ಗ್ಯಾರಂಟಿ ಅಲ್ಲದೆ ಸಾಮಾಜಿಕ ನ್ಯಾಯಕ್ಕಾಗಿ ಕಾಂಗ್ರೆಸ್ ಗೆಲ್ಲಿಸಿ: ಜ್ಯೋತಿ ಗೊಂಡಬಾಳ

| Published : May 05 2024, 02:07 AM IST

ಗ್ಯಾರಂಟಿ ಅಲ್ಲದೆ ಸಾಮಾಜಿಕ ನ್ಯಾಯಕ್ಕಾಗಿ ಕಾಂಗ್ರೆಸ್ ಗೆಲ್ಲಿಸಿ: ಜ್ಯೋತಿ ಗೊಂಡಬಾಳ
Share this Article
  • FB
  • TW
  • Linkdin
  • Email

ಸಾರಾಂಶ

ಗ್ಯಾರಂಟಿ ಯೋಜನೆಗಳು ಮಾತ್ರ ಅಲ್ಲ, ಸಾಮಾಜಿಕ ನ್ಯಾಯಕ್ಕಾಗಿಯೂ ಕಾಂಗ್ರೆಸ್ ಗೆಲ್ಲಿಸಬೇಕಾಗಿದೆ.

ಕೊಪ್ಪಳದ ವಿವಿಧ ವಾರ್ಡ್‌ಗಳಲ್ಲಿ ಪ್ರಚಾರಕನ್ನಡಪ್ರಭ ವಾರ್ತೆ ಕೊಪ್ಪಳ

ಗ್ಯಾರಂಟಿ ಯೋಜನೆಗಳು ಮಾತ್ರ ಅಲ್ಲ, ಸಾಮಾಜಿಕ ನ್ಯಾಯಕ್ಕಾಗಿಯೂ ಕಾಂಗ್ರೆಸ್ ಗೆಲ್ಲಿಸಬೇಕಾಗಿದೆ ಎಂದು ಗ್ಯಾರಂಟಿ ಪ್ರಾಧಿಕಾರದ ಸದಸ್ಯೆ ಜ್ಯೋತಿ ಗೊಂಡಬಾಳ ಹೇಳಿದರು.

ನಗರದ ೯ನೇ ವಾರ್ಡ್ ಮತ್ತು ಭಾಗ್ಯನಗರದ ವಾರ್ಡ್‌ ನಂಬರ್ ೨ರಲ್ಲಿ ಪ್ರಚಾರ ನಡೆಸಿ, ಅವರು ಮಾತನಾಡಿದರು. ಕಾಂಗ್ರೆಸ್ ಅಭ್ಯರ್ಥಿ ಕೆ. ರಾಜಶೇಖರ್ ಹಿಟ್ನಾಳ ಅವರು ಎರಡು ಬಾರಿ ಜಿಪಂ ಅಧ್ಯಕ್ಷರಾಗಿ ಯಾವುದೇ ಲೋಪವಿಲ್ಲದ ಆಡಳಿತ ನೀಡಿದ ಅನುಭವವಿದೆ. ಜನರೊಂದಿಗೆ ಬೆರೆಯುವ ಮನಸ್ಸಿದೆ. ಅಣ್ಣ ಶಾಸಕರಾಗಿದ್ದಾರೆ. ಕುಟುಂಬಕ್ಕೆ ತೀರಾ ಆಪ್ತರಾಗಿರುವ ಸಿದ್ದರಾಮಯ್ಯ ಅವರಿದ್ದಾರೆ. ಆದ್ದರಿಂದ ಕೊಪ್ಪಳ ಲೋಕಸಭೆ ವ್ಯಾಪ್ತಿಯ ಎಂಟು ವಿಧಾನಸಭೆ ಕ್ಷೇತ್ರಗಳಲ್ಲಿ ಆರು ಶಾಸಕರು ಕಾಂಗ್ರೆಸ್‌ನವರಾಗಿದ್ದು, ಉಳಿದ ಎರಡು ಕಡೆಗೂ ಕಾಂಗ್ರೆಸ್ ಬಲವಿದೆ. ಒಟ್ಟಾರೆಯಾಗಿ ಒಂದು ಲಕ್ಷಕ್ಕೂ ಅಧಿಕ ಮತಗಳ ಅಂತರದಲ್ಲಿ ಗೆಲ್ಲುವ ಎಲ್ಲ ಸಾಧ್ಯತೆಗಳಿವೆ ಎಂದು ಹೇಳಿದರು.ಗ್ಯಾರಂಟಿ ಒಂದೇ ಕಾಂಗ್ರೆಸ್ ಗೆಲುವಿಗೆ ಕಾರಣ ಎನ್ನುವ ರೀತಿಯಲ್ಲಿ ಜನರಲ್ಲಿ ತಪ್ಪು ಭಾವನೆ ಮೂಡುವಂತೆ ಮಾಡುತ್ತಿದ್ದಾರೆ. ಬಿಜೆಪಿಯವರು ನಾಚಿಕೆ ಇಲ್ಲದೇ ಸುಳ್ಳು ಜಾಹೀರಾತುಗಳನ್ನು ಪ್ರಕಟಿಸಿ ಜನರ ದಾರಿ ತಪ್ಪಿಸುತ್ತಿದ್ದು, ಚುನಾವಣೆ ಆಯೋಗ ಸುಮ್ಮನೇ ಕುಳಿತಿರುವುದು ಸರಿಯಲ್ಲ, ಪ್ರಜಾಪ್ರಭುತ್ವ ವ್ಯವಸ್ಥೆಯೇ ಸಮಸ್ಯೆಯ ಸುಳಿಯಲ್ಲಿದೆ ಎಂದು ಹೇಳಿದರು.

