ಹಿಂದೂ ಸಮಾಜ ಎಂದಿಗೂ ದ್ವೇಷವನ್ನು ಉತ್ತೇಜಿಸಿಲ್ಲ. ಯಾರ ಮೇಲೂ ದ್ವೇಷ ಸಾಧಿಸಿದ ಇತಿಹಾಸವೂ ಇಲ್ಲ. ಸಹಬಾಳ್ವೆ ಮತ್ತು ಸಂಸ್ಕೃತಿಯೊಂದಿಗೆ ಜೀವನ ನಡೆಸುವ ಸಮಾಜವಾಗಿರುವ ಹಿಂದೂ ಸಮಾಜವನ್ನು ಜಾತಿಗಳ ಆಧಾರದಲ್ಲಿ ಒಡೆಯುವ ಪ್ರಯತ್ನಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದ್ದು, ಇದರ ವಿರುದ್ಧ ಸಮಸ್ತ ಹಿಂದೂ ಸಮಾಜ ಜಾಗೃತವಾಗಬೇಕಿದೆ ಎಂದು ಆರ್‌ಎಸ್‌ಎಸ್ ಕಾರ್ಯವಾಹ ವಾದಿರಾಜ ಭಟ್ ಗೋಪಾಡಿ ಹೇಳಿದರು.

ಕಾರ್ಕಳ: ಹಿಂದೂ ಸಮಾಜ ಎಂದಿಗೂ ದ್ವೇಷವನ್ನು ಉತ್ತೇಜಿಸಿಲ್ಲ. ಯಾರ ಮೇಲೂ ದ್ವೇಷ ಸಾಧಿಸಿದ ಇತಿಹಾಸವೂ ಇಲ್ಲ. ಸಹಬಾಳ್ವೆ ಮತ್ತು ಸಂಸ್ಕೃತಿಯೊಂದಿಗೆ ಜೀವನ ನಡೆಸುವ ಸಮಾಜವಾಗಿರುವ ಹಿಂದೂ ಸಮಾಜವನ್ನು ಜಾತಿಗಳ ಆಧಾರದಲ್ಲಿ ಒಡೆಯುವ ಪ್ರಯತ್ನಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದ್ದು, ಇದರ ವಿರುದ್ಧ ಸಮಸ್ತ ಹಿಂದೂ ಸಮಾಜ ಜಾಗೃತವಾಗಬೇಕಿದೆ ಎಂದು ಆರ್‌ಎಸ್‌ಎಸ್ ಕಾರ್ಯವಾಹ ವಾದಿರಾಜ ಭಟ್ ಗೋಪಾಡಿ ಹೇಳಿದರು.

ಭಾನುವಾರ ಅಜೆಕಾರಿನಲ್ಲಿ ನಡೆದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.

ಕಾಡುಹೊಳೆ ಜಂಗಮೇಶ್ವರ ಮಠದ ಪ್ರಧಾನ ಅರ್ಚಕ, ವಾಗ್ಮಿ ರಾಘವೇಂದ್ರ ಭಟ್ ಅಧ್ಯಕ್ಷತೆ ವಹಿಸಿದ್ದರು.

ಉದ್ಯಮಿ ಬಾಲಕೃಷ್ಣ ಹೆಗ್ಡೆ ಅಜೆಕಾರು, ಪ್ರಸನ್ನ ಇಂದ್ರ, ಶಂಕರ ಆಚಾರ್ಯ, ಎಣ್ಣೆಹೊಳೆ ಜಂಗಮೇಶ್ವರ ಮಠದ ಅರ್ಚಕ ರಾಜೇಂದ್ರ ಎಣ್ಣೆಹೊಳೆ, ಕೃಷ್ಣ ಮೇರ, ಶೀನ ಗೌಡ ಅಂಡಾರು, ಕೊರಗ ಪಾಣಾರ, ನಿವೃತ್ತ ಶಿಕ್ಷಕ ಭಾಸ್ಕರ ಶೆಟ್ಟಿ ಕುಂಠಿನಿ, ಆನಂದ ಹೆಗ್ಡೆ ಹೆರ್ಮುಂಡೆ, ರವೀಂದ್ರ ಪಿ., ಕೃಷ್ಣ ಶೆಟ್ಟಿಗಾರ್ ಎಣ್ಣೆಹೊಳೆ, ಗಣಪತಿ ಭಂಡಾರಿ ಅಜೆಕಾರು, ಶಂಕರ ಶೇರಿಗಾರ್, ನಿವೃತ್ತ ಶಿಕ್ಷಕ ಜನಾರ್ದನ ನಾಯ್ಕ್, ಉದ್ಯಮಿ ತಾರಾನಾಥ ಪೂಜಾರಿ, ಅಜೆಕಾರು ವಿಷ್ಣುಮೂರ್ತಿ ಭಜನಾ ಮಂಡಳಿ ಸ್ಥಾಪಕ ಭೋಜ ಮಡಿವಾಳ, ಮೋಹನ್ ದಾಸ್ ಜೋಗಿ, ಸದಾಶಿವ ಸಫಲಿಗ, ವಿನಿಲ್ ರಾಣೆ, ಬಾಲಕೃಷ್ಣ ಪಿ. ಉಪಸ್ಥಿತರಿದ್ದರು.

ಅರ್ಪಿತಾ ಸ್ವಾಗತಿಸಿ, ಸುಕೇಶ್ ಶೆಟ್ಟಿ ಎಣ್ಣೆಹೊಳೆ ವಂದಿಸಿದರು. ಅಕ್ಷತಾ ನಿರೂಪಿಸಿದರು.