ಶ್ರೀರಾಮನ ಅಸ್ತಿತ್ವ ಪ್ರಶ್ನಿಸಿದವರಿಗೆ ಮತ ನೀಡುವಿರಾ?

| Published : Apr 24 2024, 02:24 AM IST

ಸಾರಾಂಶ

ವಾಲ್ಮೀಕಿ ಮಹರ್ಷಿಗಳು ಬರೆದ ರಾಮಾಯಣದಲ್ಲಿ ನಮಗೆ ಶ್ರೀರಾಮ ಮತ್ತು ಸೀತೆಯ ಜೊತೆ ರಾಮಭಂಟ ಹನುಮನೂ ಅಷ್ಟೇ ಪ್ರಾಮುಖ್ಯತೆ ಪಡೆದ್ದಾರೆ. ಶ್ರೀರಾಮನ ಸೇವೆಗಾಗಿ ಹನುಮಂತ ಮಾಡಿದ ಲೀಲಿಗಳು ಒಂದೆರಡಲ್ಲ. ಅಂತಹ ಶ್ರೀರಾಮನ ಅಸ್ವಿತ್ವವನ್ನು ಇಂದು ಕಾಂಗ್ರೆಸ್ಸಿಗರು ಪ್ರಶ್ನೆ ಮಾಡುತ್ತಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಜಗಳೂರಲ್ಲಿ ಹೇಳಿದ್ದಾರೆ.

- ಸಂತೆ ಮುದ್ದಾಪುರದಲ್ಲಿ ಕಾಂಗ್ರೆಸ್‌ ವಿರುದ್ಧ ಬಿಜೆಪಿ ಅಭ್ಯರ್ಥಿ ಗಾಯತ್ರಿ ವಾಗ್ದಾಳಿ

- - - ಕನ್ನಡ ಪ್ರಭವಾರ್ತೆ ಜಗಳೂರು

ವಾಲ್ಮೀಕಿ ಮಹರ್ಷಿಗಳು ಬರೆದ ರಾಮಾಯಣದಲ್ಲಿ ನಮಗೆ ಶ್ರೀರಾಮ ಮತ್ತು ಸೀತೆಯ ಜೊತೆ ರಾಮಭಂಟ ಹನುಮನೂ ಅಷ್ಟೇ ಪ್ರಾಮುಖ್ಯತೆ ಪಡೆದ್ದಾರೆ. ಶ್ರೀರಾಮನ ಸೇವೆಗಾಗಿ ಹನುಮಂತ ಮಾಡಿದ ಲೀಲಿಗಳು ಒಂದೆರಡಲ್ಲ. ಅಂತಹ ಶ್ರೀರಾಮನ ಅಸ್ವಿತ್ವವನ್ನು ಇಂದು ಕಾಂಗ್ರೆಸ್ಸಿಗರು ಪ್ರಶ್ನೆ ಮಾಡುತ್ತಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಹೇಳಿದರು.

ತಾಲೂಕಿನ ಸಂತೆ ಮುದ್ದಾಪುರದಲ್ಲಿ ಹನುಮ ಜಯಂತಿ ದ್ವಿತೀಯ ವರ್ಷದ ಮಹೋತ್ಸವದಲ್ಲಿ ಪಾಲ್ಗೊಂಡು, ಸಂಜೀವಿನಿ ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು. ದೇವರ ದರ್ಶನದ ಬಳಿಕ ಹನುಮ ಮಾಲಾಧಾರಿಗಳ ಜೊತೆ ಮಾತುಕತೆ ನಡೆಸಿದರು.

ಕೋಟ್ಯಂತರ ಭಾರತೀಯರ ಆರಾಧ್ಯ ದೈವ ಶ್ರೀರಾಮಚಂದ್ರ ಕಾಲ್ಪನಿಕ ಎಂದು ಕಾಂಗ್ರೆಸ್ಸಿಗರು ಕೋರ್ಟ್ ಮೇಟ್ಟಿಲೇರಿದ್ದರು. ಅಯೋಧ್ಯೆಯಲ್ಲಿ ಪ್ರಭು ಶ್ರೀ ರಾಮಚಂದ್ರನ ಭವ್ಯ ಮಂದಿರ ನಿರ್ಮಾಣ ಮಾಡಲು 500 ವರ್ಷಗಳು ಬೇಕಾಯಿತು. ನೂರಾರು ಕರ ಸೇವಕರ ಪ್ರಾಣತ್ಯಾಗ, ಕೋಟ್ಯಂತರ ಭಾರತೀಯರ ಹೋರಾಟದ ಫಲ, ನರೇಂದ್ರ ಮೋದಿ ಜೀ ಅವರ ಇಚ್ಛಾಶಕ್ತಿಯಿಂದ ಇಂದು ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣವಾಗಿದೆ. ಇದೇ ರಾಮಮಂದಿರ ನಿರ್ಮಾಣದ ವ್ಯಾಜ್ಯ ಸುಪ್ರೀಂ ಕೋರ್ಟಿನಲ್ಲಿ ಇದ್ದಾಗ ಇದರ ವಿರುದ್ಧ ಕಾಂಗ್ರೆಸ್ 24 ವಕೀಲರನ್ನು ನೇಮಿಸಿತ್ತು. ವಕೀಲರ ತಂಡದ ನೇತೃತ್ವ ವಹಿಸಿದ್ದವರು ಇದೇ ಕಾಂಗ್ರೆಸ್‌ನ ಕಪಿಲ್ ಸಿಬಲ್ ಎಂದು ಟೀಕಿಸಿದ ಅವರು, ಶ್ರೀರಾಮನ ಅಸ್ವಿತ್ವ ಪ್ರಶ್ನೆ ಮಾಡಿದವರಿಗೆ ಅದರ ಕ್ರೆಡಿಟ್ ಕೇಳುವ ನೈತಿಕತೆ ಇದ್ಯಾ? ನೀವು ಅಂತಹವರಿಗೆ ಮತ ಹಾಕುವಿರಾ? ಎಂದು ಪ್ರಶ್ನಿಸಿದರು.

ಜಗಳೂರು ವಿಧಾನಸಭಾ ಕ್ಷೇತ್ರ ಮಾಜಿ ಶಾಸಕರಾದ ರಾಮಚಂದ್ರಪ್ಪ, ಎಚ್.ಪಿ.ರಾಜೇಶ್, ಬಿಜೆಪಿ ಯುವ ಮುಖಂಡರಾದ ಜಿ.ಎಸ್. ಅನಿತ್ ಕುಮಾರ್, ಪಲ್ಲಗಟ್ಟಿ ಮಹೇಶ್, ಜೆಡಿಎಸ್ ಪಕ್ಷದ ನಾಯಕ ಕಲ್ಲೆರುದ್ರೇಶ್ ಇತರರು ಇದ್ದರು.

- - -

-23ಜೆ.ಜಿ.ಎಲ್ .4:

ದೇವರ ದರ್ಶನ ಬಳಿಕ ಗಾಯತ್ರಿ ಸಿದ್ದೇಶ್ವರ್ ಹನುಮ ಮಲಾಧಾರಿಗಳ ಜೊತೆ ಮಾತುಕತೆ ನಡೆಸಿದರು.