ವಕ್ಫ್ ಬೋರ್ಡ್‌ ಕ್ಯಾನ್ಸರ್‌ನಂತೆ ವ್ಯಾಪಿಸುತ್ತಿದೆ : ಕೇಂದ್ರ ಸರ್ಕಾರ 44 ಅಂಶವನ್ನು ತಿದ್ದುಪಡಿಗೆ ಮುಂದಾಗಿರುವುದು ಶ್ಲಾಘನೀಯ

| Published : Nov 10 2024, 01:51 AM IST / Updated: Nov 10 2024, 12:42 PM IST

ವಕ್ಫ್ ಬೋರ್ಡ್‌ ಕ್ಯಾನ್ಸರ್‌ನಂತೆ ವ್ಯಾಪಿಸುತ್ತಿದೆ : ಕೇಂದ್ರ ಸರ್ಕಾರ 44 ಅಂಶವನ್ನು ತಿದ್ದುಪಡಿಗೆ ಮುಂದಾಗಿರುವುದು ಶ್ಲಾಘನೀಯ
Share this Article
  • FB
  • TW
  • Linkdin
  • Email

ಸಾರಾಂಶ

ಕೇಂದ್ರ ಸರ್ಕಾರ ವಕ್ಫ್ ಬೋರ್ಡ್‌ನ 44 ಅಂಶವನ್ನು ತಿದ್ದುಪಡಿಗೆ ಮುಂದಾಗಿರುವುದು ಶ್ಲಾಘನೀಯ ಎಂದು ಶ್ರೀರಾಮಸೇನೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಪ್ರಮೋದ್ ಮುತಾಲಿಕ್ ತಿಳಿಸಿದರು.

  ಹಾಸನ : ಗೋಮಾಳ, ದೇವಾಲಯ, ಶಾಲೆ, ಸ್ಮಶಾನ, ತೋಟದ ಜಾಗ ಸೇರಿದಂತೆ ಎಲ್ಲಾ ಕಡೆ ವಕ್ಫ್ ಬೋರ್ಡ್‌ ಎನ್ನುವ ಕ್ಯಾನ್ಸರ್‌ ಹರಡುತ್ತಿದ್ದು, ಪಹಣಿಯಲ್ಲಿ ಆಗಿರುವ ತಪ್ಪನ್ನು ಸಿಎಂ ವಾಪಾಸ್ ಪಡೆಯುತ್ತೇನೆ ಎಂದು ಹೇಳಿದರೆ ಸಾಕಾಗುವುದಿಲ್ಲ. ಮೊದಲು ಪಹಣಿಗಳು ತಿದ್ದುಪಡಿ ಆಗಬೇಕು. ಇದೊಂದು ವ್ಯವಸ್ಥಿತ ಷಡ್ಯಂತ್ರವಾಗಿದ್ದು, ಕೊನೆಗೆ ಮುಖ್ಯಮಂತ್ರಿಗಳ ಬುಡಕ್ಕೆ ಬರಲಿದೆ. ಕೇಂದ್ರ ಸರ್ಕಾರ ವಕ್ಫ್ ಬೋರ್ಡ್‌ನ 44 ಅಂಶವನ್ನು ತಿದ್ದುಪಡಿಗೆ ಮುಂದಾಗಿರುವುದು ಶ್ಲಾಘನೀಯ ಎಂದು ಶ್ರೀರಾಮಸೇನೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಪ್ರಮೋದ್ ಮುತಾಲಿಕ್ ತಿಳಿಸಿದರು.

 ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ವಕ್ಫ್ ಬೋರ್ಡ್‌ಗೆ ರೈತರ ಹಾಗೂ ಹಿಂದೂಗಳ ಜಮೀನು ನಮೂದಾಗಿರುವುದು ಖಂಡನೀಯ. ಆಳುವ ಸರ್ಕಾರಗಳು ಅದರಲ್ಲೂ ಕಾಂಗ್ರೆಸ್ ಸರ್ಕಾರ ಮುಸಲ್ಮಾನರ ಏಳಿಗೆಗೆ ಹೆಚ್ಚಿನ ಒತ್ತು ನೀಡುವ ಮೂಲಕ ಹಿಂದೂಗಳ ಪಾಲಿಗೆ ಮಾರಕ ನೀತಿಯನ್ನು ಅನುಸರಿಸುತ್ತಿದೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಎಲ್ಲಾ ಆಸ್ತಿ ಮುಸಲ್ಮಾನರ ಪಾಲಿಗೆ ಬರೆದುಕೊಡುವ ವ್ಯವಸ್ಥಿತ ಪಿತೂರಿ ನಡೆಯುತ್ತಿದೆ. 

