ಸಾರಾಂಶ
ಕನ್ನಡಪ್ರಭ ವಾರ್ತೆ ಹನೂರು ಮೂಲಭೂತ ಸೌಲಭ್ಯ ಕೊರತೆ ಹಿನ್ನೆಲೆ ಲೋಕಸಭಾ ಚುನಾವಣೆ ಬಹಿಷ್ಕಾರ ಮಾಡಲು ಇಂಡಿಗನತ್ತ ಗ್ರಾಮಸ್ಥರು ಮುಂದಾಗಿದ್ದಾರೆ. ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಗ್ರಾಪಂ ವ್ಯಾಪ್ತಿಗೆ ಸೇರುವ ಇಂಡಿಗನತ್ತ ಗ್ರಾಮ ನಿವಾಸಿಗಳು ಸಭೆ ಸೇರಿ ಜನಪ್ರತಿನಿಧಿ, ಅಧಿಕಾರಿಗಳ ಆಶ್ವಾಸನೆ ಬೇಡ ಮೂಲಭೂತ ಸೌಲಭ್ಯ ನೀಡಿ ಇಲ್ಲದಿದ್ದರೆ ಗ್ರಾಮಸ್ಥರಿಗೆ ವಿಷ ನೀಡಿ ಎಂದು ಅಕ್ರೋಶ ಭರಿತವಾಗಿ ಲೋಕಸಭೆ ಚುನಾವಣೆ ಮತದಾನ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ.
ಸಮಸ್ಯೆಗಳ ಸರಮಾಲೆ: ಹಿರಿಯ ಮುಖಂಡ ಮಾದತಂಬಡಿ ಮಾತನಾಡಿ, ಗ್ರಾಮದಲ್ಲಿ ಕಿರು ನೀರು ಯೋಜನೆ ಅಡಿ ಮನೆಮನೆಗೆ ಕಲ್ಪಿಸಿರುವ ನೀರಿನ ಸಂಪರ್ಕ ಪೈಪ್ ಲೈನ್ ಕಳಪೆ ಕಾಮಗಾರಿಯಾಗಿದೆ ಜೊತೆಗೆ ಇಲ್ಲಿನ ಮಕ್ಕಳು ಮಲೆ ಮಹದೇಶ್ವರ ಬೆಟ್ಟಕ್ಕೆ ಬೆಳಗಿನ ಜಾವ ತೆರಳಿ, ಸಂಜೆ ನಸುಕಿನಲ್ಲಿ ಬರುತ್ತಾರೆ ಜೀವ ಕೈಯಲ್ಲಿಡಿದು ಪೋಷಕರು ಇರಬೇಕಾದ ಪರಿಸ್ಥಿತಿ ಇದೆ. ವಿದ್ಯುತ್ ಇಲ್ಲದೆ ಕೊಳ್ಳಿ ಬೆಳಕಿನಲ್ಲಿ ಊಟ ಮಾಡಬೇಕು, ಮಕ್ಕಳು ಓದಬೇಕು. ಈಗಾಗಿದೆ ನಮ್ಮ ಬದುಕು, ಇದರ ಬಗ್ಗೆ ಮಲೆ ಮಹದೇಶ್ವರ ಬೆಟ್ಟದಲ್ಲಿ ಎಲ್ಲಾ ಹಳ್ಳಿಗಳ ನಿವಾಸಿಗಳು ಸಭೆ ಸೇರಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜನಪ್ರತಿನಿಧಿ ಅಧಿಕಾರಿಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರಾಮದ ಪುಟ್ಟ ತಂಬಡಿ ಮಾತನಾಡಿ, ಆಕಾಶದ ಮಳೆ ನಂಬಿ ಭೂಮಿಯ ಬೆಳೆ ನಂಬಿರುವ ರೈತನಿಗೆ ಈ ಭಾಗದಲ್ಲಿರುವ ಕುಗ್ರಾಮಗಳ ಜನತೆಗೆ ಸ್ವಾತಂತ್ರ್ಯ ಬಂದು 76 ವರ್ಷಗಳು ಕಳೆದರೂ ನಾಗಮಲೆ, ಇಂಡಿಗನತ್ತ ,ತೋಕೆರೆ, ಪಡಸಲನಾಥ ,ಮೆಂದಾರೆ, ತೇಕಣೆ ಗ್ರಾಮಗಳಲ್ಲಿ ನೂರಾರು ವರ್ಷಗಳಿಂದ ಬುಡಕಟ್ಟು ಸಮುದಾಯದ ಬೇಡಗಂಪಣ ಜನಾಂಗವೇ ಹೆಚ್ಚಾಗಿ ಇಲ್ಲಿ ವಾಸಿಸುತ್ತಿದ್ದು ಇಲ್ಲಿನ ಜನ ಮೂಲಭೂತ ಸೌಲಭ್ಯಗಳು ಕಲ್ಪಿಸುವಂತೆ ಹಿಂದೆ ಜನಪ್ರತಿನಿಧಿಗಳಾದ ಉಸ್ತುವಾರಿ ಸಚಿವರು ಹಾಗೂ ಹಿಂದಿನ ಜಿಲ್ಲಾಧಿಕಾರಿಗೂ ಮತ್ತು ಚೆಸ್ಕಾಂ ಎಂಡಿ ಆಗಿ ಮಲೆ ಮಹದೇಶ್ವರ ಬೆಟ್ಟದ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಯಾಗಿದ್ದ ಜಯವಿಭವ ಸ್ವಾಮಿಗೂ ಮೂಲಭೂತ ಸೌಲಭ್ಯ ಕಲ್ಪಿಸುವಂತೆ ಮನವಿ ಸಲ್ಲಿಸಿದ್ದು ನಿಮ್ಮ ಗ್ರಾಮಗಳಿಗೆ ಸೌಲಭ್ಯಗಳನ್ನು ಕಲ್ಪಿಸಲು ಸರ್ಕಾರ ಮುಂದಾಗಿದೆ ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಕಲ್ಪಿಸಲಾಗುವುದು ಎಂದು ಹೇಳಿದ ಜನಪ್ರತಿನಿಧಿ ಅಧಿಕಾರಿಗಳು ಮಾತು ಮಾತಾಗಿಯೇ ಉಳಿದಿದೆ.ಇಲ್ಲಿನ ಜನತೆ ಜಾನುವಾರುಗಳ ಮೇಯಿಸುತ್ತಿದ್ದ ಗಂಡಸರು ವಾಹನಗಳ ಮೂಲಕ ಮಲೆ ಮಹದೇಶ್ವರ ಬೆಟ್ಟದಿಂದ ಇಂಡಿಗನತ್ತ ಗ್ರಾಮದವರೆಗೆ ನಾಗಮಲೆ ಭಕ್ತರನ್ನು ಕರೆ ತರಲಾಗುತ್ತಿತ್ತು ಮತ್ತು ಇಲ್ಲಿನ ಮಹಿಳೆಯರು ಸಹ ಜ್ಯೂಸ್ ಮತ್ತೆ ಮಜ್ಜಿಗೆ ಮಾರಾಟ ಮಾಡುತ್ತಿದ್ದರು. ಇದರಿಂದ ಜೀವನ ನಿರ್ವಹಣೆ ಮಾಡಲಾಗುತ್ತಿತ್ತು ಇತ್ತೀಚಿನ ದಿನಗಳಲ್ಲಿ ಯಾವುದೇ ವ್ಯಾಪಾರವಿಲ್ಲದೆ ಭಕ್ತರಿಲ್ಲದೆ ಕಷ್ಟಕರವಾಗಿ ಜೀವನ ನಡೆಯುತ್ತಿದೆ. ಹೀಗಾಗಿ ಈಗಿನ ಸರ್ಕಾರ ಅರಣ್ಯ ಇಲಾಖೆ ಮುಖಾಂತರ ಧಾರ್ಮಿಕವಾಗಿ ಮಲೆ ಮಹದೇಶ್ವರ ಬೆಟ್ಟಕ್ಕೆ ಬಂದಂತ ಭಕ್ತಾದಿಗಳು ನಾಗಮಲೆಗೆ ಬರುತ್ತಿದ್ದರು.
ಇತ್ತೀಚಿನ ದಿನಗಳಲ್ಲಿ ನಿಷೇಧ ಏರಿರುವ ಹಿನ್ನೆಲೆಯಲ್ಲಿ ವಾಹನಗಳಲ್ಲಿ ಭಕ್ತಾದಿಗಳು ಬರುತ್ತಿಲ್ಲ. ಜೊತೆಗೆ ಇಲ್ಲಿನ ಜನತೆಗೆ ಕೆಲಸ ಮಾಡಲು ಯಾವುದೇ ಕೆಲಸವಿಲ್ಲ ಹೀಗಾಗಿ ಇಲ್ಲಿನ ಜನತೆ ಮಳೆ ಇಲ್ಲದೆ ಕಂಗಲಾಗಿರುವ ಜನತೆಗೆ ಕುಡಿಯುವ ನೀರಿನ ಸಮಸ್ಯೆ ವಿದ್ಯುತ್ ಇಲ್ಲ ರಸ್ತೆಯು ಇಲ್ಲ ಮೂಲಭೂತ ಸೌಲಭ್ಯಗಳೇ ಮರೀಚಿಕೆಯಾಗಿರುವ ಗ್ರಾಮಕ್ಕೆ ನೀಡಿರುವ ಸರ್ಕಾರ ಆಧಾರ್ ಕಾರ್ಡ್ ವೋಟರ್ ಐಡಿ ಇನ್ನಿತರ ಸರ್ಕಾರಿ ಸೌವಲತ್ತು ಪಡೆಯುವ ದಾಖಲಾತಿಗಳನ್ನು ವಾಪಸ್ ಪಡೆದು ನಮ್ಮನ್ನು ಸಾಯಲು ವಿಷ ನೀಡಿ ಇಲ್ಲದಿದ್ದರೆ ಮೂಲಭೂತ ಸೌಲಭ್ಯ ಕೊಡಿ ಈ ಬಾರಿ ಲೋಕಸಭಾ ಚುನಾವಣೆ ಬರುತ್ತಿರುವುದರಿಂದ ಈ ಭಾಗದ 5000ಕ್ಕೂ ಹೆಚ್ಚು ಜನಸಂಖ್ಯೆ ಇರುವ ಚುನಾವಣಾ ಮತದಾನವನ್ನು ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಇದೇ ಸಂದರ್ಭದಲ್ಲಿ ಗ್ರಾಮದ ಹಿರಿಯ ಮುಖಂಡ ಮಹದೇವಪ್ಪ, ವೀರಣ್ಣ ತಂಬಡಿ, ಹುಚ್ಚಯ್ಯ ತಂಬಳಿ, ಸಿದ್ದರಾಜು, ನಾಗಣ್ಣ, ಚಂದ್ರಶೇಖರ್, ಚಿನ್ನಪ್ಪ ಇನ್ನಿತರರು ಇದ್ದರು.