ಸಾರಾಂಶ
ರಾಮದುರ್ಗ: ಕಷ್ಟ ಕಾಲದಲ್ಲಿ ಜನರಿಗೆ ಸಹಾಯ ಮಾಡಿದ್ದನ್ನು ಪರಿಗಣಿಸಿ ಕಳೆದ ವಿಧಾನ ಸಭೆಯ ಚುನಾವಣೆಯಲ್ಲಿ ಹೆಚ್ಚಿನ ಮತಗಳನ್ನು ನೀಡಿದಂತೆ ದೇಶದಲ್ಲಿ ಸನಾತನ ಧರ್ಮ ಉಳಿಯಲು ಈ ಸಾರಿ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ ಅವರನ್ನು ಗೆಲ್ಲಿಸಬೇಕು ಎಂದು ಉದ್ಯಮಿ, ಬಿಜೆಪಿ ಮುಖಂಡ ಚಿಕ್ಕರೇವಣ್ಣ ಮನವಿ ಮಾಡಿದರು.
ಕನ್ನಡಪ್ರಭ ವಾರ್ತೆ ರಾಮದುರ್ಗ
ಕಷ್ಟ ಕಾಲದಲ್ಲಿ ಜನರಿಗೆ ಸಹಾಯ ಮಾಡಿದ್ದನ್ನು ಪರಿಗಣಿಸಿ ಕಳೆದ ವಿಧಾನ ಸಭೆಯ ಚುನಾವಣೆಯಲ್ಲಿ ಹೆಚ್ಚಿನ ಮತಗಳನ್ನು ನೀಡಿದಂತೆ ದೇಶದಲ್ಲಿ ಸನಾತನ ಧರ್ಮ ಉಳಿಯಲು ಈ ಸಾರಿ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ ಅವರನ್ನು ಗೆಲ್ಲಿಸಬೇಕು ಎಂದು ಉದ್ಯಮಿ, ಬಿಜೆಪಿ ಮುಖಂಡ ಚಿಕ್ಕರೇವಣ್ಣ ಮನವಿ ಮಾಡಿದರು.ಪಟ್ಟಣದ ಆರಿಬೆಂಚಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಜರುಗಿದ ತಾಲೂಕು ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಅನೇಕ ದಿನಗಳಿಂದ ಸಂಕಷ್ಟಕ್ಕೆ ಸಿಲುಕಿದ್ದ ಜನರಿಗೆ ಸಹಾಯ ಮಾಡಲೆಂದು ರಾಮದುರ್ಗಕ್ಕೆ ಆಗಮಿಸಿದ ನನ್ನನ್ನು ಚುನಾವಣೆಯಲ್ಲಿ ನಿಲ್ಲಿಸಿ ಹೆಚ್ಚಿನ ಮತಗಳನ್ನು ನೀಡಿದ್ದೀರಿ. ಅದನ್ನು ನಾನು ಎಂದಿಗೂ ಮರೆಯುವುದಿಲ್ಲ ಎಂದು ಧನ್ಯವಾದಗಳನ್ನು ತಿಳಿಸಿದರು.ಬೆಳಗಾವಿ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಡಾ.ಕೆ.ವಿ. ಪಾಟೀಲ ಮಾತನಾಡಿ, ಈ ಬಾರಿ ದೇಶದಲ್ಲಿ ಬಿಜೆಪಿಯ ಧ್ವಜ ಹಾರಲಿದೆ. ಎಲ್ಲರೂ ಬಿಜೆಪಿಗೆ ಮತ ನೀಡಬೇಕು ಎಂದು ಮನವಿ ಮಾಡಿದರು.ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರಾದ ಬಿ.ಎಸ್. ಬೆಳವಣಿಕಿ, ದ್ಯಾವಪ್ಪ ಬೆಳವಡಿ, ಈರಣ್ಣ ಹರನಟ್ಟಿ ಇತರರು ಮಾತನಾಡಿದರು. ಜಿ.ಟಿ.ಭೋಸಲೆ ಕಾರ್ಯಕ್ರಮ ನಿರೂಪಿಸಿದರು. ಬಾಕ್ಸ್...