ರಾಜ್ಯದೆಲ್ಲೆಡೆ ವಕ್ಫ್ ಬೋರ್ಡ್ ವೈರಸ್ ಹರಡುತ್ತಿದ್ದು, ಕಾಂಗ್ರೆಸ್ ಇವರಿಗೆ ಪವರ್‌ ಕೊಡುತ್ತಿದೆ. ರಾಜ್ಯಾದ್ಯಂತ ೯ ಲಕ್ಷ ೪೦ ಸಾವಿರ ಎಕರೆ ಜಾಗ ವಕ್ಫ್ ಬೋರ್ಡ್‌ಗೆ ಸೇರಿದೆ. ಕೇಂದ್ರ ಸರ್ಕಾರ ೪೪ ತಿದ್ದುಪಡಿ ಮಾಡುವ ಪ್ರಕ್ರಿಯೆ ನಿರ್ಣಯ ಕೈಗೊಂಡಿತು. ಆ ಕೂಡಲೇ ಸಚಿವ ಜಮೀರ್ ಅಹಮದ್ ತಮ್ಮ ಅಪ್ಪನ ಜಾಗ ಎಂದುಕೊಂಡು ಇಡೀ ರಾಜ್ಯಾದ್ಯಂತ ಪ್ರವಾಸ ಮಾಡಿದ್ದಾರೆ. ಮುಖ್ಯಮಂತ್ರಿ ಸೂಚನೆ ಮೇರೆಗೆ ಬಂದಿದ್ದೇನೆ ಎಂದು ಜಿಲ್ಲಾಧಿಕಾರಿ, ಅಧಿಕಾರಿಗಳಿಗೆ ಧಮ್ಕಿ ಹಾಕಿ ವಕ್ಫ್ ಬೋರ್ಡ್‌ಗೆ ಆಸ್ತಿ ಮಾಡಿಸಿದ್ದಾರೆ ಎಂದರು.

ಪ್ರತಿ ತಾಲೂಕಿನಲ್ಲಿ ಅಭಿಯಾನ: ಸಿಎಂ ವಾಪಸ್ ಪಡೆಯುತ್ತೇನೆ ಎಂದು ಹೇಳಿದರೆ ಸಾಲುವುದಿಲ್ಲ. ಅಷ್ಟಕ್ಕೆ ಮಗಿಯಲ್ಲ. ಪಹಣಿಗಳು ತಿದ್ದುಪಡಿ ಆಗಬೇಕು ಎಂದು ಆಗ್ರಹಿಸಿದರು. ಇದು ವ್ಯವಸ್ಥಿತವಾದ ಷಡ್ಯಂತ್ರ. ನಾವು ಕೇಂದ್ರ ಸರ್ಕಾರದ ನಿರ್ಣಯಕ್ಕೆ ಬೆಂಬಲವನ್ನು ಸೂಚಿಸುತ್ತಿದ್ದೇವೆ. ಎಲ್ಲರೂ ಪಹಣಿ ಪರಿಶೀಲಿಸಿಕೊಳ್ಳಲಿ ಎಂದು ಪ್ರತಿ ತಾಲೂಕಿನಲ್ಲಿ ಅಭಿಯಾನ ಮಾಡುತ್ತೇವೆ. ಗೋಮಾಳ, ದೇವಾಲಯ, ಶಾಲೆ, ಸ್ಮಾಶನ ಎಲ್ಲೆಡೆ ವಕ್ಫ್ ಬೋರ್ಡ್ ವೈರಸ್ ಹರಡುತ್ತಿದೆ.

 ಬಿಜೆಪಿ ಕಾಲದಲ್ಲಿ ಆಗಿದ್ದರು ತಪ್ಪು ತಪ್ಪೇ ಅದನ್ನು ಖಂಡಿಸುತ್ತೇನೆ. ಇಸ್ಲಾಂಮೀಕರಣ ಮಾಡುವ ಹಿನ್ನೆಲೆಯಲ್ಲಿ ಭೂಮಿ ಕಬಳಿಕೆ ಮಾಡಿ ಮುಸ್ಲಿಂ ಜನಸಂಖ್ಯೆ ಹೆಚ್ಚಳ ಮಾಡಲು ಪ್ರಯತ್ನಿಸುತ್ತಿದ್ದಾರೆ. ಮುಂದೆ ಕರ್ನಾಟಕದಲ್ಲಿ ಬರೀ ನಮಾಜ್ ಮಾಡೋದು, ಬುರ್ಕಾ ಹಾಖೋಳೊದೆ ಎಲ್ಲೆಡೆ ಆಗುತ್ತದೆ ಎಂದರು. ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಕಾಂಗ್ರೆಸ್‌ಬವರೇ ಮುಂದೆ ನಿಮ್ಮ, ಮನೆ, ತೋಟ, ಜಮೀನು ನಿಮ್ಮನ್ನು ಬಿಡುವುದಿಲ್ಲ.

