ಸಾರಾಂಶ
ಕನ್ನಡ ಪ್ರಭವಾರ್ತೆ ಜಗಳೂರು
ನಂಜುಂಡಪ್ಪ ವರದಿ ಪ್ರಕಾರ ಹಿಂದುಳಿದ ಜಗಳೂರು ತಾಲೂಕಿನ ಕೆರೆಗಳಿಗೆ ನೀರು ತುಂಬುವ ಬಹುದಿನದ ಕನಸ್ಸು ನನಸ್ಸಾಗುತ್ತಿರುವುದು ಸಂತಸ ತಂದಿದೆಯಲ್ಲದೇ ಕ್ಷೇತ್ರದ ಮತದಾರರ ಸ್ವರ್ಗಕ್ಕೆ ಇನ್ನೇನು ಎರಡು ಗೇಣು ಇದೆ ಎನ್ನುವಷ್ಟು ಖುಷಿ ಪಟ್ಟಿದ್ದಾರೆ ಎಂದು ಶಾಸಕ ಚಿಕ್ಕಮ್ಮನಹಟ್ಟಿ ಬಿ. ದೇವೇಂದ್ರಪ್ಪ ಹೇಳಿದರು.ಪಟ್ಟಣದ ಜಗಳೂರುಕೆರೆಗೆ ತುಂಗಾಭದ್ರದಿಂದ ನೀರು ಹರಿದು ಬಂದ ಹಿನ್ನೆಲೆ ಶನಿವಾರ ಹಮ್ಮಿಕೊಂಡಿದದ ಸಂಭ್ರಮೋತ್ಸವದಲ್ಲಿ ಮಾತನಾಡಿ, ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವ ಮಹತ್ವದ ಯೋಜನೆ ಯಶಸ್ಸಿಗೆ ಸಿರಿಗೆರೆ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಪರಿಶ್ರಮ ಹಾಗೂ ಸಿಎಂ ಸಿದ್ದರಾಮಯ್ಯ ಕಾಳಾಜಿಯಾಗಿದೆ. ಈ ಯೋಜನೆ ಯಶಸ್ಸಿನಲ್ಲಿ ಮಾಜಿ ಶಾಸಕರಾದ ಎಚ್.ಪಿ ರಾಜೇಶ್, ಎಸ್.ವಿ ರಾಮಚಂದ್ರ ಸೇರಿ ನಮ್ಮ ಮೂರು ಜನರ ಪಾತ್ರವು ಇದೆ. ನಮ್ಮ ಉದ್ದೇಶ ಕ್ಷೇತ್ರದ ಅಭಿವೃದ್ಧಿಗೆ ಪಕ್ಷ ಭೇದ ಮರೆತು ನಾವೆಲ್ಲರು ಒಂದಾಗಿ ಕೆಲಸ ಮಾಡುತ್ತೇವೆ. ೫೭ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಯಶಸ್ವಿಯಾಗಿದೆ. ಭದ್ರಾ ಮೇಲ್ದಂಡೆ ಯೋಜನೆ, ಬಹುಗ್ರಾಮ ಕುಡಿಯುವ ನೀರು ಯೋಜನೆ ಸೇರಿ ನೀರಾವರಿ ಯೋಜನೆ ಜಾರಿಗೆ ಬರುವ ಸಮೀಪವಿದ್ದು, ಆದಷ್ಟು ಬೇಗ ಇದಕ್ಕೆ ಹಸಿರು ನಿಶಾನೆ ತೋರಿಸಲಾಗುವುದು ಎಂದು ತಿಳಿಸಿದರು.
ಮಾಜಿ ಶಾಸಕ ಎಸ್.ವಿ ರಾಮಚಂದ್ರ ಮಾತನಾಡಿ, ಕೆರೆಗಳಿಗೆ ನೀರು ತುಂಬುವುದರಿಂದ ಹಿಂದುಳಿದ ಜಗಳೂರು ನೀರಾವರಿಗೆ ಸಹಕಾರಿಯಾಗಲಿದೆ. ನಾನು ಶಾಸಕನಾಗಿದ್ದಾಗ ಹೆಚ್ಚು ಒತ್ತು ನೀಡಲಾಗಿತ್ತು. ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಿಸುವಲ್ಲಿ ಪ್ರಮುಖ ಪಾತ್ರ ವಸಹಿಸಲಾಗಿತ್ತು. ಮಾಜಿ ಶಾಸಕ ಎಚ್.