ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲೂಕಿನ ಮಡಿಕೆಬೀಡು ಗ್ರಾಮದಲ್ಲಿ ಮಂಗಳವಾರ ರಾತ್ರಿ ವಿದ್ಯುತ್ ತಂತಿ ಸ್ಪರ್ಶಿಸಿ ಗಂಡಾನೆ ಮೃತಪಟ್ಟಿದೆ.

ಪೊನ್ನಂಪೇಟೆ: ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲೂಕಿನ ಮಡಿಕೆಬೀಡು ಗ್ರಾಮದಲ್ಲಿ ಮಂಗಳವಾರ ರಾತ್ರಿ ವಿದ್ಯುತ್ ತಂತಿ ಸ್ಪರ್ಶಿಸಿ ಗಂಡಾನೆ ಮೃತಪಟ್ಟಿದೆ.

ಆಹಾರ ಅರಸಿ ಮಾಯಾಮುಡಿಯ ಎ. ಬೇಬಿ ಎಂಬುವರ ತೋಟಕ್ಕೆ ಬಂದಿದ್ದ ಆನೆಗೆ ಕರೆಂಟ್ ತಗುಲಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಜಿಲ್ಲೆಯಾದ್ಯಂತ ಇತ್ತೀಚಿನ ದಿನಗಳಲ್ಲಿ ಆನೆ-ಮಾನವ ಸಂಘರ್ಷ ಹೆಚ್ಚಾಗಿದ್ದು, ಒಂದು ಕಡೆ ಕಾಡಾನೆ ದಾಳಿಯಿಂದ ಜನರು ಮೃತಪಟ್ಟರೆ, ಮತ್ತೊಂದು ಕಡೆಯಲ್ಲಿ ಕಾಡಾನೆಗಳು ಕೂಡ ವಿದ್ಯುತ್‌ ಸ್ಪರ್ಶ, ಗುಂಡೇಟಿನಿಂದ ಸಾವನಪ್ಪುತ್ತಿರುವುದು ಸಾಮಾನ್ಯವಾಗಿದೆ. ಇತ್ತೀಚೆಗೆ ಸಿದ್ದಾಪುರ ಸಮೀಪದ ತೋಟವೊಂದರಲ್ಲಿ ತಾಯಿ ಆನೆ ಮೃತಪಟ್ಟಿತ್ತು. ಅದರ ಮರಿ ಆನೆ ತಪ್ಪಿಸಿಕೊಂಡಿತ್ತು.