 ಕೇವಲ ಓಟಿಗೋಸ್ಕರ ನೀವು ಈ ರೀತಿ ಮಾಡುತ್ತಿದ್ದೀರಾ! ದೇಶ ಉಳಿಯಬೇಕು, ನೀವು ನಿಮ್ಮ ಮಕ್ಕಳ ಆಸ್ತಿ ಉಳಿಯಬೇಕು. ಕಾಂಗ್ರೆಸ್‌ನವರು ಕೂಡ ಕೇಂದ್ರ ಸರ್ಕಾರದ ನಿರ್ಣಯಕ್ಕೆ ನೀವು ಬೆಂಬಲ ಕೊಡಬೇಕು. ನಮ್ಮ ದೇಶ, ಸಮಾಜ, ಸಂಸ್ಕೃತಿ ಉಳಿಸಬೇಕು. ಜಮೀರ್ ಅಹಮದ್ ಅವರನ್ನು ಕೂಡಲೇ ಗಡಿಪಾರು ಮಾಡಿದರೆ ಸಾಲದು ಗಲ್ಲಿಗೆ ಏರಿಸಬೇಕು ಎಂದು ಆಕ್ರೋಶವ್ಯಕ್ತಪಡಿಸಿದರು. ಇಷ್ಟಾದರೂ ಸಚಿವ ಜಮೀರ್‌ ಅಹಮದ್ ಗುಪ್ತ ಸಭೆ ಮಾಡಿದ್ದಾರೆ. ಅವರು ಹೋರಾಟ ಮಾಡಲಿ ನೀವು ನಿಮ್ಮ ಕೆಲಸ ಮಾಡಿ ಎಂದು ಸೂಚನೆ ಕೊಟ್ಟಿದ್ದಾರೆ.

 ಕೊನೆಗೆ ಮುಖ್ಯಮಂತ್ರಿಗಳ ಬುಡಕ್ಕೆ ತಲುಪಲಿದೆ ಎಂದು ಇದೆ ವೇಳೆ ಎಚ್ಚರಿಕೆ ಮಾತನ್ನು ತಿಳಿಸಿದರು. ತಿದ್ದುಪಡಿಗೆ ಯೋಜನೆ: ಕೇಂದ್ರ ಸರ್ಕಾರ ವಕ್ಫ್ ಬೋರ್ಡ್‌ನ ನಿಯಮಗಳಲ್ಲಿ ತಿದ್ದುಪಡಿ ತರಲು ಯೋಜನೆ ರೂಪಿಸಿದ್ದು, ಇದಕ್ಕೆ ಕಾಂಗ್ರೆಸ್ ಸೇರಿದಂತೆ ಎಲ್ಲಾ ಪಕ್ಷಗಳು ಹಾಗೂ ಜನಪ್ರತಿನಿಧಿಗಳು ಬೆಂಬಲ ನೀಡಬೇಕು. 

ಇಲ್ಲವಾದರೆ ಇಂದು ಯಾರು ಬೆಂಬಲ ನೀಡುವುದಿಲ್ಲವೋ ಮುಸಲ್ಮಾನರನ್ನು ಪುಷ್ಠೀಕರಿಸುವ ಕೆಲಸ ಮಾಡುತ್ತಾರೋ ಅವರ ಬುಡಕ್ಕೆ ಕುತ್ತು ಬರುವಲ್ಲಿ ಯಾವುದೇ ಅನುಮಾನ ಇಲ್ಲ ಎಂದರು. ಇಡೀ ದೇಶದಲ್ಲಿ ಅಕ್ರಮ ಬಾಂಗ್ಲಾ ವಲಸಿಗರ ಹಾವಳಿ ಹೆಚ್ಚಿದೆ. ಇದು ಕರ್ನಾಟಕ ರಾಜ್ಯ ಹಾಗೂ ಹಾಸನ ಜಿಲ್ಲೆಯೂ ಹೊರತಾಗಿಲ್ಲ, ಇತ್ತೀಚಿಗೆ ಜಿಲ್ಲಾಧಿಕಾರಿ ಕಚೇರಿಯ ಆಧಾರ್‌ ಕಾರ್ಡ್‌ ಶಾಖೆಯಲ್ಲೇ ಸಿಬ್ಬಂದಿ ಹಣ ಪಡೆದು ನಕಲಿ ಆಧಾರ್ ಕಾರ್ಡ್ ಮಾಡಿ ಕೊಡುತ್ತಿದ್ದ ಪ್ರಕರಣ ಇದಕ್ಕೆ ಉದಾಹರಣೆ. 

