ಕುಶಾಲನಗರ: ಲೋಕಸಭಾ ಸದಸ್ಯ ಯದುವೀರ್ ಒಡೆಯರ್‌ಗೆ ಸ್ವಾಗತ

| Published : Jun 16 2024, 01:51 AM IST

ಸಾರಾಂಶ

ಲೋಕಸಭಾ ಸದಸ್ಯ ಯದುವೀರ್‌ ಒಡೆಯರ್‌ ಅವರನ್ನು ಕುಶಾಲನಗರ ಬಿಜೆಪಿ ಪ್ರಮುಖರು ಹಾಗೂ ಕಾರ್ಯಕರ್ತರು ಆತ್ಮೀಯವಾಗಿ ಬರಮಾಡಿಕೊಂಡರು.

ಕನ್ನಡಪ್ರಭ ವಾರ್ತೆ ಕುಶಾಲನಗರ

ಕೊಡಗು ಮೈಸೂರು ಲೋಕಸಭಾ ಸದಸ್ಯ ಯದುವೀರ್ ಒಡೆಯರ್ ಅವರು ತಲಕಾವೇರಿಗೆ ತೆರಳುತ್ತಿದ್ದ ಸಂದರ್ಭ ಕುಶಾಲನಗರದಲ್ಲಿ ಬಿಜೆಪಿ ಪ್ರಮುಖರು ಹಾಗೂ ಕಾರ್ಯಕರ್ತರು ಆತ್ಮೀಯವಾಗಿ ಬರಮಾಡಿಕೊಂಡರು.

ಮೈಸೂರಿನಿಂದ ಕುಶಾಲನಗರ ಮೂಲಕ ತಲಕಾವೇರಿಗೆ ತೆರಳುತ್ತಿದ ಸಂದರ್ಭ ಕುಶಾಲನಗರದ ಗಡಿಭಾಗದಲ್ಲಿ ನೂತನ ಸಂಸದರನ್ನು ವಾಲಗದೊಂದಿಗೆ ಮಾಜಿ ಸಚಿವರಾದ ಎಂ ಪಿ ಅಪ್ಪಚ್ಚು ರಂಜನ್, ಮಾಜಿ ವಿಧಾನ ಪರಿಷತ್ ಸದಸ್ಯರಾದ ಸುನಿಲ್ ಸುಬ್ರಮಣಿ, ಮಡಿಕೇರಿ ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ, ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ನಾಪಂಡ ರವಿ ಕಾಳಪ್ಪ, ಬಿ ಬಿ ಭಾರತೀಶ್, ಮಂಡಲ ಪ್ರಧಾನ ಗೌತಮ್ , ಮಹಿಳಾ ಪ್ರಮುಖರಾದ ಪುಷ್ಪ ನಾಗೇಶ್, ಕುಶಾಲನಗರ ಬಿಜೆಪಿ ನಗರ ಅಧ್ಯಕ್ಷ ಎಂಎಂ ಚರಣ್, ಪ್ರಧಾನ ಕಾರ್ಯದರ್ಶಿ ಎಚ್ ಎಂ ಮಧುಸೂದನ್, ಜಯವರ್ಧನ್ ಡಿ ಕೆ ತಿಮ್ಮಪ್ಪ ಮತ್ತಿತರರು ಹೂಗುಚ್ಚ ನೀಡುವುದರೊಂದಿಗೆ ಬಿಜೆಪಿ ಮಹಿಳಾ ಕಾರ್ಯಕರ್ತರು ಪೂರ್ಣ ಕುಂಭ ಕಲಶದೊಂದಿಗೆ ಸ್ವಾಗತಿಸಿದರು.

ಯದುವೀರ್ ಅವರು ಗಡಿ ಭಾಗದಲ್ಲಿರುವ ಕಾವೇರಿ ಪ್ರತಿಮೆಗೆ ಪೂಜೆ ಸಲ್ಲಿಸಿ ನಂತರ ಕುಶಾಲನಗರ ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ನಂತರ ತಲಕಾವೇರಿಯತ್ತ ತೆರಳಿದರು.