ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ:ಯಾವತ್ತೂ ರಾಜಕಾರಣದ ಕಡೆ ನೋಡದ ನಮ್ಮ ತಾಯಿ ಸಹೋದರಿ, ಸಿದ್ದರಾಮಯ್ಯನವರ ಪತ್ನಿ ಮೇಲೆ ಆರೋಪ ಮಾಡುತ್ತಿದ್ದಾರೆ. ಯಾವತ್ತಾದರೂ ಅವರನ್ನು ಟಿವಿಯಲ್ಲಿ ನೋಡಿದಿರಾ. ಪತ್ರಿಕೆಯಲ್ಲಿ ನೋಡಿದ್ದೀರಾ ಅವರನ್ನು? ಅಂತಹ ಪತ್ನಿ ಸಿದ್ದರಾಮಯ್ಯನವರಿಗೆ ಸಿಕ್ಕಿದ್ದಾರೆ. ಆಕೆ ನಮ್ಮ ತಾಯಿ, ನಾವು ರಾಜಕಾರಣ ಮಾಡುತ್ತೇವೆ, ನಮ್ಮ ಹೆಂಡಂದಿರು,
ಕನ್ನಡಪ್ರಭ ವಾರ್ತೆ ಬಾಗಲಕೋಟೆ:
ಯಾವತ್ತೂ ರಾಜಕಾರಣದ ಕಡೆ ನೋಡದ ನಮ್ಮ ತಾಯಿ ಸಹೋದರಿ, ಸಿದ್ದರಾಮಯ್ಯನವರ ಪತ್ನಿ ಮೇಲೆ ಆರೋಪ ಮಾಡುತ್ತಿದ್ದಾರೆ. ಯಾವತ್ತಾದರೂ ಅವರನ್ನು ಟಿವಿಯಲ್ಲಿ ನೋಡಿದಿರಾ. ಪತ್ರಿಕೆಯಲ್ಲಿ ನೋಡಿದ್ದೀರಾ ಅವರನ್ನು? ಅಂತಹ ಪತ್ನಿ ಸಿದ್ದರಾಮಯ್ಯನವರಿಗೆ ಸಿಕ್ಕಿದ್ದಾರೆ. ಆಕೆ ನಮ್ಮ ತಾಯಿ, ನಾವು ರಾಜಕಾರಣ ಮಾಡುತ್ತೇವೆ, ನಮ್ಮ ಹೆಂಡಂದಿರು, ಮಕ್ಕಳು ಎಷ್ಟೆಷ್ಟು ತಲೆ ತೂರಿಸುತ್ತಾರೆ ಅನ್ನೋದನ್ನು ನೋಡಿದ್ದೀರಿ, ಕುಮಾರಸ್ವಾಮಿ ಅವರ ಮನೆಯಲ್ಲಿ ಏನೇನು ನಡೆಯುತ್ತದೆ, ಯಾರ್ಯಾರು ಓಡಾಡುತ್ತಾರೆ ಅವರಿಗೂ ಗೊತ್ತಿದೆ ಎಂದು ತಮ್ಮ ಭಾಷಣದಲ್ಲಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದರು.