ಕಾಡಾನೆ ದಾಳಿಗೆ ಕಾರ್ಮಿಕ ಮಹಿಳೆ ಸಾವು

| Published : Jul 25 2025, 12:30 AM IST

ಸಾರಾಂಶ

ಬಾಳೆಹೊನ್ನೂರುಕಾಡಾನೆ ದಾಳಿಗೆ ಕೂಲಿ ಕಾರ್ಮಿಕ ಮಹಿಳೆ ಧಾರುಣವಾಗಿ ಬಲಿಯಾದ ಘಟನೆ ಎನ್.ಆರ್.ಪುರ ತಾಲೂಕಿನ ಬನ್ನೂರು ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದಿದೆ.

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಕಾಡಾನೆ ದಾಳಿಗೆ ಕೂಲಿ ಕಾರ್ಮಿಕ ಮಹಿಳೆ ಧಾರುಣವಾಗಿ ಬಲಿಯಾದ ಘಟನೆ ಎನ್.ಆರ್.ಪುರ ತಾಲೂಕಿನ ಬನ್ನೂರು ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದಿದೆ. ದಾವಣಗೆರೆ ಜಿಲ್ಲೆಯ ಹೊನ್ನಾಳಿ ಮೂಲದ ಅನಿತಾ (25) ಮೃತಪಟ್ಟ ಮಹಿಳೆ. ಬನ್ನೂರು ಗ್ರಾಮದ ಶಶಿಶೇಖರ್ ಅವರ ತೋಟಕ್ಕೆ ಈಕೆ ಕೂಲಿ ಕೆಲಸ ಅರಸಿ ತನ್ನ ಪತಿಯೊಂದಿಗೆ ಬುಧವಾರ ರಾತ್ರಿ ಬೇರೊಂದು ತೋಟದಿಂದ ಆಟೋ ಮೂಲಕ ಬಂದಿದ್ದಾರೆ. ಆಟೋದಲ್ಲಿದ್ದ ಲಗೇಜನ್ನು ಇಳಿಸಿ ಒಂದು ಬ್ಯಾಗನ್ನು ಈಕೆ ಕೂಲಿ ಲೈನ್‌ನ ಮನೆಯೊಳಗೆ ಇಟ್ಟು, ಇನ್ನೊಂದು ಬ್ಯಾಗನ್ನು ಮನೆಯೊಳಗೆ ಕೊಂಡೊಯ್ಯಲು ಹೊರ ಹೋದ ವೇಳೆ ತೋಟದ ಬದಿಯಲ್ಲಿ ನಿಂತಿದ್ದ ಕಾಡಾನೆ ಸೊಂಡಿಲಿನ ಮೂಲಕ ಈಕೆಯನ್ನು ತನ್ನತ್ತ ಎಳೆದುಕೊಂಡು ದಾಳಿ ಮಾಡಿದೆ.ತೀವ್ರ ಅಸ್ವಸ್ಥವಾಗಿದ್ದ ಈಕೆಯನ್ನು ಕೂಡಲೇ ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆ ತಂದು ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ಕರೆದೊಯ್ಯುವ ವೇಳೆ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಘಟನೆ ಕುರಿತು ಬಾಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.೨೪ಬಿಹೆಚ್‌ಆರ್ ೧:

ಆನೆ ದಾಳಿಗೆ ಮೃತಪಟ್ಟ ಅನಿತಾ