ಹಲ್ಲೆ ಪ್ರಕರಣ ಸಂಬಂಧ ದೂರು ಕೊಡಲು ಬಂದ ಮಹಿಳೆಯ ದೂರು ಪಡೆಯಲು ನೆಲೋಗಿ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿ ವಿಳಂಬ ಧೋರಣೆ ಖಂಡಿಸಿ ಮಹಿಳೆ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ ಘಟನೆ ತಾಲುಕಿನ ನೆಲೋಗಿ ಠಾಣೆಯಲ್ಲಿ ನಡೆದಿದೆ.
ಕನ್ನಡಪ್ರಭ ವಾರ್ತೆ ಜೇವರ್ಗಿ
ಹಲ್ಲೆ ಪ್ರಕರಣ ಸಂಬಂಧ ದೂರು ಕೊಡಲು ಬಂದ ಮಹಿಳೆಯ ದೂರು ಪಡೆಯಲು ನೆಲೋಗಿ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿ ವಿಳಂಬ ಧೋರಣೆ ಖಂಡಿಸಿ ಮಹಿಳೆ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ ಘಟನೆ ತಾಲುಕಿನ ನೆಲೋಗಿ ಠಾಣೆಯಲ್ಲಿ ನಡೆದಿದೆ.ಪೊಲೀಸ್ ಅಧಿಕಾರಿಗಳ ವಿಳಂಬ ಹಾಗೂ ಬೇಜವಾಬ್ದಾರಿ ನೀತಿ ಖಂಡಿಸಿ, ನೆಲೋಗಿ ಠಾಣೆಯ ಎದುರು ವಿವಿಧ ಸಂಘಟನೆ ಹಾಗೂ ಸಮಾಜದ ಮುಖಂಡರು ಹಾಗೂ ಕಾರ್ಯಕರ್ತರು ಪೊಲೀಸ್ ಇಲಾಖೆಯ ಕಾರ್ಯವೈಖರಿ ಖಂಡಿಸಿ ಠಾಣೆ ಎದುರು ಪ್ರತಿಭಟನೆ ನಡೆಸಿ ನೂಂದ ಮಹಿಳೆಗೆ ನ್ಯಾಯ ಕೊಡಿಸುವಲ್ಲಿ ವಿಫಲರಾದ ಇಲಾಖೆ ಅಧಿಕಾರಿ ಹಾಗೂ ಸಿಬಂದಿ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ಘಟನೆ ವಿವಿರ: ಕಳೆದ ಶುಕ್ರವಾರ ರೆವಮ್ಮ. ಭಿಮರಾಯ ಗಡೆದ್ ಅವರು ತಮ್ಮ ಮಗನೊಂದಿಗೆ ಯಾತನೂರ ಗ್ರಾಮದಿಂದ ಜೆರಟಗಿಗೆ ಗ್ರಾಮಕ್ಕೆದ್ವಿಚಕ್ರ ವಾಹನದಲ್ಲಿ ಬಟ್ಟೆ ಖರೀದಿಗಾಗಿ ತೆರಳುತ್ತಿರುವಾಗ, ತಮ್ಮನ್ನು ನೋಡಿ ನಗುತ್ತಿದ್ದಾರೆಂದು ಕೆಲವರು ಆರೋಪಿಸಿ, ತಾಯಿ ರೆವಮ್ಮ ಹಾಗೂ ಮಗ ನಾಗರಾಜ ಮೇಲೆ ಕೆಲವರು ಹಲ್ಲೆ ಮಾಡಿದ್ದಾರೆ. ಗಾಯಾಳು ತಾಯಿ, ಮಗ ನೆಲೋಗಿ ಠಾಣೆಗೆ ಸಂಜೆ ದೂರು ನೀಡಲು ತಾಯಿ ಮಗ ತೆರಳಿದ್ದರು.ಸಂಜೆಯಿಂದ ತಡರಾತ್ರಿ ೨ರವರೆಗೂ ಪ್ರಕರಣ ದಾಖಲಿಸಲು ಪೊಲೀಸರು ಹಿಂದೇಟು ಹಾಕಿ, ಶನಿವಾರ ಬೆಳಿಗ್ಗೆ ಬರಲು ಪೊಲೀಸ್ ಸಿಬ್ಬಂದಿ ತಿಳಿಸಿ ಪೊಲೀಸ್ ಕಚೇರಿಯಿಂದ ನೊಂದು ಹಲ್ಲೆಗೊಳಗಾದ ತಾಯಿ ಮಗನನ್ನು ಹೊರಕಾಕಿದ್ದಾರೆ.
ಮಧ್ಯರಾತ್ರಿ ಗ್ರಾಮಕ್ಕೆ ತೆರಳಲಾಗದ ಅವರು ನೆಲೋಗಿ ದೇವಸ್ಥಾನದಲ್ಲಿ ತಂಗಿ ಬೆಳಿಗ್ಗೆ ನ್ಯಾಯಕ್ಕಾಗಿ ಠಾಣೆಯ ಮೆಟ್ಟಿಲೇರಿ ಅಂಗಲಾಚಿದ್ದಾರೆ.ಬೆಸತ್ತ ಮಹಿಳೆ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ.
ಮಹಿಳೆ ಸ್ಥಿತಿ ಗಂಭಿರವಾಗಿದ್ದು, ಕಲಬುರ್ಗಿ ಖಾಸಗಿ ಆಸ್ಪತ್ರೆಯಲ್ಲಿ ಸಾವು ಬದುಕಿನೊಡನೆ ಹೋರಾಟ ನಡೆಸುತ್ತಿದ್ದಾರೆ.ಘಟನೆಯನ್ನು ಖಂಡಿಸಿ ವಿವಿಧ ಸಂಘಟನೆಗಳು ಠಾಣೆ ಎದುರು ಪ್ರತಿಭಟನೆ ನಡೆಸಿದ್ದು, ಘಟನೆಗೆ ಕಾರಣರಾದ ನೆಲೋಗಿ ಪಿಎಸ್‌ಐ ಅವರನ್ನು ಅಮಾನತ್ತುಗೊಳಿಸಬೇಕು, ಪ್ರಕರಣ ದಾಖಲಿಸಿ, ಹಲ್ಲೆ ಮಾಡಿದ ಆರೋಪಿಗಳನ್ನು ಬಂಧಿಸಬೇಕೆಂದು ಒತ್ತಾಯಿಸಿದ್ದಾರೆ.
ಶೋಭಾ ಬಾಣಿ, ಶಂಕರ ಕಟ್ಟಿಸಂಗಾವಿ, ಲಚ್ಚಪ್ಪ ಜಮಾದಾರ,ಭಗವಂತರಾಯ ಬೆಣ್ಣೂರ, ಭೀಮರಾಯ ಜನಿವಾರ, ಬೈಲಪ್ಪ ನೆಲೋಗಿ, ಶಿವಪುತ್ರಪ್ಪ ಕೊಣಿನ, ಬಾಬು ಬಿ ಪಾಟೀ, ಪರಮೇಶ್ವರ ಕೌಲಗಿ, ಮಹಾಂತಪ್ಪ, ನಿಂಗು, ಗಿರೀಶ ತುಂಬಗಿ, ಮೈಲಾರಿ ಗೂಡೂರ ಪಾಲ್ಗೊಂಡಿದ್ದರು.