ಕನ್ನಡಪ್ರಭ ವಾರ್ತೆ ಗುಬ್ಬಿ
ಪ್ರತಿಯೊಬ್ಬ ಪದವೀಧರರ ಧ್ವನಿಯಾಗಿ ಅವರ ಜೊತೆಯಲ್ಲಿ ಇರುತ್ತೇನೆ. ನಾನು ಸುಳ್ಳು ಆಶ್ವಾಸನೆ ಕೊಡಲು ಚುನಾವಣೆಗೆ ಬಂದಿಲ್ಲ ಎಂದು ಆಗ್ನೇಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶಶಿ ಹುಲಿಕುಂಟೆಮಠ ತಿಳಿಸಿದರು. ಪಟ್ಟಣದ ಶ್ರೀ ಚನ್ನಬಸವೇಶ್ವರಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಿ ಮಾತನಾಡಿದ ಅವರು, ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಇದುವರೆಗೂ ಗೆದ್ದಂತಹ ಜನಪ್ರತಿನಿಧಿಗಳು ಯಾರು ಸಹ ಪದವೀಧರರಿಗೆ ಅನೂಕುಲವಾಗುವಂತಹ ಕೆಲಸವನ್ನು ಮಾಡಿಲ್ಲ. ಈ ಭಾರಿ ನಾನು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ಯುವಕರಿಗೆ ಉದ್ಯೋಗ ಸೇರಿದಂತೆ ಹಲವು ರೀತಿಯ ಸ್ವಯಂ ಉದ್ಯೋಗಕ್ಕೂ ಕೂಡ ಹೆಚ್ಚಿನ ಮನ್ನಣೆಯನ್ನು ನೀಡಿ ಕೆಲಸ ಮಾಡಲು ಬದ್ಧವಾಗಿದ್ದೇನೆ. ನಾವು ಹೋದ ಕಡೆಯಲ್ಲೆಲ್ಲ ಉತ್ತಮ ಬೆಂಬಲ ಸಿಕ್ಕಿದ್ದು, ಗುಬ್ಬಿ ತಾಲೂಕಿನಲ್ಲಿಯೂ ಕೂಡ ನಾಲ್ಕು ಸಾವಿರಕ್ಕೂ ಹೆಚ್ಚು ಜನ ಈಗಾಗಲೇ ಹೆಸರು ನೊಂದಣಿ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು.ನಾನು ಗುಬ್ಬಿ ತಾಲೂಕಿನಲ್ಲಿ ಮೂರು ದಿನಗಳ ಕಾಲ ಎಲ್ಲಾ ಶಾಲಾ ಕಾಲೇಜುಗಳಿಗೆ ಪ್ರವಾಸ ಕೈಗೊಳ್ಳುತ್ತೇನೆ ಎಂದು ತಿಳಿಸಿದರು. ಈ ವೇಳೆ ತಾಲೂಕು ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿ ಅಧ್ಯಕ್ಷರು ಕೆ.ಆರ್.ವೆಂಕಟೇಶ್, ಮುಖಂಡರಾದ ಕೊಪ್ಪ ದೇವರಾಜು, ಬಸವಣ್ಣ, ಪ್ರಸನ್ನ ಕುಮಾರ್, ಬಿದರೆ ಯತೀಶ್, ಡಾಬಾ ಕುಮಾರ್, ವಾಸುಗೌಡ, ಡಾ. ಖಾನ್, ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಹಾಜರಿದ್ದರು.