ರಸ್ತೆ ದುರಸ್ತಿ ಕಾರ್ಯದಲ್ಲಿ ಪುರಸಭೆ, ತಾಲೂಕು ಆಡಳಿತ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಮಹಿಳೆ ಬಲಿಯಾಗಿದ್ದು, ನತದೃಷ್ಟ ಮಹಿಳೆಯ ಸಾವಿನ ಹೊಣೆಯಾರು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ಹೊಳೆನರಸೀಪುರ:ಪಟ್ಟಣದ ಪುರಸಭೆ ವ್ಯಾಪ್ತಿಯ ಸೂರನಹಳ್ಳಿ ಸಮೀಪದ ಹೆದ್ದಾರಿಯಲ್ಲಿ ರಸ್ತೆಗುಂಡಿಗೆ ದ್ವಿಚಕ್ರ ವಾಹನ ಬಿದ್ದ ಸಂದರ್ಭದಲ್ಲಿ ರಸ್ತೆ ಮೇಲೆ ಬಿದ್ದ ಜಯಂತಿ (42) ಎಂಬ ಮಹಿಳೆಯ ತಲೆ ಮೇಲೆ ಲಾರಿಯ ಚಕ್ರ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ರಸ್ತೆ ದುರಸ್ತಿ ಕಾರ್ಯದಲ್ಲಿ ಪುರಸಭೆ, ತಾಲೂಕು ಆಡಳಿತ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಮಹಿಳೆ ಬಲಿಯಾಗಿದ್ದು, ನತದೃಷ್ಟ ಮಹಿಳೆಯ ಸಾವಿನ ಹೊಣೆಯಾರು ಎಂದು ಸಾರ್ವಜನಿಕರು ಆಕ್ರೋಶದಿಂದ ಪ್ರಶ್ನಿಸಿ, ಸೂಕ್ತ ಪರಿಹಾರ ನೀಡಲು ಒತ್ತಾಯಿಸಿದ್ದಾರೆ.ತಾ. ತಿರುಮಲಪುರ ಗ್ರಾಮದ ತ್ಯಾಗರಾಜು ಹಾಗೂ ಅವರ ಪತ್ನಿ ಜಯಂತಿ ಅವರು ಶನಿವಾರ ಸಂಜೆ ಗುಂಡಿಮಯ ಆಗಿರುವ ರಸ್ತೆಯಲ್ಲಿ ತಮ್ಮ ದ್ವಿಚಕ್ರ ವಾಹನದಲ್ಲಿ ಸೂರನಹಳ್ಳಿ ಸಮೀಪ ನಿಧಾನವಾಗಿ ತೆರಳುತ್ತಿದ್ದಾಗ ರಸ್ತೆಗುಂಡಿಗೆ ಇಳಿದ ದ್ವಿಚಕ್ರ ವಾಹನ ಬಿದ್ದ ಸಂದರ್ಭದಲ್ಲಿ ಲಾರಿಯ ಹಿಂಬದಿಯ ಚಕ್ರ ಜಯಂತಿ ಅವರ ತಲೆ ಮೇಲೆ ಹರಿದು ದುರ್ಘಟನೆ ನಡೆದಿದೆ.