ಸಾರಾಂಶ
ಆಧುನಿಕತೆಯಲ್ಲಿ ಜನಪದ ಸಾಹಿತ್ಯ ನಶಿಸುತ್ತಿದೆ. ಜನಪದ ಕಲೆಯನ್ನು ಗೀತ ಸಾಹಿತ್ಯವಾದ ಗಿಗೀ ಪದ, ಲಾವಣಿ, ಅಂತಿ ಪದಗಳಲ್ಲಿ ಕಾಣಬಹುದಾಗಿದೆ. ಸಂವಾದ ರೀತಿಯಲ್ಲಿ ಉಪನ್ಯಾಸ ನಡೆಯಬೇಕು.
ಹನುಮಸಾಗರ:
ಪಾಶ್ಚಿಮಾತ್ಯ ಸಂಸ್ಕೃತಿ ಜನಪದ ಸಾಹಿತ್ಯವನ್ನು ನಾಶಮಾಡುತ್ತಿದ್ದು, ನಾಡು, ನುಡಿಯನ್ನು ಬಿಟ್ಟುಕೊಡಬಾರದೆಂದು ಪ್ರಭಾರಿ ಪ್ರಾಚಾರ್ಯ ಭೀಮಪ್ಪ ಗೊಲ್ಲರ ಹೇಳಿದರು.ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ದಿ. ಅಡಿವೆಮ್ಮ ಬಸಪ್ಪ ಗೋನಾಳ ಹಾಗೂ ಕಮಲಾಬಾಯಿ ಪಾಂಡುರಂಗ ಕುಲಕರ್ಣಿ ದತ್ತಿನಿಧಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗ್ರಾಮೀಣ ಬದುಕು ಜನಪದ ಸಾಹಿತ್ಯವನ್ನು ಕಟ್ಟಿಕೊಟ್ಟಿದೆ. ಜನಪದ ಆಚರಣೆ ಒಂದು ಕಲೆಯಾಗಿ ನಿಂತಿದ್ದು, ಜನರ ಸಮೂಹದಿಂದ ಕೂಡಿದೆ ಎಂದರು.
ಸಂಪನ್ಮೂಲ ವ್ಯಕ್ತಿ ಮಹಾಂತೇಶ ಗವಾರಿ ಮಾತನಾಡಿ, ಆಧುನಿಕತೆಯಲ್ಲಿ ಜನಪದ ಸಾಹಿತ್ಯ ನಶಿಸುತ್ತಿದೆ. ಜನಪದ ಕಲೆಯನ್ನು ಗೀತ ಸಾಹಿತ್ಯವಾದ ಗಿಗೀ ಪದ, ಲಾವಣಿ, ಅಂತಿ ಪದಗಳಲ್ಲಿ ಕಾಣಬಹುದಾಗಿದೆ. ಸಂವಾದ ರೀತಿಯಲ್ಲಿ ಉಪನ್ಯಾಸ ನಡೆಯಬೇಕು ಎಂದು ಹೇಳಿದರು.ಕೆಪಿಎಸ್ ಎಸ್‌ಡಿಎಂಸಿ ಉಪಾಧ್ಯಕ್ಷ ಬಸವರಾಜ ದ್ಯಾವಣ್ಣನವರ ಭುವನೇಶ್ವರ ದೇವಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ತಾಲೂಕು ಕಸಾಪ ಮಾಜಿ ಅಧ್ಯಕ್ಷ ಶ್ರೀನಿವಾಸ ಜಹಗೀರದಾರ ಉದ್ಘಾಟಿಸಿದರು. ತಾಲೂಕು ಕಸಾಪ ಅಧ್ಯಕ್ಷ ಲೆಂಕಪ್ಪ ವಾಲಿಕಾರ, ಹೋಬಳಿ ಅಧ್ಯಕ್ಷ ಮಂಜುನಾಥ ಗುಳೆದಗುಡ್ಡ, ರಾಮಚಂದ್ರ ಬಡಿಗೇರ, ಅಬ್ದುಲ್‌ಕರಿಂ ವಂಟೆಳಿ, ನಭಿಸಾಬ ಕುಷ್ಟಗಿ, ರವೀಂದ್ರ ಬಾಕಳೆ, ಚಂದಪ್ಪ ಹಕ್ಕಿ, ಬಸಮ್ಮ ಹಿರೇಮಠ, ಸುನೀತಾ ಕೋಮಾರಿ, ರೇಣುಕಾ ಪುರದ, ದತ್ತಿ ದಾನಿಗಳಾದ ಹನುಮಪ್ಪ ಗೋನಾಳ, ಮುತ್ತಣ್ಣ ಗೋನಾಳ, ಗ್ಯಾನಪ್ಪ ತಳವಾರ, ಚಂದ್ರು ಗುಳೇದ ಹಾಗೂ ಉಪನ್ಯಾಸಕರು ಇದ್ದರು.