ಪಿ. ರಾಜೇಶ್ ಯೋಜನೆ ಅನುಷ್ಠಾನಗೊಳಿಸಿದರು, ನಾನು ಎಲ್ಲಾ ಕೆರೆಗಳಿಗೆ ನೀರು ಬರಲು ಸಿದ್ಧತೆ ಮಾಡಿದೆ, ಶಾಸಕ ದೇವೇಂದ್ರಪ್ಪ ಅವದಿಯಲ್ಲಿ ನೀರು ಬಂದಿದೆ ಎಂದರು.ಮಾಜಿ ಶಾಸಕ ಎಚ್.ಪಿ ರಾಜೇಶ್ ಮಾತನಾಡಿ, ಜಗಳೂರು ಕೆರೆ ಅಭಿವೃದ್ಧಿಗೆ ಸುಮಾರು ₹೨ ಕೋಟಿ ಅನುದಾನದಲ್ಲಿ ಸುತ್ತಲು ವಾಕ್ ಪಾತ್ ನಿರ್ಮಾಣ ಮಾಡಲಾಗಿತ್ತು. ಕೆರೆ ಹೂಳು ತೆಗೆಸಲಾಗಿತ್ತು. ಇದೀಗ ನೀರು ಬಂದ ಮೇಲೆ ಉತ್ತಮ ವಾತಾವರಣ ನಿರ್ಮಾಣವಾಗಲಿದೆ. ತಾಲೂಕಿನ ೪೬ ಕೆರೆ, ಅರಸಿಕೆರೆ ಹೋಬಳಿ ೧೧ ಕೆರೆ ಸೇರಿ ೫೭ ಕೆರೆಗಳಿಗೆ ನೀರು ಬರಲಿದೆ. ಇದರಲ್ಲಿ ಸಿರಿಗೆರೆ ಶ್ರೀಗಳು ಶ್ರಮ ತುಂಬ ಇದೆ. ಎಸ್.ಎಸ್ ಮಲ್ಲಿಕಾರ್ಜುನ, ಎಂ.ಬಿ ಪಾಟೀಲ್, ಎಚ್. ಆಂಜನೇಯ ನೆನಸಿಕೊಳ್ಳಬೇಕು, ಸಿದ್ದರಾಮಯ್ಯ ಅವರ ಕಾರ್ಯದರ್ಶಿ ಅತೀಕ್ ಅವರ ಕೊನೆಗಳಿಗೆಯಲ್ಲಿ ಬಜೆಟ್ ಸೇರಿಸುವಲ್ಲಿ ಮುಖ್ಯವಾಗಿದ್ದಾರೆ. ಬಿಜೆಪಿ ಸರ್ಕಾರದ ಅವದಿಯಲ್ಲಿ ರಾಮಚಂದ್ರ ಸಾಕಷ್ಟು ಒತ್ತು ನೀಡಿದ್ದರು ಎಂದರು. ಸಿಹಿ ಹಂಚಿ ಸಂಭ್ರಮ:
ರಾಜಕೀಯವಾಗಿ ಎಸ್.ವಿ ರಾಮಚಂದ್ರ, ಎಚ್.ಪಿ ರಾಜೇಶ್, ಬಿ. ದೇವೇಂದ್ರಪ್ಪ ವಿರೋಧಿಗಳಾಗಿದ್ದರು, ಕ್ಷೇತ್ರದ ಅಭಿವೃದ್ಧಿಯಲ್ಲಿ ನಾವೆಲ್ಲರೂ ಒಂದೂ ಎಂಬುವುದನ್ನು ಕೆರೆ ವೀಕ್ಷಣೆ ವೇಳೆ ಸಾಬೀತು ಮಾಡಿದರು. ಕೆರೆಗೆ ನೀರು ಹರಿಯುತ್ತಿರುವುದು ವೀಕ್ಷಣೆ ಮಾಡಿ ಮೂರು ಜನರು ಒಬ್ಬರಿಗೊಬ್ಬರು ಕೈ ಕುಲುಕಿಸಿ ಸಂತಸ ವ್ಯಕ್ತಪಡಿಸಿದರಲ್ಲದೆ ಸಿಹಿ ಹಂಚಿ ಸಂಭ್ರಮಿಸಿದರು.ಈ ಸಂದರ್ಭದಲ್ಲಿ ಜೆಡಿಎಸ್ ರಾಜ್ಯ ಕಾರ್ಯದರ್ಶಿ ಕಲ್ಲೇರುದ್ರೇಶ್, ಕೆಪಿಸಿಸಿ ಎಸ್ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ ಪಾಲಯ್ಯ, ಬಿಜೆಪಿ ಮಂಡಲ್ ಅಧ್ಯಕ್ಷ ಎಚ್.ಸಿ ಮಹೇಶ್ ಬ್ಲಾಕ್ ಕಾಂಗ್ರೆಸ್ ತಾಲೂಕಾಧ್ಯಕ್ಷ ಷಂಷೀರ್ ಅಹಮದ್, , ಮಾಜಿ ತಾ.ಪಂ ಸದಸ್ಯ ಸಿದ್ದೇಶ್, ಪ.ಪಂ ಮಾಜಿ ಸದಸ್ಯ ಮಂಜುನಾಥ್, ಪೂಜಾರಿ ಸಿದ್ದಪ್ಪ, ಗ್ಯಾರಂಟಿ ಅನುಷ್ಠಾನ ಯೋಜನೆಯ ಸದಸ್ಯ ರಮೇಶ್ ಸರ್ಕಾರ್, ಡಿ.ವಿ ನಾಗಪ್ಪ,ಮರುಳಾರಾಧ್ಯ, ಸೇರಿದಂತೆ ಮತ್ತಿತರರಿದ್ದರು.