20ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಗೀತೆ ಬಿಡುಗಡೆ

| Published : Mar 06 2025, 12:34 AM IST

ಸಾರಾಂಶ

ತರೀಕೆರೆ, ಪಟ್ಟಣದ ಬಯಲು ರಂಗ ಮಂದಿರದಲ್ಲಿ ಮಾ 7, 8 ರಂದು ನಡೆಯಲಿರುವ 20ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ರವಿ ದಳವಾಯಿ ಅವರು ರಚಿಸಿರುವ ತರೀಕೆರೆ ವೀಳ್ಳೇವು ಸ್ವಾಗತ ಗೀತೆ ಬಿಡುಗಡೆ ಕಾರ್ಯಕ್ರಮ ಬುಧವಾರ ಪ್ರವಾಸಿ ಮಂದಿರದಲ್ಲಿ ಏರ್ಪಡಿಸಲಾಗಿತ್ತು.

ಪ್ರವಾಸಿ ಮಂದಿರದಲ್ಲಿ ಪುರಸಭೆ ಅಧ್ಯಕ್ಷ ವಸಂತಕುಮಾರ್‌

ಕನ್ನಡಪ್ರಭ ವಾರ್ತೆ, ತರೀಕೆರೆ

ಪಟ್ಟಣದ ಬಯಲು ರಂಗ ಮಂದಿರದಲ್ಲಿ ಮಾ 7, 8 ರಂದು ನಡೆಯಲಿರುವ 20ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ರವಿ ದಳವಾಯಿ ಅವರು ರಚಿಸಿರುವ ತರೀಕೆರೆ ವೀಳ್ಳೇವು ಸ್ವಾಗತ ಗೀತೆ ಬಿಡುಗಡೆ ಕಾರ್ಯಕ್ರಮ ಬುಧವಾರ ಪ್ರವಾಸಿ ಮಂದಿರದಲ್ಲಿ ಏರ್ಪಡಿಸಲಾಗಿತ್ತು.ಪುರಸಭೆ ಅಧ್ಯಕ್ಷ ವಸಂತಕುಮಾರ್ ಸ್ವಾಗತ ಗೀತೆ ಬಿಡುಗಡೆ ನೆರವೇರಿಸಿದರು. ರವಿ ದಳವಾಯಿ ಅವರ ಗೀತೆಗೆ ಸೊಲ್ಲಾಪುರ ಸತ್ಯನಾರಾಯಣ ದಾಸ್ ಅವರ ಸಹಕಾರ, ಬೆಂಗಳೂರು ವಿಜೇತ್ ಸಂಗೀತ ಸಂಯೋಜಿಸಿದ್ದು, ಬೆಂಗಳೂರು ಗಿರೀಶ್ ಧ್ವನಿಯಲ್ಲಿ ಮೂಡಿ ಬಂದಿದೆ.

ಪುರಸಭಾಧ್ಯ ಮಾಜಿ ಅಧ್ಯಕ್ಷ ಟಿ.ವಿ.ಶಿವಶಂಕರರಪ್ಪ, ಟಿ.ಎಸ್.ಪ್ರಕಾಶ್ ವರ್ಮ, ಎಂ.ನರೇಂದ್ರ, ಪುರಸಭೆ ನಾಮಿನಿ ಸದಸ್ಯ ಟಿ.ಜಿ.ಮಂಜುನಾಥ್, 20ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಸಮ್ಮೇಳನಾದ್ಯಕ್ಷ ಡಾ. ಎಚ್.ಎಂ. ಮರುಳಸಿದ್ದಯ್ಯ ಪಟೇಲ್, ಕನ್ನಡಶ್ರೀ ಬಿ,.ಎಸ್.ಭಗವಾನ್, ಲೇಖಕ ತ.ಮ.ದೇವಾನಂದ್, ಜಯಸ್ವಾಮಿ, ಎಸ್.ಟಿ. ತಿಪ್ಪೇಶಪ್ಪ, ಶಂಕರಪ್ಪ, ಚೇತನ್ ಗೌಡ, ಉುಪನ್ಯಾಸಕ ದಾದಾಪೀರ್, ಚಂದ್ರಶೇಖರ್, ಮಹಿಳಾ ಘಟಕದ ಅಧ್ಯಕ್ಷೆ ಸುನಿತಾ ಕಿರಣ್ ಕುಮಾರ್, ಕಸಾಪ ಸದಸ್ಯರು ಮತ್ತಿತರರು ಭಾಗವಹಿಸಿದ್ದರು.5ಕೆಟಿಆರ್.ಕೆ.1ಃ

ತರೀಕೆರೆಯಲ್ಲಿ ಪುರಸಭೆ ಅಧ್ಯಕ್ಷ ವಸಂತಕುಮಾರ್ ತಾಲೂಕು ಕಸಾಪ ಅಧ್ಯಕ್ಷ ರವಿ ದಳವಾಯಿ ಅವರು ರಚಿಸಿರುವ 20ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಗೀತೆ ಬಿಡುಗಡೆ ಮಾಡಿದರು. ಪುರಸಭಾ ಮಾಜಿ ಅಧ್ಯಕ್ಷ ಟಿ.ವಿ. ಶಿವಶಂಕರರಪ್ಪ, ಟಿ.ಎಸ್.ಪ್ರಕಾಶ್ ವರ್ಮ, ಎಂ.ನರೇಂದ್ರ, ಪುರಸಭೆ ನಾಮಿನಿ ಸದಸ್ಯ ಟಿ.ಜಿ.ಮಂಜುನಾಥ್ ತಾ.ಕಸಾಪ ಅಧ್ಯಕ್ಷ ರವಿ ದಳವಾಯಿ, ಕನ್ನಡಶ್ರೀ ಬಿ.ಎಸ್.ಭಗವಾನ್ ಮತ್ತಿತರರು ಇದ್ದರು.

-------------

-