ಸಾರಾಂಶ
ರಾಣಿಬೆನ್ನೂರು: ಆಧುನಿಕ ಶಿಕ್ಷಣ ಪದ್ಧತಿಯಿಂದಾಗಿ ಮೌಲ್ಯಾಧಾರಿತ ಶಿಕ್ಷಣವಿಲ್ಲದೆ ವಿದ್ಯಾರ್ಥಿಗಳ ಮಾನಸಿಕ ಸ್ಥಿತಿ ಹಾಳಾಗಿದೆ ಎಂದು ವಿಧಾನಸಭೆ ಉಪಾಧ್ಯಕ್ಷ ಹಾಗೂ ಶಿಕ್ಷಣ ಸಂಸ್ಥೆ ಚೇರಮನ್ ರುದ್ರಪ್ಪ ಲಮಾಣಿ ಹೇಳಿದರು. ನಗರದ ಬಿಎಜೆಎಸ್‌ಎಸ್ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಭೂಗೋಳಶಾಸ್ತ್ರದ ಒಂದು ದಿನದ ಕಾರ್ಯಾಗಾರ ಹಾಗೂ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಹಿರಿಯರಾಗಿ ಕಿರಿಯರನ್ನು ಆಕರ್ಷಿಸುವ ಶಕ್ತಿ ನಮ್ಮಲ್ಲಿದ್ದರೆ ಮಾತ್ರ ಅವರು ನಮ್ಮ ಆದರ್ಶಗಳನ್ನು ಪಾಲಿಸಲು ಮುಂದಾಗುತ್ತಾರೆ. ವಿದ್ಯಾರ್ಥಿಗಳು ತಮ್ಮ ಕರ್ತವ್ಯಗಳನ್ನು ಮರೆಯದೆ ಪಾಲಿಸಿರಿ ತಂದೆ,ತಾಯಿ, ಗುರು ಹಿರಿಯರಿಗೆ ಗೌರವ ನೀಡಿದಾಗ ಸಮಾಜದಲ್ಲಿ ಉತ್ತಮ ಬದುಕು ಪ್ರಾಪ್ತವಾಗುತ್ತದೆ ಎಂದರು. ಸನ್ಮಾನ ಸ್ವೀಕರಿಸಿದ ಸಂಪನ್ಮೂಲ ವ್ಯಕ್ತಿ ಪ್ರೊ. ನಾಗರಾಜ ಎಚ್. ಮಾತನಾಡಿ, ಭೂಗೋಳಶಾಸ್ತ್ರದ ಇತಿಹಾಸ ಮತ್ತು ಮೂಲ ಪರಿಕಲ್ಪನೆಗಳನ್ನು ಇಂದಿನ ವಿದ್ಯಾರ್ಥಿಗಳಿಗೆ ತಿಳಿಯಪಡಿಸುವುದು ಬಹಳ ಮುಖ್ಯವಾದ ವಿಷಯ ವಸ್ತುವಾಗಿದೆ. ಶಿಕ್ಷಣವೊಂದಿದ್ದರೆ ಜೀವನದಲ್ಲಿ ಯಾವುದೇ ಸಮಸ್ಯೆಗಳನ್ನು ಎದುರಿಸಿ ಯಶಸ್ಸು ಸಾಧಿಸಬಹುದು ಎಂದರು.ಬಿಎಜೆಸ್‌ಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಡಾ. ಆರ್.ಎಂ. ಕುಬೇರಪ್ಪ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಣ ಸಂಸ್ಥೆಯ ಶೈಕ್ಷಣಿಕ ಸಲಹೆಗಾರ ಪ್ರೊ.ಎಚ್.ಎ. ಭಿಕ್ಷಾವರ್ತಿಮಠ, ಪ್ರಾ. ಡಾ. ಸುರೇಶ ಬಣಕಾರ, ರಾಜೀವ್ ಎಂ, ದೇವರಾಜ ಹಂಚಿನಮನಿ, ಡಾ. ಎಚ್.ಐ. ಬ್ಯಾಡಗಿ, ದೇವರಾಜ ಹಂಚಿನಮನಿ, ಕೆ.ಕೆ.ಹಾವಿನಾಳ, ಎಸ್.ಕೆ. ಜಡೇದ, ಆರ್. ಗೋಪಾಲರಡ್ಡಿ, ಶ್ರೀಕಾಂತ ಕುಂಚೂರ, ಡಾ. ಪುಷ್ಪಾಂಜಲಿ ಕಾಂಬಳೆ, ಬೀರಪ್ಪ ಲಮಾಣಿ, ಎಚ್. ಶಿವಾನಂದ, ನಾಗರತ್ನಾ ಉಪಸ್ಥಿತರಿದ್ದರು.