ಪ್ರಧಾನಿ ಮೋದಿ, ಅಮಿತ್ ಶಾ ಸೇರಿದಂತೆ ಎಲ್ಲರೂ ಸುಳ್ಳು ಹೇಳುವುದು, ಅದನ್ನೇ ಸತ್ಯ ಮಾಡಲು ಹೊರಡುವುದು ಅಸಹ್ಯ ತರಿಸಿದೆ. ಪ್ರಜ್ವಲ್ ರೇವಣ್ಣ ಕೇಸ್ ಕಾಂಗ್ರೆಸ್ ರಾಜಕೀಯಕ್ಕೆ ಬಳಸಿದೆ ಎನ್ನುತ್ತಿರುವ ಬಿಜೆಪಿಗರು ನೇಹಾ ಕೇಸಲ್ಲಿ ಹೇಗೆ ನಡೆದುಕೊಂಡರು ಎನ್ನುವುದನ್ನು ನೆನಪಿಸಿಕೊಳ್ಳಲಿ. ಸೋಲುವ ಭಯದಲ್ಲಿ ಶಾಸಕ ಜನಾರ್ದನ ರಡ್ಡಿ ಕಾಂಗ್ರೆಸ್ ಮಂತ್ರಿ, ಶಾಸಕರ ಬಗ್ಗೆ ಅಪಪ್ರಚಾರ ಮಾಡುತ್ತಿರುವುದು ಬಾಲಿಶತನ ಎಂದರು.

ಪಪಂ ಸದಸ್ಯ ಹೊನ್ನೂರಸಾಬ್ ಭೈರಾಪುರ, ಕಾಂಗ್ರೆಸ್ ಮುಖಂಡರಾದ ಜಾಫರ್ ತಟ್ಟಿ, ಶ್ರೀನಿವಾಸ ಪಂಡಿತ, ಅಂಬಿಕಾ ನಾಗರಾಳ, ಸುಮಂಗಲಾ ನಾಯಕ್, ರೂಪಾ ಬಂಗಾರಿ, ಶ್ರೀದೇವಿ ಶೆಟ್ಟರ್, ಸುಮಿತ್ರಾ ಕಲಾಲ್, ಮಲ್ಲಪ್ಪ ಮುರಡಿ, ಪ್ರಕಾಶ ಗುದಗಿ, ವಿಶ್ವನಾಥ ಅರಕೇರಿ, ವೀರಣ್ಣ ಟಾಂಗ, ಮೌಲಾಹುಸೇನ, ರಬ್ಬಾನಿ ಹುಳ್ಳಿ, ವಿಜಯಕುಮಾರ ಗುದಗಿ, ಜಾಫರ್, ಮಂಜುನಾಥ ಜಿ. ಗೊಂಡಬಾಳ ಇತರರು ಇದ್ದರು.