ರಾಜ್ಯದಲ್ಲೇ ವಿಶೇಷವಾಗಿ ಮಹಿಳೆಯರೇ ರಥ ಎಳೆಯುವ ಶ್ರೀ ಗುರು ಕರಿಬಸವೇಶ್ವರ ಸ್ವಾಮಿ ರಥೋತ್ಸವ ನಗರದ ಹೊರವಲಯದ ಯರಗುಂಟೆ ಗ್ರಾಮದಲ್ಲಿ ಡಿ.14ರಂದು ಬೆಳಗ್ಗೆ ನಡೆಯಲಿದೆ ಎಂದು ಶ್ರೀ ಗುರು ಕರಿಬಸವೇಶ್ವರ ಮಠದ ಶ್ರೀ ಪರಮೇಶ್ವರ ಸ್ವಾಮೀಜಿ ನುಡಿದಿದ್ದಾರೆ.

- ಇಂದು, ವಿವಿಧ ಧಾರ್ಮಿಕ ಆಚರಣೆಗಳು-ಶ್ರೀ ಪರಮೇಶ್ವರ ಸ್ವಾಮೀಜಿ - - -

ಕನ್ನಡಪ್ರಭ ವಾರ್ತೆ ದಾವಣಗೆರೆ ರಾಜ್ಯದಲ್ಲೇ ವಿಶೇಷವಾಗಿ ಮಹಿಳೆಯರೇ ರಥ ಎಳೆಯುವ ಶ್ರೀ ಗುರು ಕರಿಬಸವೇಶ್ವರ ಸ್ವಾಮಿ ರಥೋತ್ಸವ ನಗರದ ಹೊರವಲಯದ ಯರಗುಂಟೆ ಗ್ರಾಮದಲ್ಲಿ ಡಿ.14ರಂದು ಬೆಳಗ್ಗೆ ನಡೆಯಲಿದೆ ಎಂದು ಶ್ರೀ ಗುರು ಕರಿಬಸವೇಶ್ವರ ಮಠದ ಶ್ರೀ ಪರಮೇಶ್ವರ ಸ್ವಾಮೀಜಿ ನುಡಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಥೋತ್ಸವ ಅಂಗವಾಗಿ ಡಿ.13ರ ಬೆಳಗಿನ ಜಾವ 5ಕ್ಕೆ ಶ್ರೀ ವಿನಾಯಕ ಸ್ವಾಮಿ ಪೂಜೆ, ಧ್ವಜಾರೋಹಣ ನೆರವೇರಲಿದೆ. ಬೆಳಗ್ಗೆ 6 ಗಂಟೆಗೆ ಮಹಾಗಣಪತಿ ಪೂಜೆ, ನವಗ್ರಹ ಪೂಜೆ, ರುದ್ರಹೋಮ, ಗೋ ಪೂಜೆ, ಮಹಾ ಮಂಗಳಾರತಿ ನಡೆಯಲಿದೆ ಎಂದರು.

ದೇ ಮಧ್ಯಾಹ್ನ 12.45ಕ್ಕೆ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯವಿದೆ. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಲಿಂಗೈಕ್ಯ ಶ್ರೀಮತಿ ಚಂದ್ರಮ್ಮ, ಲಿಂಗೈಕ್ಯ ಶ್ರೀ ಚನ್ನಯ್ಯ ಕರೇಕಟ್ಟೆ ಸ್ಮರಣಾರ್ಥ ಶ್ರೀ ಗುರು ಕರಿಬಸವೇಶ್ವರ ಸ್ವಾಮಿ ಗದ್ದಿಗೆ ಮಠದಿಂದ ಸಮಾಜ ಸೇವಾರತ್ನ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಹೇಳಿದರು.

ಶ್ರೀ ಕ್ಷೇತ್ರ ಉಜ್ಜಯಿನಿ ಪೀಠದ ಜಗದ್ಗುರು ಶ್ರೀ ಸಿದ್ಧಲಿಂಗ ರಾಜದೇಶಿ ಕೇಂದ್ರ ಶಿವಾಚಾರ್ಯ ಭಗವತ್ಪಾದ ಸ್ವಾಮಿಗಳ ಸಾನ್ನಿಧ್ಯದಲ್ಲಿ ಡಿ.14ರಂದು ಬೆಳಗ್ಗೆ 10 ಗಂಟೆಗೆ ಧರ್ಮಸಭೆ ಸೇರಿದಂತೆ ಥಾರ್ಮಿಕ ಕಾರ್ಯ ನಡೆಯಲಿವೆ. ವಿವಿಧ ಮಠಾಧೀಶರು ಭಾಗವಹಿಸುವರು. ಅದೇ ಮಧ್ಯಾಹ್ನ 1 ಗಂಟೆಗೆ ಮಹಿಳೆಯರಿಂದ ಶ್ರೀ ಸ್ವಾಮಿಯ ಹೂವಿನ ರಥೋತ್ಸವ ಪ್ರತಿ ವರ್ಷದಂತೆ ನೆರವೇರಲಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶ್ರೀಮಠದ ಸೇವಾ ಸಮಿತಿ ಅಧ್ಯಕ್ಷ ಟಿ.ಆರ್.ವಿಜಯಕುಮಾರ, ಉಪಾಧ್ಯಕ್ಷ ಎಂ.ಮಂಜುನಾಥ, ಖಜಾಂಚಿ ಬಿ.ಲೋಹಿತ್, ಎನ್.ಎಸ್‌.ರಾಜು, ಎಸ್.ಪಿ. ರಾಕೇಶ, ಕರಿಬಸಪ್ಪ, ಮಂಜುನಾಥ ಇತರರು ಇದ್ದರು.

- - -

-12ಕೆಡಿವಿಜಿ1:

ದಾವಣಗೆರೆಯಲ್ಲಿ ಶುಕ್ರವಾರ ಯರಗುಂಟೆ ಶ್ರೀ ಗುರು ಕರಿಬಸವೇಶ್ವರ ಮಠದ ಶ್ರೀ ಪರಮೇಶ್ವರ ಸ್ವಾಮೀಜಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.