ಗಂಗಾವತಿ ರಸ್ತೆ ಅಗಲೀಕರಣ: ಅಕ್ರಮ ಕಟ್ಟಡ ತೆರವು ಕಾರ್ಯಾಚರಣೆ

| Published : Feb 09 2024, 01:45 AM IST

ಸಾರಾಂಶ

ಭೂಸೇನಾ ನಿಗಮಗಕ್ಕೆ ಕಾಮಗಾರಿ ವಹಿಸಿದ್ದು, ಈಗ ನಗರಸಭೆಯವರು ರಸ್ತೆ ಅಗಲೀಕರಣಕ್ಕಾಗಿ ಹಸಿರು ನಿಶಾನೆ ತೋರಿಸಿದ್ದರಿಂದ ತೆರವು ಕಾರ್ಯಚರಣೆ ನಡೆಸಿದ್ದಾರೆ. 80 ಅಡಿ ರಸ್ತೆ ಅಗಲೀಕರಣಕ್ಕೆ ಮುಂದಾಗಿದ್ದು, ರಸ್ತೆ ಮಧ್ಯದಿಂದ 40 X 40 ಅಡಿಯಂತೆ ಅಗಲೀಕರಣಕ್ಕೆ ಸಿದ್ಧಗೊಂಡಿದೆ.

ಗಂಗಾವತಿ: ನಗರದ ರಾಣಾ ಪ್ರತಾಪ್ ವೃತ್ತದಿಂದ ನೀಲಕಂಠೇಶ್ವರ ವೃತ್ತದವರೆಗೆ ರಸ್ತೆ ಅಗಲೀಕರಣ ಕಾರ್ಯ ಆರಂಭವಾಗಿದೆ. ಈಗ ರಸ್ತೆಯ ಎರಡು ಬದಿಗಳಲ್ಲಿರುವ ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆ ನಡೆದಿದೆ. ರಾಣಾ ಪ್ರತಾಪಾ ವೃತ್ತದಿಂದ ಜುಲೈ ನಗರದವರೆಗೂ ಆಕ್ರಮ ಕಟ್ಟಡ ಸೇರಿದಂತೆ ಕಂಪೌಂಡ್ ತೆರುವು ಪ್ರಕ್ರಿಯೆ ನಡೆಯಿತು.ನಗರದ ರಾಯಚೂರು ರಸ್ತೆಯ ರಾಣಾ ಪ್ರತಾಪ್ ವೃತ್ತದಿಂದ ಜುಲೈನಗರದ, ಗುಂಡಮ್ಮ ಕ್ಯಾಂಪ್ ಮಾರ್ಗವಾಗಿ ಕನಕದಾಸ ವೃತ್ತದಿಂದ ನೀಲಕಂಠೇಶ್ವರ ವೃತ್ತದವರಿಗೆ ರಸ್ತೆ ಅಗಲೀಕರಣಕ್ಕಾಗಿ ಕಲ್ಯಾಣ ಕರ್ನಾಟಕ ರಸ್ತೆ ಅಭಿವೃದ್ಧಿ ಮಂಡಳಿಯಿಂದ (ಕೆಕೆಆರ್ ಡಿಬಿ) ₹12 ಕೋಟಿ ಅನುದಾನ ಇದ್ದು, ಈಗಾಗಲೇ ಈ ಕಾರ್ಯಕ್ಕೆ ₹4.40 ಕೋಟಿ ಬಿಡುಗಡೆಯಾಗಿದೆ.ಭೂಸೇನಾ ನಿಗಮಗಕ್ಕೆ ಕಾಮಗಾರಿ ವಹಿಸಿದ್ದು, ಈಗ ನಗರಸಭೆಯವರು ರಸ್ತೆ ಅಗಲೀಕರಣಕ್ಕಾಗಿ ಹಸಿರು ನಿಶಾನೆ ತೋರಿಸಿದ್ದರಿಂದ ತೆರವು ಕಾರ್ಯಚರಣೆ ನಡೆಸಿದ್ದಾರೆ. 80 ಅಡಿ ರಸ್ತೆ ಅಗಲೀಕರಣಕ್ಕೆ ಮುಂದಾಗಿದ್ದು, ರಸ್ತೆ ಮಧ್ಯದಿಂದ 40 X 40 ಅಡಿಯಂತೆ ಅಗಲೀಕರಣಕ್ಕೆ ಸಿದ್ಧಗೊಂಡಿದೆ.ಅನಧಿಕೃತ ಕಟ್ಟಡಗಳು:ರಸ್ತೆ ಅಗಲೀಕರಣ ಸಂದರ್ಭದಲ್ಲಿ ರಸ್ತೆ ಎಡ ಮತ್ತು ಬಲ ಬದಿಯಲ್ಲಿ ಬರುವ ವಾಣಿಜ್ಯ ಮಳಿಗೆಗಳು, ಮನೆ ಮತ್ತು ಕೆಲ ಗುಡಿಸಲುಗಳು, ದೇವಸ್ಥಾನಗಳು ಇವೆ.