ಮಂಡಲ ಅಧ್ಯಕ್ಷರ ಗೈರುಪಟ್ಟಣದ ಆರಿಬೆಂಚಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಸಂಜೆ ಜರುಗಿದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಂಡಲ ಅಧ್ಯಕ್ಷ ರಾಜೇಶ ಬೀಳಗಿ ಅನುಪಸ್ಥಿತಿ ಎದ್ದು ಕಾಣುತ್ತಿತ್ತು. ಅಧ್ಯಕ್ಷರ ಮನೆಯಲ್ಲಿ ಮದುವೆ ಇರುವುದರಿಂದ ಸಭೆಗೆ ಹಾಜರಾಗಿಲ್ಲ. ಮುಂದಿನ ಸಭೆಗಳಿಗೆ ಬರಲಿದ್ದಾರೆ ಎಂದು ಉದ್ಯಮಿ ಚಿಕ್ಕರೇವಣ್ಣ ಸಮರ್ಥಿಸಿಕೊಂಡರೇ, ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಬೆಳಗಾವಿಯ ಮೀಟಿಂಗ್‌ನಲ್ಲಿ ಭಾಗವಹಿಸಿದ್ದೆ. ಹಾಗಾಗಿ ಇಂದಿನ ಬಿಜೆಪಿ ಕಾರ್ಯಕರ್ತರ ಸಭೆಗೆ ಹಾಜರಾಗಿರಲಿಲ್ಲ ಎಂದು ಮಂಡಲ ಅಧ್ಯಕ್ಷ ರಾಜೇಶ ಬೀಳಗಿ ಜಾರಿಕೊಂಡರು.ಕೋಟ್...
ದೇಶದ ಭದ್ರತೆ ಮತ್ತು ಹಿಂದುಗಳ ರಕ್ಷಣಗೆ ನರೇಂದ್ರ ಮೋದಿ ಪ್ರಧಾನಿಯಾಗುವುದು ಅನಿವಾರ್ಯವಾಗಿದೆ. ಕೇವಲ ಕೆಲವೇ ಕಡೆಗಳಲ್ಲಿ ಮಾತ್ರ ಕಾಂಗ್ರೆಸ್‌ನ ಗಾಳಿ ಇದೆ. ಉಳಿದೆಡೆ ಬಿಜೆಪಿಯ ಗಾಳಿ ಬೀಸುತ್ತಿದೆ. ಹೀಗಾಗಿ ತಮ್ಮ ಮತಕ್ಕೆ ಬೆಲೆ ಸಿಗಬೇಕಾದರೇ ಬಿಜೆಪಿಗೆ ಮತ ನೀಡಬೇಕು.-ಚಿಕ್ಕರೇವಣ್ಣ, ಉದ್ಯಮಿ, ಬಿಜೆಪಿ ಮುಖಂಡರು.--------------
ಕೊರೋನಾ, ನೆರೆ ಸಂಕಷ್ಟಕ್ಕೆ ಸಿಲುಕಿದ ಜನರ ಸಹಾಯಕ್ಕಾಗಿ ಚಿಕ್ಕರೇವಣ್ಣ ಅವರು ತಮ್ಮ ಸಂಪತ್ತನ್ನು ದಾನ ಮಾಡಿದ್ದಾರೆ. ಆದರೆ ಈಗಿನ ಶಾಸಕರು ವಿಧಾನಸಭೆ ಚುನಾವಣೆ ಮುಗಿದು 11 ತಿಂಗಳಾದರೂ ಜನರ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ. -ಡಾ.ಕೆ.ವಿ.ಪಾಟೀಲ, ಬೆಳಗಾವಿ ಜಿಲ್ಲಾ ಬಿಜೆಪಿ ಕಾರ್ಯದರ್ಶಿ