ಇದು ಹಾಸನ ಜಿಲ್ಲೆಯಲ್ಲಿ ಮಾತ್ರವಲ್ಲ ಎಲ್ಲ ಕಡೆ ವ್ಯಾಪಸಿದೆ ಕೂಡಲೇ ಅವರನ್ನು ಪತ್ತೆ ಹಚ್ಚಿ ಅವರನ್ನು ಹೊರಗೆ ಕಳಿಸುವ ಕೆಲಸವನ್ನು ಮಾಡಬೇಕಿದೆ. ಕಾಫಿ ತೋಟಗಳು, ವ್ಯಾಪಾರ ವ್ಯವಹಾರ ಎಲ್ಲಾ ಕ್ಷೇತ್ರಗಳಿಗೂ ವ್ಯಾಪಿಸಿರುವ ಬಾಂಗ್ಲಾ ವಲಸಿಗರನ್ನು ಪತ್ತೆ ಹಚ್ಚಿ ಕ್ರಮಕೈಗೊಳ್ಳದೇ ಇದ್ದರೆ ಮುಂದಿನ ದಿನಗಳಲ್ಲಿ ದೇಶಿಯರಿಗೆ ತೊಂದರೆ ಆಗುವುದು ಖಚಿತ. ಈ ನಿಟ್ಟಿನಲ್ಲಿ ಆಳುವ ಸರ್ಕಾರಗಳು ಯೋಚಿಸಿ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶ್ರೀರಾಮಸೇನೆ ಸಂಘಟನೆ ಜಿಲ್ಲಾಧ್ಯಕ್ಷ ಜಾನೇಕೆರೆ ಹೇಮಂತ್, ಕಾರ್ಯಾಧ್ಯಕ್ಷ ಮಹೇಶ್ ಕುಮಾರ್‌, ಜಿಲ್ಲಾ ಉಪಾಧ್ಯಕ್ಷ ಕೆ.ಕೆ. ಪುನೀತ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರುಣ್, ಜಿಲ್ಲಾ ಅಸಂಘಟನಾ ಕಾರ್ಯದರ್ಶಿ ಮನು ಜಗತ್, ಜಿಲ್ಲಾ ಕಾರ್ಯದರ್ಶಿ ಧರ್ಮ ನಾಯಕ್, ನಗರ ಅಧ್ಯಕ್ಷ ಅರುಣ್, ತಾಲೂಕು ಪ್ರದೀಪ್ ಇತರರು ಉಪಸ್ಥಿತರಿದ್ದರು. * ಬಾಕ್ಸ್‌: ಹಿಂದೂಗಳ ಕಾಣಿಕೆ ಆದಾಯ ಮುಸಲ್ಮಾನರ ಅಭಿವೃದ್ಧಿಗೆ ಬಳಕೆ

ಹಾಸನಾಂಬ ಉತ್ಸವ ಹಾಗೂ ದೇವಾಲಯವನ್ನು ದುರ್ಬಳಕೆ ಮಾಡಿಕೊಂಡು ಕೇವಲ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಯೋಚಿಸುವ ಸರ್ಕಾರ ಹಾಗೂ ಜಿಲ್ಲಾಡಳಿತದ ನಡೆ ಖಂಡನೀಯ. ವಿಐಪಿ ಹಾಗೂ ವಿವಿಐಪಿ ಪಾಸ್‌ಗಳಿಗೆ ಬೆಲೆ ಇಲ್ಲದಂತೆ ಆಗಿದೆ. ಜೊತೆಗೆ ಮುಜರಾಯಿ ಇಲಾಖೆ ದೇವಾಲಯಗಳಿಂದ ಬಂದ ಹಿಂದೂಗಳ ಕಾಣಿಕೆ ಆದಾಯ ಮುಸಲ್ಮಾನರ ಅಭಿವೃದ್ಧಿಗೆ ಬಳಕೆ ಆಗುತ್ತಿದೆ. ಜೊತೆಗೆ ದೇವಾಲಯಗಳ ಅಭಿವೃದ್ಧಿ ಬದಲಾಗಿ ಇತರ ಉದ್ದೇಶಕ್ಕೆ ಬಳಕೆ ಆಗುತ್ತಿದೆ. ಇದನ್ನು ಶ್ರೀರಾಮ ಸೇನೆ ಸಹಿಸುವುದಿಲ್ಲ. ಇದೇ ಕಾರಣಕ್ಕೆ ಈಗಾಗಲೇ ಶ್ರೀರಾಮ ಸೇನೆ ವತಿಯಿಂದ ಮುಜರಾಯಿ ಇಲಾಖೆಗೆ ಸೇರಿದ ದೇವಾಲಯಗಳ ಹುಂಡಿಗಳಿಗೆ ಹಣ ಹಾಕಬೇಡಿ ಎಂದು ಭಕ್ತರಿಗೆ ತಿಳಿಸಲಾಗುತ್ತಿದೆ ಎಂದು ಹೇಳಿದರು.