ಉಪಾಧ್ಯಕ್ಷ ಸ್ಥಾನಕ್ಕೆ ಮಹದೇವಸ್ವಾಮಿ ಅವಿರೋಧ ಆಯ್ಕೆ । ಸಂಘ ಬಿಜೆಪಿ ತೆಕ್ಕೆಗೆ ಬರಲು ವೃಷಬೇಂದ್ರ ಯಶಸ್ವಿ

----

ಕನ್ನಡಪ್ರಭ ವಾರ್ತೆ ಚಾಮರಾಜನಗರ

ತಾಲೂಕಿನ ಹೊನ್ನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಪಿ. ವೃಷಬೇಂದ್ರಪ್ಪ 3ನೇ ಬಾರಿಗೆ ಬಾರಿಗೆ ಆಯ್ಕೆಯಾಗುವ ಮೂಲಕ ಹ್ಯಾಟ್ರಿಕ್ ಅಧ್ಯಕ್ಷರಾಗಿದ್ದಾರೆ. ಉಪಾಧ್ಯಕ್ಷರಾಗಿ ಮಹದೇವಸ್ವಾಮಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸಹಕಾರ ಸಂಘದ ಸಂಸ್ಥಾಪಕ ಅಧ್ಯಕ್ಷರಾಗಿದ್ದ ಪಿ. ವೃಷಬೇಂದ್ರಪ್ಪ ಸಹಕಾರ ಸಂಘದ ಅಭಿವೃದ್ಧಿಗೆ ಶ್ರಮಿಸಿದ್ದರು. 3ನೇ ಅವಧಿಗೂ ಸಹ ಅಧ್ಯಕ್ಷರಾಗುವ ನಿಟ್ಟಿನಲ್ಲಿ ಚುನಾವಣೆ ಪ್ರಕ್ರಿಯೆ ಆರಂಭಗೊಂಡು ತಮ್ಮ ಬಣದ ೧೦ ಮಂದಿಯನ್ನು ಗೆಲ್ಲಿಸಿಕೊಳ್ಳುವ ಮೂಲಕ ಅಧ್ಯಕ್ಷ ಸ್ಥಾನವನ್ನು ಹಿಡಿಯುವಲ್ಲಿ ಹಾಗು ಬಿಜೆಪಿ ವಶಕ್ಕೆ ಸಹಕಾರ ಸಂಘವನನ್ನು ಪಡೆಯುವಲ್ಲಿ ಪಿ. ವೃಷಬೇಂದ್ರಪ್ಪ ಯಶಸ್ವಿಯಾಗಿದ್ದಾರೆ.


ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿಯಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಪಿ. ವೃಷಬೇಂದ್ರಪ್ಪ, ಉಪಾಧ್ಯಕ್ಷ ಸ್ಥಾನಕ್ಕೆ ಮಹದೇವ ಸ್ವಾಮಿ ನಾಮಪತ್ರ ಸಲ್ಲಿಸಿದರು. ಮತ್ಯಾರು ಈ ಸ್ಥಾನಗಳಿಗೆ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಯಾಗಿದ್ದ ಸಹಕಾರ ಸಂಘಗಳ ನಿಬಂಧಕರ ಕಚೇರಿಯ ಅಧೀಕ್ಷಕರಾದ ನಾಗೇಶ್ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯನ್ನು ಘೋಷಿಸಿದರು.

ಸಹಕಾರ ಸಂಘದ ಬಲವರ್ಧನೆಗೆ ಒತ್ತು:

ನೂತನ ಅಧ್ಯಕ್ಷ ಪಿ. ವೃಷಬೇಂದ್ರಪ್ಪ ಮಾತನಾಡಿ, ಸಂಘದ ಎಲ್ಲಾ ಸದಸ್ಯರು ನಮ್ಮ ಕಾರ್ಯವೈಖರಿ ಹಾಗೂ ಸಂಘದ ಅಭಿವೃದ್ಧಿಯನ್ನು ಬಯಸಿ ಮತ್ತೇ ನಮ್ಮ ತಂಡವನ್ನೇ ಗೆಲ್ಲಿಸಿರುವುದಕ್ಕೆ ಅಭಾರಿಯಾಗಿದ್ದೇನೆ. ನಿಮ್ಮೆಲ್ಲರ ಪ್ರೀತಿ ವಿಶ್ವಾಸಕ್ಕೆ ಸ್ವಲ್ಪವು ಚ್ಯುತಿ ಬಾರದಂತೆ ಕಾರ್ಯನಿರ್ವಹಿಸುವ ಜೊತೆಗೆ ಸಂಘವನ್ನು ಮತ್ತಷ್ಟು ಬಲವರ್ಧನೆ ಮಾಡಿ, ಸ್ವಂತ ಕಟ್ಟಡ ನಿರ್ಮಾಣ, ವಾಹನ ಸಾಲ ಹಾಗೂ ಸಂಘ ಸದಸ್ಯರಿಗೆ ವಾಣಿಜ್ಯ ಸಾಲವನ್ನು ನೀಡಿ, ಅರ್ಥಿಕ ಅಭಿವೃದ್ಧಿ ಗೊಳಿಸುವುದು. ಸಂಘದ ಎಲ್ಲಾ ಸದಸ್ಯರಿಗೂ ಶೂನ್ಯ ಬಡ್ಡಿದರ ಸಾಲ ಸೇರಿದಂತೆ ಸರ್ಕಾರ ಹಾಗೂ ಸಹಕಾರ ಸಂಘದಿಂದ ದೊರೆಯುವ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಿ ಮಾದರಿ ಸಂಘವನ್ನಾಗಿಸಲು ಪ್ರಾಮಾಣಿಕವಾಗಿ ದುಡಿಯುವುದಾಗಿ ತಿಳಿಸಿದರು.

ಸಭೆಯಲ್ಲಿ ನಿರ್ದೇಶಕರಾದ ಸುರೇಶ್, ಸಿದ್ದಪ್ಪ, ದೊರೆಸ್ವಾಮಿ, ಚಿಕ್ಕಮಾದೇಗೌಡ, ವಿ.ಸಿ. ಮಹೇಶ್, ಚಿಕ್ಕಸಿದ್ದಯ್ಯ, ಮಹೇಶ್, ನಾಗಲಾಂಬಿಕಾ, ಬಸಮ್ಮಣಿ, ಸಂಘದ ಮುಖ್ಯ ಕಾರ್ಯಾನಿರ್ವಾಹಣಾಧಿಕಾರಿ ಮಹೇಶ್ ಹಾಜರಿದ್ದರು.

---

(((...ಬಾಕ್ಸ್‌...)))

ಸನ್ಮಾನ:

ಸಂಘದ ನೂತನ ಅಧ್ಯಕ್ಷರಾದ ಪಿ. ವೃಷಬೇಂದ್ರಪ್ಪ, ಉಪಾಧ್ಯಕ್ಷ ಮಹದೇವಸ್ವಾಮಿ ಅವರನ್ನು ಸಂಘದ ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಲಾಯಿತು.

---

11ಸಿಎಚ್ಎನ್‌17

ಹೊನ್ನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಪಿ. ವೃಷಬೇಂದ್ರಪ್ಪ 3ನೇ ಬಾರಿಗೆ ಬಾರಿಗೆ ಆಯ್ಕೆಯಾಗುವ ಮೂಲಕ ಹ್ಯಾಟ್ರಿಕ್ ಅಧ್ಯಕ್ಷರಾದರು.