇರಿದಂತೆ ಅನೇಕರು ಇದ್ದರು.