ನಾವು ಕಲಾ ಪ್ರತಿಭೆ ಉಳಿಸಿ ಬೆಳೆಸುವ ಉದ್ದೇಶದಿಂದ ಬಹುತೇಕ ಕಲಾವಿದರ ಆರ್ಥಿಕ ಸ್ಥಿತಿ ಇಂದಿಗೂ ಶೋಚನೀಯ

ಕನ್ನಡಪ್ರಭ ವಾರ್ತೆ ಮೈಸೂರು2023-24 ರಿಂದ ಪ. ಜಾತಿ ಉಪಯೋಜನೆ ಹಾಗೂ ಪ. ಪಂಗಡ ಉಪಯೋಜನೆಯಡಿ ಪ್ರಾಯೋಜಿಸಲಾದ ಪೌರಾಣಿಕ ನಾಟಕಗಳ ತಂಡಗಳಿಗೆ ಯಾವುದೇ ಸಂಭಾವನೆ ಬಂದಿಲ್ಲದ ಕಾರಣ ಕೂಡಲೇ ಕಲಾವಿದರಿಗೆ ಸಂಭಾವನೆ ನೀಡುವಂತೆ ಸರ್ಕಾರಕ್ಕೆ ರಂಗಭೂಮಿ ಕಲಾವಿದ ಹುಯಿಲಾಳು ರಾಮಸ್ವಾಮಿ ಮನವಿ ಮಾಡಿದ್ದಾರೆ.ಜಿಲ್ಲೆಯ ಪ. ಜಾತಿ, ಪಂಗಡಗಳ ಕಲಾವಿದರ ಆರ್ಥಿಕ ಸ್ಥಿತಿ ಶೋಚನೀಯವಾಗಿರುತ್ತದೆ.ಮೈಸೂರು ಪುರಭವನ, ಟೌನ್ ಹಾಲ್, ಕಲಾಮಂದಿರ, ಜಗನ್ಮೋಹನ ಅರಮನೆ ಹಾಗೂ ಜಾತ್ರೆಗಳು ನಡೆಯುವ ಸ್ಥಳಗಳಲ್ಲಿ ಕಳೆದ 4 ವರ್ಷಗಳಿಂದ ಪೌರಾಣಿಕ ನಾಟಕಗಳನ್ನು ಆಯೋಜಿಸಿಕೊಂಡು ಬಂದಿರುತ್ತೇವೆ. ಆದರೆ ನಾವು ನಾಟಕ ಮಾಡುವಾಗ ನಾಟಕದ ಮಹಿಳಾ ಕಲಾವಿದರಿಗೆ, ಸೀನರಿ ಮಾಲೀಕರಿಗೆ, ವಾದ್ಯಗೋಷ್ಟಿರವರಿಗೆ, ಸಂಭಾವನೆ ನೀಡಲು ಬಡ್ಡಿಗೆ ಹಣವನ್ನು ತಂದು ಕಲಾವಿದರ ಸಂಭಾವನೆಯ ಹಣ ನೀಡಿರುತ್ತೇವೆ. ನಾವು ಕಲಾ ಪ್ರತಿಭೆ ಉಳಿಸಿ ಬೆಳೆಸುವ ಉದ್ದೇಶದಿಂದ ಬಹುತೇಕ ಕಲಾವಿದರ ಆರ್ಥಿಕ ಸ್ಥಿತಿ ಇಂದಿಗೂ ಶೋಚನೀಯವಾಗಿದೆ.ಕಲೆಯೇ ಜೀವಳವಾಗಿ ಕಲಾ ಶಾರದೆಯ ಸೇವೆಯೆಂದು ಬದುಕುತ್ತಿರುವ ಕಲಾವಿದರ ಗೋಳು ಕೇಳುವವರು ಯಾರು ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ, ಗ್ರಾಮೀಣ ಪ್ರದೇಶದ ಜನರಲ್ಲಿ ಅಡಕವಾಗಿರುವ ಜಾನಪದ ಕಲೆಗಳಿಂದ ನಮ್ಮ ನಾಡು ಶ್ರೀಮಂತವಾಗಿದೆ ಕಲೆಯೇ ನಮ್ಮ ಸಂಸ್ಕೃತಿ ಜೀವಾಳವೆಂದು ಬದುಕುತ್ತಿರುವ ಎಷ್ಟೋ ಕುಟುಂಬಗಳ ಬದುಕು ಕಟ್ಟಿಕೊಳ್ಳಲಾಗದೇ ನಿರಾಶಕ್ತಿಗಳಾಗಿದ್ದಾರೆ.ಕಲೆ ಉಳಿದರೆ ಮಾತ್ರ ನಮ್ಮ ಸಂಸ್ಕೃತಿ ಉಳಿಯಲು ಸಾದ್ಯ. ಆಗ ಕಲಾವಿದರು ಉಳಿಯುವರು, ಕಲಾವಿದರಿಗಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇದ್ದರು ಎಷ್ಟೋ ಬಡ ಹವ್ಯಾಸಿ ಕಲಾವಿದರು ಇಲಾಖೆಯ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಎಲ್ಲರನ್ನು ಪ್ರೋತ್ಸಾಹಿಸಬೇಕಾದ ಇಲಾಖೆ ಮತ್ತು ಸರ್ಕಾರದವರು ಕೂಡಲೇ ಪ್ರಾಯೋಜನೆ ಸಂಭಾವನೆಯನ್ನು ಬಿಡುಗಡೆ ಮಾಡಬೇಕೆಂದು ಅವರು ಒತ್ತಾಯಿಸಿದ್ದಾರೆ.