ಕಂಬಳೀಪುರದಲ್ಲಿ ಸಂವಿಧಾನ ಜಾಗೃತಿ ಜಾಥಾಗೆ ಸ್ವಾಗತ

| Published : Feb 09 2024, 01:48 AM IST

ಸಾರಾಂಶ

ಸೂಲಿಬೆಲೆ: ಜಾತಿಯ ಸಂಕೋಲೆಯಿಂದ ಎಲ್ಲರೂ ಮುಕ್ತವಾಗಬೇಕು ಎಂಬ ಆಶಯವನ್ನು ಡಾ.ಬಿ.ಆರ್.ಅಂಬೇಡ್ಕರ್ ಹೊಂದಿದ್ದರು. ಅಂತಹ ವ್ಯಕ್ತಿಯನ್ನು ಯಾವುದೇ ಒಂದು ಜಾತಿಗೆ ಸೀಮಿತ ಮಾಡಬಾರದು ಎಂದು ಪಿಡಿಒ ಮಂಜುನಾಥ್ ಹೇಳಿದರು.

ಸೂಲಿಬೆಲೆ: ಜಾತಿಯ ಸಂಕೋಲೆಯಿಂದ ಎಲ್ಲರೂ ಮುಕ್ತವಾಗಬೇಕು ಎಂಬ ಆಶಯವನ್ನು ಡಾ.ಬಿ.ಆರ್.ಅಂಬೇಡ್ಕರ್ ಹೊಂದಿದ್ದರು. ಅಂತಹ ವ್ಯಕ್ತಿಯನ್ನು ಯಾವುದೇ ಒಂದು ಜಾತಿಗೆ ಸೀಮಿತ ಮಾಡಬಾರದು ಎಂದು ಪಿಡಿಒ ಮಂಜುನಾಥ್ ಹೇಳಿದರು.

ಸಮೀಪದ ಕಂಬಳೀಪುರ ಗ್ರಾಪಂನಲ್ಲಿ ಸಂವಿಧಾನ ಜಾಗೃತಿ ಜಾಥಾಕ್ಕೆ ಸ್ವಾಗತ ಕೋರಿ ಮಾತನಾಡಿದ ಅವರು, ಸಂವಿಧಾನ ನಮಗೆ ನೀಡಿರುವ ಹಕ್ಕುಗಳು ಮತ್ತು ಕರ್ತವ್ಯಗಳಿಂದ ಎಲ್ಲವನ್ನು ಸುಲಭವಾಗಿ ಸಾಧಿಸಲು ಸಾಧ್ಯವಾಗಿದೆ ಎಂದರು. ಗ್ರಾಪಂ ಅಧ್ಯಕ್ಷೆ ಮಮತಾ ಮಾತನಾಡಿ, ಸರ್ಕಾರಿ ಆದೇಶದಂತೆ ಸಂವಿಧಾನ ಜಾಥಾ ಮೂಲಕ ಜಾಗೃತಿ ಮೂಡಿಸುವ ಕಾರ್ಯಕ್ರಮ ರಾಜ್ಯಾದ್ಯಂತ ಸಾಗುತ್ತಿದೆ. ಅಂಬೇಡ್ಕರ್ ಒಂದು ಶಕ್ತಿ ಎಂದರು.

ಕಾರ್ಯಕ್ರಮದಲ್ಲಿ ಉಪಾಧ್ಯಕ್ಷೆ ಗೀತಾ, ಮಾಜಿ ಅಧ್ಯಕ್ಷ ರಮೇಶ್, ಮುನಿಯಪ್ಪ, ತಾಪಂ ವ್ಯವಸ್ಥಾಪಕಿ ಶಶಿಕಲಾ, ಉಪ ತಹಸೀಲ್ದಾರ್ ಚೈತ್ರಾ, ರಾಜಸ್ವ ನಿರೀಕ್ಷಕ ನ್ಯಾನಮೂರ್ತಿ, ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ಭಾರತಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸಿದ್ದರಾಜು, ಪುಟ್ಟಸ್ವಾಮಿ, ಕಾರ್ಯದರ್ಶಿ ಪುನೀತ್‌ಕುಮಾರ್, ಲೆಕ್ಕಿಗ ಮಂಜುನಾಥ್, ಗ್ರಾಪಂ ಸದಸ್ಯೆ ಪೂಜಾ, ಮುನಿತಾಯಮ್ಮ, ಸುನೀಲ್‌ಯಾದವ್, ಸುರೇಶ್, ಚಂದ್ರಪ್ಪ, ರವಿಚಂದ್ರ, ನವೀನ್‌ಕುಮಾರ್, ಗೋಪಾಲಪ್ಪ ಇತರರಿದ್ದರು.

ಚಿತ್ರ; ೦೮ ಸೂಲಿಬೆಲೆ ೧ ಜೆಪಿಜೆ ನಲ್ಲಿದೆ

ಸೂಲಿಬೆಲೆ ಹೋಬಳಿಯ ಕಂಬಳೀಪುರ ಗ್ರಾಪಂನಲ್ಲಿ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಗ್ರಾಪಂ ಅಧ್ಯಕ್ಷೆ ಮಮತಾ, ಪಿಡಿಒ ಮಂಜುನಾಥ್‌ ಚಾಲನೆ ನೀಡಿದರು. ಉಪ ತಹಸೀಲ್ದಾರ್ ಚೈತ್ರಾ, ರಾಜಸ್ವ ನಿರೀಕ್ಷಕ ನ್ಯಾನಮೂರ್ತಿ, ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ಭಾರತಿ ಇತರರಿದ್ದರು.