ಸಾರಾಂಶ
ಹನೂರು: ಮಹಿಳೆಯರು ಸಾವಲಂಬಿ ಬದುಕು ಕಟ್ಟಿಕೊಳ್ಳಲು ಸರ್ಕಾರದ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹನೂರು ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಅರ್. ಮಂಜುನಾಥ್ ತಿಳಿಸಿದರು.
ಪಟ್ಟಣದ ಲೋಕೋಪಯೋಗಿ ಇಲಾಖೆ ವಸತಿಗೃಹ ಆವರಣದಲ್ಲಿ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ವತಿಯಿಂದ 36 ಮಹಿಳಾ ಫಲಾನುಭವಿಗಳಿಗೆ ಹೊಲಿಗೆಯಂತ್ರ ವಿತರಣೆ ಮಾಡಿ ಅವರು ಮಾತನಾಡಿದರು. ಮಹಿಳೆಯರು ದೈನಂದಿನ ಸಾಂಸಾರಿಕ ಬದುಕಿನ ಹಲವು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಈ ನಡುವೆ ಟೈಲರಿಂಗ್ ವೃತ್ತಿಯ ತರಬೇತಿ ಪಡೆದುಕೊಂಡು ವೃತ್ತಿ ಜೀವನ ನಡೆಸುವ ನಿಮ್ಮೆಲ್ಲರನ್ನು ಗುರುತಿಸಿ ಸರ್ಕಾರ ಹೊಲಿಗೆಯಂತ್ರ ನೀಡುತ್ತಿದೆ. ಇದರಿಂದ ನಿಮ್ಮ ಜೀವನ ಸಮೃದ್ಧಿಯಾಗಿ ಎಂದು ಆಶಾಭಾವನೆ ವ್ಯಕ್ತಪಡಿಸುತ್ತೇನೆ ಎಂದು ತಿಳಿಸಿದರು. ಸ್ವಜಾತಿ ಪ್ರೇಮ ಮೆರೆದ ಶಾಸಕ ಮಂಜುನಾಥ್:ಡಿ ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಕ್ಕೆ ನೂರು ವಿಧಾನಸಭಾ ಕ್ಷೇತ್ರದ ವಿವಿಧ ಸಮುದಾಯಗಳ ಮಹಿಳೆಯರು ಹೊಲಿಗೆ ಯಂತ್ರಕ್ಕಾಗಿ 180 ಅರ್ಜಿಗಳನ್ನು ಹಾಕಿದ್ದಾರೆ. ಆದರೆ ಶಾಸಕ ಎಂ ಆರ್ ಮಂಜುನಾಥ್ ರವರು ತಮ್ಮ ಸಮಾಜದ 20 ಮಹಿಳೆಯರಿಗೆ, ವನ್ನಿಕುಲ ಕ್ಷತ್ರಿಯದ 9 ಬಣಜಿಗ 3, ದೇವಾಂಗ ಸಮಾಜದವರಿಗೆ 3 ಹಾಗೂ 24 ಮನೆ ತೆಲುಗು ಶೆಟ್ಟರಿಗೆ 1 ಸೇರಿದಂತೆ 36 ಜನರಿಗೆ ಹೊಲಿಗೆ ಯಂತ್ರ ವಿತರಿಸಿದ್ದಾರೆ. ಸರ್ಕಾರ ಅಬಲೆ, ವಿಧವೆಯರಿಗೆ, ಮದುವೆಯಾಗದೆ ಮನೆಯಲ್ಲಿರುವ ಮಹಿಳೆಯರಿಗೆ ಆರ್ಥಿಕವಾಗಿ ಸದೃಢವಾಗಲು ಈ ಯೋಜನೆ ಜಾರಿಗೆ ತಂದಿದೆ. ಆದರೆ ಶಾಸಕರು ತಮ್ಮ ಸಮಾಜದ ಉಳ್ಳವರಿಗೆ ಹೊಲಿಗೆ ಯಂತ್ರ ವಿತರಿಸುವುದಕ್ಕೆ ಪ್ರಜ್ಞಾವಂತ ನಾಗರಿಕರು ಆಕ್ರೋಶ ಹೊರಹಾಕಿದ್ದಾರೆ. ಕ್ಷೇತ್ರದಲ್ಲಿ ಸಾವಿರಾರು ಬಡ ಮಹಿಳೆಯರು ಇದ್ದಾರೆ ಅಂತಹ ಬಡ ಮಹಿಳೆಯರನ್ನು ಗುರುತಿಸಿ ಹೊಲಿಗೆ ಯಂತ್ರಗಳನ್ನು ವಿತರಿಸಿದ್ದರೆ ಅವರ ಹೆಸರು ಹೇಳಿಕೊಂಡು ಜೀವನ ನಡೆಸುತ್ತಿದ್ದರು. ಇನ್ನು ಮುಂದಾದರೂ ಕ್ಷೇತ್ರದ ಶಾಸಕರು ಸರ್ಕಾರದ ಸೌಲಭ್ಯಗಳನ್ನು ಎಲ್ಲಾ ಸಮಾಜದರಿಗೂ ಸಮಾನವಾಗಿ ವಿತರಿಸಲಿ ಎಂದು ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕಿ ಶೋಭಾ, ಹಾಗೂ ಫಲಾನುಭವಿಗಳು ಉಪಸ್ಥಿತರಿದ್ದರು.